ತೆಂಕಮಿಜಾರು :ಉಳೈಯಂಗಡಿ ಅಂಗನವಾಡಿ ಕಟ್ಟಡ, ಹೊಸ ಮಾಕೆ೯ಟ್ ಕಟ್ಟಡಕ್ಕೆ ಶಾಸಕ ಕೋಟ್ಯಾನ್ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ತೆಂಕಮಿಜಾರು :ಉಳೈಯಂಗಡಿ ಅಂಗನವಾಡಿ ಕಟ್ಟಡ, ಹೊಸ ಮಾಕೆ೯ಟ್ ಕಟ್ಟಡಕ್ಕೆ ಶಾಸಕ ಕೋಟ್ಯಾನ್ ಶಿಲಾನ್ಯಾಸ


ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೈಯಂಗಡಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಮತ್ತು ತೆಂಕಮಿಜಾರ್ 1ನೇ ವಾರ್ಡಿನ ಕೆಎಂಎಫ್ ಹಾಲಿನ ಡೀಪ್ಪೋ ಬಳಿ ಹೊಸ ಮಾರ್ಕೆಟ್ ನ ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಗುರುವಾರ ಶಿಲಾನ್ಯಾಸ ನೆರವೇರಿಸಿದರು.


ಉಳೈಯಂಗಡಿ ಅಂಗನವಾಡಿ ಕೇಂದ್ರವು ಹಳೆಯ ಕಟ್ಟಡ ವಾಗಿದ್ದು,ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಭಾಗಶಃ ತೆರವು ಗೊಳಿಸಬೇಕಾಗಿರುವುದರಿಂದ ..ಸದ್ರಿ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಂಜೂರಾತಿ ಗೊಂಡ ಅನುದಾನ ಹಾಗೂ ಹೊಸ ಮಾಕೆ೯ಟ್ ಕಟ್ಟಡಕ್ಕೆ MGNREGA ಯೋಜನೆಯಡಿ ಮಂಜೂರಾತಿ ಗೊಂಡ ಅನುದಾನಗಳನ್ನು ಬಳಸಿ ಹೊಸ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಹಾಗೆಯೇ ಪಂಚಾಯತ್ ಅನುದಾನದಲ್ಲಿ ನಿರ್ಮಾಣ ಮಾಡುವುದೆಂದು ತೀರ್ಮಾನಿಸಲಾಗಿತ್ತು. 


   ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್, ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯರು, ಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶುಭ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.

Post a Comment

0 Comments