ಸಂಡೇ ಫ್ರೆಂಡ್ಸ್ ನ ವಾಷಿ೯ಕೋತ್ಸವ : ರಂಜಿತ್ ಪೂಜಾರಿಗೆ ಸನ್ಮಾನ
ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾ. ಪಂ. ವ್ಯಾಪ್ತಿಯ ಬಡಗಮಿಜಾರಿನ ನೂಯಿಯ ಸಂಡೇ ಫ್ರೆಂಡ್ಸ್ ನ18 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಉದ್ಯಮಿ,ಬಿಜೆಪಿ ಮಂಡಲದ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರ್ ಅವರನ್ನು ಸನ್ಮಾನಿಸಲಾಯಿತು.
ಸಂದೀಪ್ ಬೆಂಗಳೂರು, ಸುದರ್ಶನ ಎಂ, ರಮೇಶ್ ಶೆಟ್ಟಿ ಮರಿಯಡ್ಕ,ಜಯ ಪೂಜಾರಿ ಕುದ್ಕೋಳಿ,ಯಶವಂತ್ ಭಂಡಾರಿ, ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಸಂಡೇ ಫ್ರೆಂಡ್ಸ್ ಅಧ್ಯಕ್ಷ ಸುಮಂತ್ ಸುವರ್ಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಮಕ್ಕಳಿಂದ ನೃತ್ಯ, ಪೆರ್ಮೆದ ಕಲಾವಿದೆರ್ ಚೇಳ್ಯಾರು ಅವರಿಂದ ‘ ಎನ್ನಿಲೆಕ ಇಜ್ಜೆರ್’ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು



0 Comments