ಬೈಕ್ ಗೆ ಲಾರಿ ಢಿಕ್ಕಿ : ದ್ವಿಚಕ್ರ ಸವಾರ ಮೃತ್ಯು

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಬೈಕ್ ಗೆ ಲಾರಿ ಢಿಕ್ಕಿ : ದ್ವಿಚಕ್ರ ಸವಾರ ಮೃತ್ಯು
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಡ್ಡೋಡಿಯಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರೊಬ್ಬರು ಸ್ಥಳದಲ್ಲೇ ಮೃತಪಟ್ಟ ದುಘ೯ಟನೆ ನಡೆದಿದೆ.

ಮೃತರು ಉಡುಪಿ ಮೂಲದವರಾಗಿದ್ದು, ಅವರ ಬಳಿ ದೊರೆತ ಚಾಲನಾ ಪರವಾನಗಿಯಲ್ಲಿ ರಂಜಿತ್ ಕುಮಾರ್ ಎಂದು ಹೆಸರು ಇರುವುದಾಗಿ ತಿಳಿದುಬಂದಿದೆ.

ಗ್ರಾಮದ ಕಾನ ಪ್ರದೇಶದಲ್ಲಿ ದನ ಅಡ್ಡ ಬಂದ ಹಿನ್ನೆಲೆಯಲ್ಲಿ ಬೈಕ್ ಸವಾರನು ತಕ್ಷಣ ವಾಹನವನ್ನು ಇನ್ನೊಂದು ಬದಿಗೆ ತಿರುಗಿಸಲು ಪ್ರಯತ್ನಿಸಿದ ವೇಳೆ ಎದುರಿನಿಂದ ಬರುತ್ತಿದ್ದ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಲಾರಿ ಬೈಕ್ ಸಹಿತ ಸವಾರನನ್ನು ಕೆಲವು ಮೀಟರ್ ದೂರ ಎಳೆದೊಯ್ದಿದ್ದು, ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Post a Comment

0 Comments

Advertisement