ಕಂಬಳದ 'ಭೀಷ್ಮ' ಗುಣಪಾಲ ಕಡಂಬ ಸಹಿತ ಪ್ರಮುಖರ ತೇಜೋವಧೆ : ಮುಚ್ಚೂರು ಲೋಕೇಶ್ ಶೆಟ್ಟಿಯನ್ನು ಸಮಿತಿಯಿಂದ ವಜಾಗೊಳಿಸಲು ಕಂಬಳಾಭಿಮಾನಿಗಳ ಆಗ್ರಹ
ಮೂಡುಬಿದಿರೆ: ಜಿಲ್ಲೆಯಲ್ಲಿ ನಡೆದ ವಿವಿಧ ಕಂಬಳದಲ್ಲಿ ನಿರಂತರವಾಗಿ ಶಿಸ್ತು ಉಲ್ಲಂಘನೆ ಮಾಡುತ್ತಿರುವ, ಸುಮಾರು 10ರಷ್ಟು ಪ್ರಕರಣಗಳಲ್ಲಿ ಕಂಬಳದ ಪ್ರಮುಖರ, ಓಟಗಾರರ ತೇಜೋವಧೆ ಹಾಗೂ ಕಂಬಳದ 'ಭೀಷ್ಮ' ಎಂದೇ ಗುರುತಿಸಿಕೊಂಡಿರುವ ಗುಣಪಾಲ ಕಡಂಬರನ್ನು ನಿರಂತರವಾಗಿ ಟೀಕಿಸುತ್ತಿರುವ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾಯ೯ದಶಿ೯ಹಾಗೂ ಸ್ವಯಂ ಘೋಷಿತ ರಾಜ್ಯ ಕಂಬಳ ಅಸೋಶಿಯೇಶನ್ ನ ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿಯನ್ನು ಎರಡೂ ಸಮಿತಿಯಿಂದ ವಜಾ ಮಾಡಬೇಕೆಂದು ಕಂಬಳ ಅಭಿಮಾನಿಗಳ ಆಗ್ರಹಿಸಿದರು.
ಕಂಬಳ ಕ್ಷೇತ್ರದ ಹಿರಿಯರಾದ ಗುಣಪಾಲ ಕಡಂಬ ಅವರಿಗೆ ಮಂಗಳೂರು ಕಂಬಳದಲ್ಲಿ ಮಾಡಿರುವ ಅವಹೇಳನವನ್ನು ಖಂಡಿಸಿ ''ನ್ಯೂ ಪಡಿವಾಳ್ಸ್" ಕೋಣಗಳ ಯಜಮಾನ ಹಷ೯ವಧ೯ನ್ ಪಡಿವಾಳ್ ನೇತೃತ್ವದಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ಶುಕ್ರವಾರ ಸಾಯಂಕಾಲ ನಡೆದ ಕಡಂಬರ ಅಭಿಮಾನಿಗಳ ಸಭೆಯಲ್ಲಿ ಲೋಕೇಶ್ ಶೆಟ್ಟಿಯನ್ನು ವಜಾಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ಕಂಬಳ ಸಮಿತಿಯ ಪ್ರಧಾನ ತೀಪು೯ಗಾರ ಎಡ್ತೂರು ರಾಜೀವ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಂಬಳ ಕ್ರೀಡೆ ಎತ್ತರಕ್ಕೆ ಬೆಳೆದು ಗೌರವ ಗಳಿಸಿಕೊಂಡಿತ್ತು ಆದರೆ ಇದೀಗ ಬುದ್ಧಿ ಇಲ್ಲದವರ ಕೈಗೆ ಮಾಣಿಕ್ಯ ನೀಡಿದಂತ್ತಾಗಿದೆ. ಹಿಂದೆ ಕಂಬಳದಲ್ಲಿ ಸಮಸ್ಯೆಗಳು ಬಂದಾಗ ನ್ಯಾಯದ ಪರವಾಗಿ ಮಾತನಾಡುತ್ತಿದ್ದರು ಆದರೆ ಈಗ ನ್ಯಾಯದ ಪರವಾಗಿ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೋಣಗಳ ಯಜಮಾನರುಗಳಲ್ಲಿ ಒಗ್ಗಟ್ಪು ಇಲ್ಲದಂತ್ತಾಗಿದೆ. ಸಭೆಯಲ್ಲಿದ್ದಾಗ ತಮಗಿಂತ ಕಿರಿಯರಿದ್ದರೂ ಅವರಿಗೆ ಗೌರವ ನೀಡುವುದು ಅದು ಸಭಾ ಮಯಾ೯ದೆ. ಕಂಬಳಕ್ಕೆ ಅನ್ಯಾಯ ಮಾಡಿದವರು ಉದ್ಧಾರ ಆದದ್ದು ಚರಿತ್ರೆಯಲ್ಲೇ ಇಲ್ಲ ಎಂದ ಅವರು ವ್ಯವಸ್ಥಾಪಕರ ಸಮಿತಿಯ ಅಗತ್ಯವಿದೆ ಎಂದರು.
