ತೆಂಕ ಮಿಜಾರು ಗ್ರಾಮದ ಪಡೀಲು ಎಂಬಲ್ಲಿ ಯುಕೆಟಿಎಲ್ ಕಂಪನಿಯವರು ರೈತರಿಗೆ ಸಂಪೂರ್ಣ ಪರಿಹಾರದ ಮೊತ್ತ ಪಾವತಿಸದೆ ಟವರ್ ನಿರ್ಮಾಣ ಕಾರ್ಯ

ಜಾಹೀರಾತು/Advertisment
ಜಾಹೀರಾತು/Advertisment

 ತೆಂಕ ಮಿಜಾರು ಗ್ರಾಮದ ಪಡೀಲು ಎಂಬಲ್ಲಿ ಯುಕೆಟಿಎಲ್ ಕಂಪನಿಯವರು ರೈತರಿಗೆ ಸಂಪೂರ್ಣ ಪರಿಹಾರದ ಮೊತ್ತ ಪಾವತಿಸದೆ ಟವರ್ ನಿರ್ಮಾಣ ಕಾರ್ಯ ಮಾಡಲು ಬಂದ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸ್ಥಳೀಯ ಕಿಸಾನ್ ಕರೆ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ರೈ,ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ರೈ, ನೇಮಿರಾಜ ಹಾಗೂ ಮತ್ತಿತರ ಪ್ರಮುಖರು ಸೇರಿ ಪ್ರತಿಭಟನೆಯನ್ನು ನಡೆಸಿದರು.


      ರೈತರಿಗೆ ಪರಿಹಾರ ಸಿಗದೇ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಂತಿ ಪ್ರಸಾದ್ ಹೆಗ್ಡೆ ತಿಳಿಸಿದರು.ಮತ್ತು ಯು ಕೆ ಟಿ ಎಲ್ ಕಂಪನಿಯ ಕೆಲಸಗಾರರನ್ನು ಅವರ ಸ್ವತ್ತುಗಳ ಸಮೇತ ವಾಪಸ್ ಕಳುಹಿಸಲಾಗಿದೆ.ಮುಂದಿನ ದಿನಗಳಲ್ಲಿ ರೈತರಿಗೆ ಪರಿಹಾರ ನೀಡದೇ ಕಾನೂನುಬಾಹಿರವಾಗಿ,ಬಲಾತ್ಕಾರದಿಂದ ಅವರ ಜಾಗವನ್ನು ಪ್ರವೇಶಿಸಿದಲ್ಲಿ ಹೋರಾಟವನ್ನು ನಡೆಸುತ್ತೇವೆಂಬ ಎಚ್ಚರಿಕೆಯನ್ನು ಕಂಪನಿಯ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಶಾಂತಿ ಪ್ರಸಾದ್ ಹೆಗ್ಡೆ ನೀಡಿರುತ್ತಾರೆ.

ರೈತರು ನಡೆಸುತ್ತಿದ್ದ ಪ್ರತಿಭಟನಾ ಸಂದರ್ಭದಲ್ಲಿ ಮೂಡಬಿದ್ರೆ ಪೊಲೀಸರು ಆಗಮಿಸಿದ್ದು ರೈತರು,ಕಂಪನಿಯವರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು ರೈತರ ಪ್ರತಿಭಟನೆಗೆ ಮಣಿದು ತಮ್ಮ ಸರಕು ಸಾಮಗ್ರಿಗಳೊಂದಿಗೆ ಕಂಪೆನಿಯವರು ವಾಪಸು ಹೋಗಿರುತ್ತಾರೆ. ಇದು ರೈತರಿಗೆ ಸಂದ ಗೆಲುವಾಗಿದೆ. 

      ಈ ಸಂದರ್ಭದಲ್ಲಿ ಪ್ರವೀಣ್ ಭಂಡಾರಿ,ಶಿವಕುಮಾರ್ ಉಪಸ್ಥಿತರಿದ್ದರು.

Post a Comment

0 Comments