ಸ್ಪೂತಿ೯ ಕಲಾ ಸಂಭ್ರಮ -2025
ಹಿರಿಯ ಪತ್ರಕತ೯ ಧನಂಜಯ ಮೂಡುಬಿದಿರೆಗೆ "ಸ್ಪೂತಿ೯ರತ್ನ" ಪ್ರಶಸ್ತಿ ಪ್ರದಾನ
ಮೂಡುಬಿದಿರೆ : ಬೆಳುವಾಯಿ ಕೆಸರ್ ಗದ್ದೆಯಲ್ಲಿರುವ ಸ್ಪೂತಿ೯ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ವತಿಯಿಂದ 'ಕಲಾ ಸಂಭ್ರಮ- 2025' ಕಾರ್ಯಕ್ರಮವು ಶನಿವಾರ ಶಾಲಾ ಆವರಣದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಎ. ಕೋಟ್ಯಾನ್ ದೀಪ ಬೆಳಗಿಸಿ ಕಲಾ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ ಭಿನ್ನ ಸಾಮಥ್ಯ೯ದ ಮಕ್ಕಳು ಹುಟ್ಟಿದಾಗ ಹೆತ್ತವರಿಗೆ ಕಷ್ಟ, ನೋವಾಗುವುದು ಸಹಜ. ಆದರೆ ವಿಶೇಷ ಸಾಮಥ್ಯ೯ದ ಮಕ್ಕಳಲ್ಲಿ ಬೇರೆ ಬೇರೆ ರೀತಿಯ ಪ್ರತಿಭೆಗಳಿವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡವರಿದ್ದಾರೆ ಆದ್ದರಿಂದ ಹೆತ್ತವರು ದೃತಿಗೆಡದೆ ಸಮಥ೯ವಾಗಿ ಮಕ್ಕಳನ್ನು ಬೆಳೆಸಬೇಕು. ಸ್ಪೂತಿ೯ಯಂತಹ ಸಂಸ್ಥೆಗಳು ವಿಶೇಷ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಕ್ರೀಡೆ, ಆರೋಗ್ಯ, ತರಬೇತಿಗಳನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಂದೆ ತರುವಂತಹ ಕೆಲಸಗಳನ್ನು ಮಾಡುತ್ತಿರುವುದರಿಂದ ಅಲ್ಲಿಗೆ ಮಕ್ಕಳನ್ನು ಸೇರಿಸಿ ಅವರು ಸಮಾಜದ ಮುಂಚೂಣಿಗೆ ಬರುವಂತೆ ಮಾಡಬೇಕಾಗಿದೆ ದಾನಿಗಳು, ಪ್ರೋತ್ಸಾಹಕರು ಇಂತಹ ಸಂಸ್ಥೆಗಳಿಗೆ ಆಧಾರ ಸ್ತಂಭಗಳಾಗಿ ನಿಲ್ಲಬೇಕಾಗಿದೆ ಎಂದ ಅವರು ಸರಕಾರಗಳು ಇಂತಹ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿದೆ. ಕೇಳಿಕೊಂಡರು.ಈ ಸಂಸ್ಥೆಯ ಕಾರ್ಯ ಬಹಳಷ್ಟು ಮೆಚ್ಚುವಂತದ್ದು. ಸಂಸ್ಥೆಯನ್ನು ನೋಂದಣಿ ಮಾಡಿಸಿ ಸರಕಾರದಿಂದ ಸಿಗುವ ಅನುದಾನವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
'ಸ್ಪೂತಿ೯ರತ್ನ' ಪ್ರಶಸ್ತಿ ಪ್ರದಾನ : ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕತ೯ ಧನಂಜಯ ಮೂಡುಬಿದಿರೆ ಅವರಿಗೆ 'ಸ್ಪೂತಿ೯ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಲೆಯ ಕೀರ್ತಿಯನ್ನು ಹೆಚ್ಚಿಸುತ್ತಿರುವ ಉದ್ಯೋಗಿಗಳನ್ನು, ವಿವಿಧ ಸಂದರ್ಭಗಳಲ್ಲಿ ಸಾಕಷ್ಟು ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಬೆಳಗಿಸಿದ ಮಹನೀಯರುಗಳನ್ನು ಸನ್ಮಾನಿಸಲಾಯಿತು.ಮಾಜಿ ಸಚಿವ ಕೆ. ಅಭಯಚಂದ್ರ ಜೈ ನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶೇಷ ಮಕ್ಕಳಿಗಾಗಿ ವಿಶಿಷ್ಟ ಯೋಜನೆಗಳನ್ನು ರೂಪಿಸುತ್ತಿರುವ ಸ್ಪೂತಿ೯ ಶಾಲೆಯ ಪ್ರತಿಯೊಂದು ಹಂತದಲ್ಲೂ ನಾನು ಜೊತೆಗಿರುವೆ. ಸರಕಾರದ ಮಟ್ಟದಲ್ಲಿ ಆಗುವ ಕೆಲಸಗಳಿಗೆ ಸಾಥ್ ನೀಡುತ್ತೇನೆ ಎಂದರು.
