ಅಬ್ಬಕ್ಕ ಐನೂರನೇ ಜನ್ಮದಿನೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಅಬ್ಬಕ್ಕ ಐನೂರನೇ ಜನ್ಮದಿನೋತ್ಸವ 

*ಜವನೆರ್ ಬೆದ್ರ ಫೌಂಡೇಶನ್ ನಿಂದ 50 ಮಂದಿ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರ ವಿತರಣೆ


ಮೂಡುಬಿದಿರೆ: ​ ಅಬ್ಬಕ್ಕ ಐನೂರನೇ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 50 ಮಂದಿ ಸಾಧಕಿಯರಿಗೆ 'ಜವನೆರ್ ಬೆದ್ರ ಫೌಂಡೇಶನ್' ವತಿಯಿಂದ ಅಬ್ಬಕ್ಕ ಪ್ರೇರಣಾ ಪತ್ರ ಗೌರವವನ್ನು ಭಾನುವಾರ ನೀಡಲಾಯಿತು. 

 

ಚೌಟ ಅರಮನೆಯ ಕುಲದೀಪ ಎಂ. ಅವರು ಸಾಧಕಿಯರಿಗೆ 'ಅಬ್ಬಕ್ಕ ಪ್ರೇರಣಾ ಪತ್ರ'ವನ್ನು ಪ್ರದಾನ ಮಾಡಿ ಗೌರವಿಸಿದರು.​


ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಫೌಂಡೇಶನ್‌ನ ಸಂಸ್ಥಾಪಕಾಧ್ಯಕ್ಷರಾದ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ನಾಯ್ಕ್, ಯುವ ಸಂಘಟನೆಯ ಸಂಚಾಲಕ ರಂಜಿತ್ ಶೆಟ್ಟಿ, ಅಬ್ಬಕ್ಕ ಬ್ರಿಗೇಡ್ ಸಂಚಾಲಕರಾದ ಸಹನಾ ನಾಯಕ್, ಹಾಗೂ ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರದ ಸಂಯೋಜಕರಾದ ಸುನಿತಾ ಉದಯ ಶೆಟ್ಟಿ ಅವರು ಉಪಸ್ಥಿತರಿದ್ದರು. ಅಲ್ಲದೆ, ಅಕ್ಷಯ್, ಮನು, ಪ್ರತೀಶ್, ರಿಯಾ, ಸುಕನ್ಯಾ, ಅಮಿತಾ, ಸಮಿತ್ ರಾವ್, ರಾಧಿಕಾ ರಾವ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಮತ್ತು ಸದಸ್ಯರು ಸ್ಥಳದಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಸಂದೀಪ್ ಕೆಲ್ಲಪುತ್ತಿಗೆ ಅವರು ನಿರೂಪಿಸಿದರು.

500 ಮಂದಿ ಸಾಧಕಿಯರನ್ನು ಗೌರವಿಸುವ ಉದ್ದೇಶವನ್ನು ಜವನೆರ್ ಬೆದ್ರ ಸಂಘಟನೆಯು ಇಟ್ಟುಕೊಂಡಿದ್ದು ಅದರಲ್ಲಿ ಮೊದಲ ಹಂತದಲ್ಲಿ 50 ಮಂದಿಯನ್ನು ಗುರುತಿಸಲಾಗಿದೆ.

ವಿವಿಧ ಕ್ಷೇತ್ರದ ಸಾಧಕಿಯರಿಗೆ ಗೌರವ:

ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆಗಳಿಗಾಗಿ ಜಯಂತಿ ಎಸ್. ಬಂಗೇರ, ನಾಗಶ್ರೀ ಭಂಡಾರಿ, ಮತ್ತು ಅನಿತಾ ಶೆಟ್ಟಿ ಮೂಡುಬಿದಿರೆ ಅವರನ್ನು ಗೌರವಿಸಲಾಗಿದೆ. ಸಾಮಾಜಿಕ ಜಾಲತಾಣ ಮತ್ತು ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ವಿನಯ ಡಿ. ಕಿಣಿ ಅವರಿಗೆ ಗೌರವ ಸಂದಿದೆ. ಪರಿಸರ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಸಂಧ್ಯಾ ಭಟ್ ಅವರನ್ನು ಗೌರವಿಸಲಾಗಿದೆ. ನಾಟಿ ವೈದ್ಯಕೀಯ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ಪ್ರೇಮ ಪೂಜಾರ್ತಿ ಮತ್ತು ಲಲಿತ ಅವರನ್ನು ಗೌರವಿಸಲಾಗಿದೆ. ಸಮಾಜ ಸೇವಾ ಕ್ಷೇತ್ರದಲ್ಲಿನ ಸಕ್ರಿಯ ಕೊಡುಗೆಗಳಿಗಾಗಿ ಬಿಂದಿಯಾ ಶರತ್ ಶೆಟ್ಟಿ, ರಮಣಿ, ಶೋಭ ಎಸ್. ಹೆಗ್ಡೆ, ರೂಪ ಬಲ್ಲಾಳ್, ರೂಪ ಸಂತೋಷ್ ಶೆಟ್ಟಿ, ಸಹನಾ ನಾಗರಾಜ್, ಮತ್ತು ಸುಮಂಗಲ ಅವರನ್ನು ಗೌರವಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ಶ್ರೇಷ್ಠ ಸೇವೆಗಳಿಗಾಗಿ ಡಾ. ರೇವತಿ ಭಟ್, ಡಾ. ಸರಸ್ವತಿ, ಮತ್ತು ಡಾ. ಶೇಹಾನಾಜ್ ಬೇಗಂ ಅವರಿಗೆ ಗೌರವ ಸಂದಿದೆ. ಮಾಧ್ಯಮ ಕ್ಷೇತ್ರದಲ್ಲಿನ ಕೊಡುಗೆಗಾಗಿ ಪ್ರೇಮಶ್ರೀ ಕಲ್ಲಬೆಟ್ಟು ಅವರನ್ನು ಗುರುತಿಸಿ ಗೌರವಿಸಲಾಗಿದೆ. ನರ್ಸ್ ಮತ್ತು ಸಿಸ್ಟರ್ ಆಗಿ ಆರೋಗ್ಯ ಸೇವೆ ಸಲ್ಲಿಸಿದ ಶಾರದಾ ಜೆ. ರಾವ್, ಆಶಾ ಆರ್. ಬಂಗೇರ, ಉಷಾ ಟಿ. ಉಪ್ಪಿನಂಗಡಿ, ಮತ್ತು ವಿಮಲ ಕೆ. ಅವರಿಗೆ ಗೌರವ ಸಂದಿದೆ.ಕಲಾ ಕ್ಷೇತ್ರದಲ್ಲಿನ ಪ್ರತಿಭೆಗಾಗಿ ಪೂರ್ಣಿಮಾ ಪದ್ಮನಾಭ ಪ್ರಭು ಮತ್ತು ಅಶ್ವಿನಿ ಪೂಜಾರಿ ಪಡುಮಾರ್ನಾಡ್ ಅವರನ್ನು ಗೌರವಿಸಲಾಗಿದೆ. ಪೊಲೀಸ್ ಸೇವೆಯಲ್ಲಿನ ಕರ್ತವ್ಯನಿಷ್ಠೆಗಾಗಿ ರಕ್ಷಿತಾ ಎ. ಅವರಿಗೆ ಗೌರವ ಸಂದಿದೆ. ಪಶು ಆರೈಕೆ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ವಿನುತಾ ಆನಂದ ಕೋಟ್ಯಾನ್ ಅವರಿಗೆ ಗೌರವ ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಕೊಡುಗೆಗಾಗಿ ಉಷಾ ಭಂಡಾರಿ, ಪ್ರೇಮ ಚಂದ್ರಶೇಖ‌ರ್ ರಾವ್, ಮತ್ತು ರಜನಿ ಕೆ. ಅವರನ್ನು ಗೌರವಿಸಲಾಗಿದೆ.