ಮೂಡುಬಿದಿರೆ : ಜ. 4ರಂದು ಅಲ್ ಬಿರ್ ಇಂಟರ್ ನ್ಯಾಷನಲ್ ಸ್ಕೂಲ್ ನ ನೂತನ ಶಾಲಾ ಕೊಠಡಿ ಲೋಕಾಪ೯ಣೆ
ಮೂಡುಬಿದಿರೆ : ಇಲ್ಲಿನ ಅಬ್ದುಲ್ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಅಲ್ ಬಿರ್ ಇಂಟರ್ನ್ಯಾಶನಲ್ ಸ್ಕೂಲ್ ಕೋಟೆಬಾಗಿಲು ಇದರ ನೂತನ ಶಾಲಾ ಕಟ್ಟಡ ಲೋಕಾರ್ಪಣೆ ಹಾಗೂ ಸಮಸ್ತದ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿ ಕಾರ್ಯಚರಿಸುವ ಅಲ್ ಬಿರ್ ಸ್ಕೂಲ್ಸ್ ಇದರ ದ. ಕ ಜಿಲ್ಲಾ ಮಟ್ಟದ “ಕಿಡ್ಸ್ ಫೆಸ್ಟ್ 2025-26" ಸ್ಪರ್ಧೆಯು ಜ. 4ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ ಹೇಳಿದರು.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಳಿಗ್ಗೆ ಸಮಯ 08.30 ಕ್ಕೆ ಸರಿಯಾಗಿ ಸಯ್ಯದ್ ಅಲೀ ತಂಜಳ್ ಕುಂಬೋಳ್ ಧ್ವಜಾರೋಹನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 9.00 ಗಂಟೆಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ನೂತನ ಶಾಲಾ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆಗೈಯ್ಯಲಿದ್ದಾರೆ.
ಅಲ್ ಬಿರ್ ಸ್ಕೂಲ್ಸ್ ಜನರಲ್ ಕಸ್ವೀನರ್ ಹಾಗೂ ಸಮಸ್ತ ಕೇಂದ್ರ ಮುಶಾವರ ಜೊತೆ ಕಾರ್ಯದರ್ಶಿ ಶೈಖುನಾ ಉಮರ್ ಫೈಝಿ ಮುಕ್ಕಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಸ್ಟಿದುನ್ನೂರ್ ಮಸೀದಿ ಲಾಡಿ ಇದರ ಖತೀಬರಾದ ಬಹು. ಫಾಯಿಝ್ ಫೈಝಿ ಲಾಡಿ ಸ್ವಾಗತಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರುಗಳಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್, ಅಜುಮ್ ಅಲ್ ರ್ಬಿ ಇಂಟರ್ನ್ಯಾಶನಲ್ ಸ್ಕೂಲ್ ಇದರ ಗೌರವಾಧ್ಯಕ್ಷರಾದ ಸಯ್ಯದ್ ಮೈನುಲ್ ಅಬಿದೀನ್ ಜಿಫ್ರಿ ತಂಬಳ್ ಬೆಳ್ತಂಗಡಿ, ಸಯ್ಯದ್ ಅಮೀರ್ ತಂಜಳ್ ಕಿನ್ಯಾ, ಸಯ್ಯದ್ ಅಕ್ರಮಲಿ ತಂಬಳ್ ಅಂಗರಕರ್ಯ, ಶೈಖುನಾ ಮುಹಮ್ಮದ್
ಅಬ್ದುರ್ ಫೈಝಿ ಬೊಳ್ಳೂರು, ಬಹು. ರಫೀಖ್ ಹುದವಿ ಕೋಲಾರಿ, ಬಹು. ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್, ಅಲ್ ಬಿರ್ ಆಡಳಿತ ನಿರ್ದೇಶಕ ಡಾ. ಕೆ.ಪಿ. ಮುಹಮ್ಮದ್, ಅಲ್ ಬಿರ್ ದಕ್ಷಿಣ ಕನ್ನಡ ಜಿಲ್ಲಾ ಕೋರ್ಡಿನೇಟರ್ ಅಬ್ದುಲ್ ಶುಕೂರ್ ದಾರಿಮಿ ಕರಾಯ, ಕರ್ನಾಟಕ ಸರ್ಕಾರ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಕರಾವಳಿ ಪ್ರಾಧಿಕಾರ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಾಜಿ ಸಚಿವ ಅಭಯಚಂದ್ರ ಜೈನ್, ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಮಿಥುನ್ ರೈ, ದಕ್ಷಿಣ ಕನ್ನಡ ಜಿಲ್ಲಾ ವಕ್ಸ್ ಬೋರ್ಡ್ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಸೇರಿದಂತೆ ಸಾಮಾಜಿಕ, ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.
ಸಮಿತಿಯ ಸಂಯೋಜಕ ಅಬ್ದುಲ್ ರಜಾಕ್ ಮದನಿ, ಅಜುಮ್ ಅಲ್ ಬಿರ್ ಸ್ಕೂಲ್ ನ ಅಧ್ಯಕ್ಷ ಉಸ್ಮಾನ್ ಅಬ್ದುಲ್ಲಾ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಮಾಲಿಕ್, ಅಜುಮ್ ಅಲ್ ಬಿರ್ರ್ ಸ್ಕೂಲ್ ನ ಟ್ರಸ್ಟಿ ಅಲ್ತಾಫ್ ಗಂಟಲಕಟ್ಟೆ, ಅಜುಮ್ ಅಲ್ ಬಿರ್ ಸ್ಕೂಲ್ ನ ಸಹ ಸಂಯೋಜಕ ಅಬ್ದುಲ್ ಗಫೂರ್, ಸ್ವಾಗತ ಸಮಿತಿಯ ಸದಸ್ಯ ಲಿಯಕತ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



0 Comments