ಜಪ್ಪು ಕಂಬಳದ ಆಯೋಜಕ ಅನಿಲ್ ಶೆಟ್ಟಿ ಮಾತನಾಡಿ ಕಂಬಳವನ್ನು ಸರಿಯಾದ ಸಮಯಕ್ಕೆ ಮುಗಿಸುವುದೆಂದು ಸಭೆಯಲ್ಲಿ ತೀಮಾ೯ನಿಸಿ ನಿಣ೯ಯ ಕೈಗೊಳ್ಳಲಾಗುತ್ತದೆ ಆದರೆ ಸರಿಯಾದ ಸಮಯಕ್ಕೆ ಕಂಬಳವನ್ನು ಮುಗಿಸಲು ಸಮಿತಿಯಿಂದ ಸಾಧ್ಯವಾಗಿಲ್ಲ. ಸಮಿತಿ ಇರುವುದು ಕೇವಲ ಕಂಬಳಗಳ ದಿನಾಂಕ ನಿಗದಿಪಡಿಲು ಮಾತ್ರ ಕಂಬಳ ನಡೆಸಲು ವ್ಯವಸ್ಥಾಪಕರಿದ್ದಾರೆ. ಮಹಾಸಭೆ ಕರೆಯದೆ ರಾಜ್ಯ ಕಂಬಳ ಸಮಿತಿಯನ್ನು ರಚಿಸಲಾಗಿದೆ ಎಂದು ಆರೋಪಿಸಿದ ಅವರು ಎಲ್ಲರೂ ಒಟ್ಟಾಗಿ ತೀಮಾ೯ನಿಸಿ ನಿಣ೯ಯ ಮಾಡಿದರೆ ಕಂಬಳ ಇಲ್ಲದಿದ್ದರೆ ಕಲ ಕಂಬುಲ ಆಗುತ್ತದೆ ಎಂದು ಎಚ್ಚರಿಸಿದರು.
ಕೋಣಗಳ ಯಜಮಾನ ಖಾಸಿಂ ಅವರು ಮಾತನಾಡಿ ಕಡಂಬರು ಜಾತ್ಯತೀತ ಮನೋಭಾವದವರು ಅವರಿಗೆ ಕಂಬಳದಲ್ಲಿ ಹಲವು ವರುಷಗಳ ಅನುಭವವವಿದೆ. ಇವರೆಲ್ಲಾ ಮತ್ತೆ ಬಂದವರು. ಕಡಂಬರನ್ನು ತೀಪು೯ಗಾರರೆಂದು ಹಾಕಬಾರದೆಂದು ಹೇಳುತ್ತಿದ್ದರು ಇದರ ಬಗ್ಗೆ ನಾನು ಯಾವ ಕ್ಷೇತ್ರಕ್ಕೂ ಬಂದು ಸತ್ಯ ಹೇಳಲು ಸಿದ್ಧ ಎಂದರು.
ಜಿಲ್ಲಾ ಕಂಬಳ ಸಮಿತಿಯ ಸುರೇಶ್ ಕೆ. ಪೂಜಾರಿ ಮಾತನಾಡಿ ಕಂಬಳ ಗೌರವವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಗೆ ಬಂದಿದೆ. ಸಮಿತಿಯ ಮೀಟಿಂಗ್ ಗಳನ್ನು ಮಂಗಳೂರಿನಲ್ಲಿಯೇ ನಡೆಸಲಾಗುತ್ತಿದೆ ಇದರಿಂದ ಎಲ್ಲರಿಗೂ ಭಾಗವಹಿಸಲು ಅಸಾಧ್ಯವಾಗಿದೆ. ಮಂಗಳೂರಿನಲ್ಲಿ ಮೀಟಿಂಗ್ ಇಡುವ ಅವಶ್ಯಕತೆ ಏನಿದೆ..? ಜನರು ಬಂದರೆ ತಮ್ಮ ವಿಚಾರ ತಿಳಿಯುತ್ತದೆ ಎಂದೇ ಎಂದು ಪ್ರಶ್ನಿಸಿದರು.
ಬೋರುಕಟ್ಟೆ ಪ್ರಭಾಕರ ಶೆಟ್ಟಿ ಮಾತನಾಡಿ ತಮಗೆ ಇಷ್ಟ ಬಂದವರನ್ನು ಸೇರಿಸಿ ಮಾಡಿರುವ ಇಂತಹ ಸಮಿತಿ ಬೇಕಾ..? ಹಿಂದೆ ಕಂಬಳದಲ್ಲಿ ಸಮಸ್ಯೆ ಬಂದರೆ ಪರಿಹಾರ ಮಾಡುತ್ತಿದ್ದರು ಆದರೆ ಈಗ ಸಮಿತಿಯವರೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಸಮಿತಿ ಬೇಕಾ ನಮಗೆ ಎಂದು ಕೇಳಿದರು.
