ಡ್ರಗ್ಸ್, ಆನ್ಲೈನ್ ಬೆಟ್ಟಿಂಗ್ ಗೆ ಬಲಿಯಾಗದಂತೆ ಅರಿವು ಮೂಡಿಸಿ : ವಕೀಲ ಶರತ್ ಶೆಟ್ಟಿ

ಜಾಹೀರಾತು/Advertisment
ಜಾಹೀರಾತು/Advertisment
ಡ್ರಗ್ಸ್, ಆನ್ಲೈನ್ ಬೆಟ್ಟಿಂಗ್ ಗೆ ಬಲಿಯಾಗದಂತೆ ಅರಿವು ಮೂಡಿಸಿ : ವಕೀಲ ಶರತ್ ಶೆಟ್ಟಿ
ಮೂಡುಬಿದಿರೆ : ಜಿಲ್ಲೆಯಲ್ಲಿ ಯುವಜನತೆ ಡ್ರಗ್ಸ್ ಗೆ, ಆನ್ ಲೈನ್ ಬೆಟ್ಟಿಂಗ್ ಬಲಿಯಾಗುತ್ತಿದ್ದು ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಜೇಸಿಐನಂತಹ ಸಂಸ್ಥೆಗಳು ಮಾಡುವುದು ಉತ್ತಮ ಎಂದು ವಕೀಲ ಶರತ್ ಡಿ. ಶೆಟ್ಟಿ ಹೇಳಿದರು. 
ಅವರು ಗುರುವಾರ ಸಂಜೆ ಸಮಾಜ ಮಂದಿರದಲ್ಲಿ ನಡೆದ ಜೇಸಿಐ ಮೂಡುಬಿದಿರೆ ತ್ರಿಭುವನ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 
  ಮನಿಟ್ರ್ಯಾಪ್, ಹನಿಟ್ರ್ಯಾಪ್, ಡಿಜಿಟಲ್ ಆರೆಸ್ಟ್ ಗಳಿಗೆ ಲಕ್ಷಾಂತರ ಮಂದಿ ವಿದ್ಯಾವಂತರೇ ಬಲಿಯಾಗುತ್ತಿರುವ ಬಗ್ಗೆ ತಿಳಿಸಿದ ಅವರು ಅಪರಿಚಿತ ವ್ಯಕ್ತಿಗಳಿಂದ ಬರುವ ವೀಡಿಯೋ ಕರೆಗಳ ಬಗ್ಗೆ ಎಚ್ಚರ ವಹಿಸಿ ಅತಿಯಾದರೆ ಎಲ್ಲದರಿಂದಲೂ ಅಪಾಯ ಎಂದ ಅವರು ನಾವು ಸರಕಾರಕ್ಕೆ ಕಟ್ಟುವಂತಹ ಆದಾಯ ತೆರಿಗೆಯನ್ನು ಪಾವತಿಸಿದರೆ ಮನಿಟ್ರ್ಯಾಪ್ ಗಳಿಗೆ ಹೆದರಬೇಕಾಗಿಲ್ಲ ಎಂದು ಹೇಳಿದರು.
 ಜೇಸಿಐ ವಲಯ 15ರ ಅಧ್ಯಕ್ಷ ಜೆಸಿಎಫ್ ಸಂತೋಷ್ ಶೆಟ್ಟಿ ನೂತನ ಅಧ್ಯಕ್ಷ ಸುಧಾಕರ ಶೆಟ್ಟಿ ಸಹಿತ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ ಒಗ್ಗಟ್ಟು, ದೂರದೃಷ್ಠಿ, ಪ್ರಾಮಾಣಿಕತೆ ಮತ್ತು ವಿಶ್ವಾಸ ಹಾಗೂ ಭಾವನಾತ್ಮಕ ಮನ್ನಣೆಯೊಂದಿಗೆ ಕಾಯ೯ನಿವ೯ಹಿಸಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
 ನೂತನ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ ಹಿರಿಯರ ಮಾಗ೯ದಶ೯ನ, ಪೂವಾ೯ಧ್ಯಕ್ಷರುಗಳ ಸಹಕಾರದೊಂದಿಗೆ ಸಂತಸದಿಂದ ಉತ್ತಮವಾಗಿ ಕಾಯ೯ನಿವ೯ಹಿಸುವುದಾಗಿ ಭರವಸೆ ನೀಡಿದರು.
  ವಲಯ 15ರ ಉಪಾಧ್ಯಕ್ಷ ಅರುಣ್ ಮಾಂಜ, ವಲಯಾಧಿಕಾರಿ ಸುನೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
  ನಿಗ೯ಮನ ಕಾಯ೯ದಶಿ೯ ಶ್ರವಣ್ ಕುಮಾರ್, ಲೇಡಿ ಜೇಸಿ ಸಹನಾ, ಜೆಜೆಸಿ ಮಹಮ್ಮದ್ ಅವೈಸ್, ನೂತನ ಲೇಡಿ ಜೇಸಿ ಅಧ್ಯಕ್ಷೆ ಸನಿಹಾ ಪೈ, ಜೇಜೇಸಿ ಸಾನಿಕಾ ಆಳ್ವ ಉಪಸ್ಥಿತರಿದ್ದರು. 
 ನಿಗ೯ಮನ ಅಧ್ಯಕ್ಷೆ ವಷಾ೯ ಕಾಮತ್ ಸ್ವಾಗತಿಸಿ, ವಾಷಿ೯ಕ ವರದಿ ವಾಚಿಸಿ, ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ವೀಣಾ ಸಂತೋಷ್ ಜೇಸಿವಾಣಿ ವಾಚಿಸಿದರು.ನೂತನ ಅಧ್ಯಕ್ಷರನ್ನು ಸಂತೋಷ್ ಕುಮಾರ್, ಕಾಯ೯ದಶಿ೯ಯನ್ನು ವರುಣ್, ಅತಿಥಿಗಳನ್ನು ಸಂತೋಷ್ ಶೆಟ್ಟಿ, ಮಮತಾ, ಸುಪ್ರಿತಾ ಭರತ್, ನಿತೇಶ್ ಬಲ್ಲಾಳ್ ಪರಿಚಯಿಸಿದರು. ಮಾಕ್೯ ನಿಗ೯ಮನ ಅಧ್ಯಕ್ಷರನ್ನು ಪೂವ೯ಧ್ಯಕ್ಷರ ತಂಡಕ್ಕೆ ಸೇಪ೯ಡೆಗೊಳಿಸಿದರು. ಮಹಮ್ಮದ್ ಅಮಾನ್ ಹುಸೇನ್ ವಂದಿಸಿದರು.

Post a Comment

0 Comments