ಸನ್ಮಾನ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಜು೯ನ್ ಭಂಡಾರ್ ಕರ್ ಅವರನ್ನು ದಂಪತಿ ಸಹಿತ ಸನ್ಮಾನಿಸಲಾಯಿತು.
ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಿರುವ ಶಯನ್, ಸಹಳಾ ಮತ್ತು ರಂಜಿತ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾವಧ೯ಕ ಸಂಘದ ಹಿರಿಯರಾದ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಹಾಗೂ ಕಲೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಶಾಲೆಯ ಶಿಕ್ಷಕಿ ಸುಚಿತ್ರಾ ಅವರನ್ನು ಗೌರವಿಸಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಧನಂಜಯ ಮೂಡುಬಿದಿರೆ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಮಿತಿಗೆ ಗ್ರಾಮೀಣ ಮಟ್ಟದ ಪತ್ರಕತ೯ರನ್ನು ಸೇರಿಸಿಕೊಳ್ಳಬೇಕು., ರಾಜ್ಯೋತ್ಸವ ಪ್ರಶಸ್ತಿಗೆ ನೀಡಲಾಗುವ ಮಾನದಂಡವನ್ನು ಶೇ. 10ರಷ್ಟಾದರೂ ಜಿಲ್ಲಾ ಪ್ರಶಸ್ತಿಗೆ ನೀಡಿದರೆ ಉತ್ತಮ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲೀಲಾಧರ ಬಿ. ಶೆಟ್ಟಿಗಾರ್, ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಡಾ.ಅಮರಶ್ರೀ ಶೆಟ್ಟಿ, ಉದ್ಯಮಿಗಳಾದ ಅಬುಲಾಲ ಪುತ್ತಿಗೆ, ಸಿಎಚ್ ಅಬ್ದುಲ್ ಗಪೂರ್, ವಿದ್ಯಾವಧ೯ಕ ಸಂಘದ ಅಧ್ಯಕ್ಷ ಕಂಡಿಗ ರತ್ನಾಕರ ಶೆಟ್ಟಿ, ಸಂಚಾಲಕ ರಾಜೇಶ್ ಸುವರ್ಣ, ಹೆಲ್ಪಿಂಗ್ ಇಸ್ರೇಲ್ ತಂಡದ ಸುನಿಲ್ ಮೆಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಶಮಿ೯ಳಾ ವಾಸ್ ವರದಿ ವಾಚಿಸಿದರು. ಸಂಸ್ಥೆಯ ಪ್ರಮುಖರಾದ ಉಷಾಲತಾ ಸಹಕರಿಸಿದರು. ಸುಚಿತ್ರ ಪೂಜಾರಿ ಸನ್ಮಾನಿತರ ಪತ್ರ ವಾಚಿಸಿ ವಂದಿಸಿದರು.
ಸಾಂಸ್ಕೃತಿಕ ಕಾಯ೯ಕ್ರಮದ ಅಂಗವಾಗಿ ಸಭಾ ಕಾಯ೯ಕ್ರಮದ ಮೊದಲು ಸ್ವಪ್ತಸ್ವರ ಮೆಲೋಡಿಸ್ ನ ಉಮೇಶ್ ಕೋಟ್ಯಾನ್ ಬಳಗ ವಾಮದಪದವು ಇವರಿಂದ ಉದಯಗಾನ ಸಂಭ್ರಮ
ಮಧ್ಯಾಹ್ನ ವಾಯ್ಸ್ ಆಫ್ ಆರಾಧನ ತಂಡದ ಮಕ್ಕಳಿಂದ ಹಾಗೂ ಸ್ಫೂರ್ತಿ ಶಾಲಾ ವಿಶೇಷ ಚೇತನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ನಡೆಯಿತು.
ಸಂಜೆ ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿ ಮೂಡುಬಿದಿರೆ ಹಾಗೂ
ಎಂ.ಜೆ ಸ್ಟೆಪ್ ಆಫ್ ಡ್ಯಾನ್ಸ್ ಸ್ಟುಡಿಯೋ ಮೂಡುಬಿದಿರೆ ಇವರಿಂದ ನೃತ್ಯ ಸಂಭ್ರಮ
ಸಿಂಧೂರ ಕಲಾವಿದೆರ್ ಕಾರ್ಲ ಇವರಿಂದ ತುಳು ಹಾಸ್ಯಮಯ ನಾಟಕ ಪನೊಡಿತ್ತ್ಂಡ್ ಸ್ವಾರಿ ಪ್ರದಶ೯ನಗೊಂಡಿತು.






0 Comments