ಓಟಗಾರರ ಪರವಾಗಿ ಶ್ರೀನಿವಾಸ ಗೌಡ ಅವರು ಕಂಬಳ ಅಕಾಡೆಮಿಯನ್ನು ಮಾಡಿ ಆ ಮೂಲಕ ಯುವ ಓಟಗಾರರನ್ನು ಬೆಳಕಿಗೆ ತಂದಿರುವ ಗುಣಪಾಲ ಕಡಂಬರ ಪರವಾಗಿ ಎಲ್ಲಾ ಓಟಗಾರರಿದ್ದೇವೆ ಎಂದರು.
ವ್ಯವಸ್ಥಾಪಕರನ್ನು, ಕೋಣಗಳ ಎಲ್ಲ ಯಜಮಾನರನ್ನು ಜಿಲ್ಲಾ ಕಂಬಳ ಸಮಿತಿಯಲ್ಲಿ ಶುಲ್ಕರಹಿತವಾಗಿ ಸದಸ್ಯತ್ವ ನೀಡಬೇಕು. ಜಿಲ್ಲಾ ಕಂಬಳ ಸಮಿತಿ ಹಾಗೂ ರಾಜ್ಯ ಕಂಬಳ ಅಸೋಶಿಯೇಶನ್ ಪುನರ್ ರಚನೆಯಾಗಬೇಕೆನ್ನುವ ಆಗ್ರಹಗಳು ಸಭೆಯಲ್ಲಿ ಕೇಳಿಬಂತು.
ಬಹಿರಂಗ ಕ್ಷಮಾಪಣೆಗೆ ಆಗ್ರಹ :
ಗುಣಪಾಲ ಕಡಂಬರನ್ನು ಅವಹೇಳನ ಮಾಡಿರುವ ಮುಚ್ಚೂರು ಲೋಕೇಶ್ ಶೆಟ್ಟಿ ಮಿಯ್ಯಾರು ಕಂಬಳದಲ್ಲಿ ಬಹಿರಂಗ ಕ್ಷಮಾಪಣೆ ಕೇಳಬೇಕು. ಮುಂದೆ ಕಡಂಬರು ಮಾತ್ರವಲ್ಲ ಕಂಬಳ ಕ್ಷೇತ್ರದ ಯಾವುದೇ ವ್ಯಕ್ತಿಗೆ ಅವಮಾನವಾದಲ್ಲಿ ತೀವ್ರ ರೀತಿಯ ಹೋರಾಟ ಮಾಡುತ್ತೇವೆ ಎನ್ನುವ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಗುಣಪಾಲ ಕಡಂಬರ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದರು.
ಚಿತ್ತರಂಜನ್ ಭಂಡಾರಿ ಐಕಳ, ಮೂಲ್ಕಿ ಗೌತಮ್ ಜೈನ್, ಕೋಣಗಳ ಯಜಮಾನರುಗಳಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್, ಬೇಲಾಡಿ ಬಾವ ಅಶೋಕ್ ಶೆಟ್ಟಿ, ಜಗತ್ಪಾಲ ಶೆಟ್ಟಿ ಹೊಕ್ಕಾಡಿಗೋಳಿ, ಗಣೇಶ್ ನಾಯಕ್ ಪಂಡಿತ್, ಪದವು ಕಾನಡ್ಕದ ಡೊಲ್ಫಿ ಡಿ'ಸೋಜ, ಸಾಣೂರು ಜಗದೀಶ್ ಪೂಜಾರಿ, ನಾಗೇಶ್ ದೇವಾಡಿಗ ಸುರತ್ಕಲ್ ತಡಂಬೈಲು ಸುರೇಶ್ ಶೆಟ್ಟಿ ಹರಿಮೀನಾಕ್ಷಿ ದೋಟ, ಸುಬ್ರಹ್ಮಣ್ಯ ಪ್ರಭು ಸುರತ್ಕಲ್, ಕಂಬಳ ಸಮಿತಿಯ ಸುಭಾಶ್ಚಂದ್ರ ಚೌಟ, ಜ್ವಾಲ ಪ್ರಸಾದ್, ಜೋನ್ ಸಿರಿಲ್ ಡಿ'ಸೋಜ,
ಹೊಕ್ಕಾಡಿಗೋಳಿ ಕಂಬಳ ಆಯೋಜಕ ರಶ್ಮಿತ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು.





0 Comments