ಧಾರ್ಮಿಕ ಸೇವೆಯಲ್ಲಿನ ತೊಡಗುವಿಕೆಗಾಗಿ ಜಾಹ್ನವಿ ಪೈ ಜಿ., ಆಶಾಲತಾ ಪ್ರಭು, ಮತ್ತು ಶಾರದಾ ಪೈ ಅವರಿಗೆ ಗೌರವ ಸಂದಿದೆ.ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ವೀಣಾ ಸಂತೋಷ್ ಅವರನ್ನು ಗುರುತಿಸಿ ಗೌರವಿಸಲಾಗಿದೆ. ಉದ್ಯಮ ಕ್ಷೇತ್ರದಲ್ಲಿನ ಯಶಸ್ಸಿಗೆ ವಿದ್ಯಾ ಭಟ್, ಸುಕನ್ಯಾ ಆರ್ ಪೈ, ಶಾಂತಲಾ ಸೀತಾರಾಮ್ ಆಚಾರ್ಯ, ಮತ್ತು ಉಷಾ ಡಿ ಪೈ ಅವರನ್ನು ಗೌರವಿಸಲಾಗಿದೆ. ಕಾನೂನು ವೃತ್ತಿ ಕ್ಷೇತ್ರದಲ್ಲಿನ ಕೊಡುಗೆಗಾಗಿ ಶ್ವೇತಾ ಜೈನ್ ಅವರನ್ನು ಗುರುತಿಸಲಾಗಿದೆ.ಯೋಗ/ಕರಾಟೆ ಕ್ಷೇತ್ರದಲ್ಲಿನ ಸಾಧನೆಗಾಗಿ ತನುಶ್ರೀ ಡಿ. ಬಂಗೇರ ಮತ್ತು ಹರ್ಷ ಯು. ಕೋಟ್ಯಾನ್ ಅವರಿಗೆ ಗೌರವ ಸಂದಿದೆ. ಹಿರಿಯ ಬಳೆ ವ್ಯಾಪಾರಿಯಾಗಿ ಅನನ್ಯ ಸೇವೆಗಾಗಿ ಬೇಬಿ ಜೋಗಿ ತೋಡಾರ್ ಅವರನ್ನು ಗೌರವಿಸಲಾಗಿದೆ.ಸ್ವಚ್ಛತೆ ಮತ್ತು ಸಮಾಜ ಮಂದಿರದ ಸೇವೆಯಲ್ಲಿನ ಶ್ರಮಕ್ಕಾಗಿ ಶುಭಲತಾ ಕುಲಾಲ್ ಪುತ್ತಿಗೆ ಅವರನ್ನು ಗುರುತಿಸಲಾಗಿದೆ.‌ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸೇವೆಗಾಗಿ ಸವಿತಾ ವಾದಿರಾಜ್ ರಾವ್ ಅವರಿಗೆ ಗೌರವ ಲಭಿಸಿದೆ. ಯಕ್ಷಗಾನ ಕ್ಷೇತ್ರದಲ್ಲಿನ ಪ್ರತಿಭೆಗಾಗಿ ಪ್ರಕೃತಿ ಮಾರೂರು ಅವರನ್ನು ಗೌರವಿಸಲಾಗಿದೆ.ಪೌರಕಾರ್ಮಿಕ ಕ್ಷೇತ್ರದಲ್ಲಿನ ಮಹತ್ವದ ಸೇವೆಗಾಗಿ ಸುಂದರಿ ಅವರಿಗೆ ಗೌರವ ಸಂದಿದೆ.ಆಶಾ ಕಾರ್ಯಕರ್ತೆಯಾಗಿನ ಸೇವೆಗಾಗಿ ವಿನೋದಿನಿ ಎನ್. ಅವರಿಗೆ ಗೌರವ ಸಂದಿದೆ.ಭರತನಾಟ್ಯ ಕ್ಷೇತ್ರದಲ್ಲಿನ ಕೊಡುಗೆಗಾಗಿ ಸುಮನ ಪ್ರಸಾದ್ ಅವರನ್ನು ಗೌರವಿಸಲಾಗಿದೆ.ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಆಮ್ರನ್ ಅವರಿಗೆ ಗೌರವ ಸಂದಿದೆ. ನಿರೂಪಣೆ ಕ್ಷೇತ್ರದಲ್ಲಿನ ಕಾರ್ಯಕ್ಕಾಗಿ ಸೌಮ್ಯ ಕೋಟ್ಯಾನ್ ಅವರನ್ನು ಗುರುತಿಸಲಾಗಿದೆ.ಅಂಗನವಾಡಿ ಶಿಕ್ಷಕಿಯಾಗಿನ ಸೇವೆಯನ್ನು ಪರಿಗಣಿಸಿ ಶಶಿಕಲಾ ಅವರಿಗೆ ಗೌರವ ನೀಡಲಾಗಿದೆ.

Post a Comment

0 Comments