ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಅಳಿಯೂರು ಇಲ್ಲಿನ ಗ್ರಾಹಕ ಸಂಘವು ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಅರಿವು ಮೂಡಿಸುವ ಸಲುವಾಗಿ "ಗ್ರಾಹಕರ ಹಕ್ಕುಗಳು ಹಾಗೂ ಜವಾಬ್ದಾರಿಗಳು" ಎಂಬ ವಿಷಯದ ಮೇಲೆ ಅತಿಥಿ ಉಪನ್ಯಾಸವನ್ನು ಹಮ್ಮಿಕೊಂಡಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಭುವನ ಜ್ಯೋತಿ ಕಾನೂನು ಮಹಾವಿದ್ಯಾಲಯದ ಸಂಚಾಲಕರು ಹಾಗೂ ಪ್ರಾಧ್ಯಾಪಕರಾಗಿರುವ ಪ್ರಶಾಂತ್ ಎನ್. ರವರು ಆಗಮಿಸಿದ್ದರು. ಅವರು ವಿದ್ಯಾರ್ಥಿಗಳಿಗೆ, ಗ್ರಾಹಕರಾಗಿ ಅವರು ನೆನಪಿನಲ್ಲಿಡಬೇಕಾದ ಅಂಶಗಳು, ಗ್ರಾಹಕರು ಯಾವ ರೀತಿ ಮೋಸ ಹೋಗಬಹುದು ಮತ್ತು ಗ್ರಾಹಕ ವೇದಿಕೆಯಿಂದ ಹೇಗೆ ಸಹಾಯವನ್ನು ಪಡೆಯಬಹುದು ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ರವೀಂದ್ರರವರು ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತ ಗ್ರಾಹಕರಾಗುವ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದವರನ್ನು ಮುಖ್ಯೋಪಾಧ್ಯಾಯರಾದ ಶ್ರೀಮತಿ ಪದ್ಮಿನಿ ಸ್ವಾಗತಿಸಿದರು. ಗ್ರಾಹಕ ಸಂಘದ ಸಂಚಾಲಕರಾದ ಡಾ.ಆನಿ ಡಿಂಪಲ್ ಕ್ಯಾಸ್ತಲಿನೊವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು. ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.


0 Comments