ರೆಡ್ ಕ್ರಾಸ್ ವಾರ್ಷಿಕ ವಿಶೇಷ ಶಿಬಿರ- ಉದ್ಘಾಟನಾ ಸಮಾರಂಭ
ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು, ಮೂಡುಬಿದಿರೆ ಯುವ ರೆಡ್ ಕ್ರಾಸ್ ಘಟಕ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರ ೨೦೨೫-೨೬ರ ಕಾರ್ಯಕ್ರಮವನ್ನು , ತ್ರಿವೇಣಿ ಸಿಲ್ಕ್÷್ಸ ಮೂಡುಬಿದಿರೆಯ ಮಾಲಿಕರಾದ ಸ್ವಾತಿ ಬೋರ್ಕರ್ ಉದ್ಘಾಟಿಸಿ, “ಇಂದು ಉದ್ಘಾಟಣೆಗೊಳ್ಳುತ್ತಿರುವ ಈ ಶಿಬಿರವು ಮುಂದಿನ ನಾಲ್ಕು ದಿನಗಳ ಕಾಲ ನಡೆಯಲಿದೆ. ಶಿಬಿರದಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ಭಾಗವಹಿಸಿ, ಶಿಸ್ತು, ಸಹಕಾರ ಮತ್ತು ಆಸಕ್ತಿಯಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕು ಎಂಬುದು ನನ್ನ ಆಶಯ. ಈ ಶಿಬಿರವು ನಿಮಗೆ ಹೊಸ ಅನುಭವ ಜ್ಞಾನ ಮತ್ತು ಸೇವಾ ಮನೋಭಾವವನ್ನು ಬೆಳೆಸಲಿ, ಕಾರ್ಯಕ್ರಮವು ಅತ್ಯಂತ ಉತ್ತಮ ರೀತಿಯಲ್ಲಿ ನಡೆಯಲಿ” ಎಂದು ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿ, “ಇಂತಹ ಶಿಬಿರಗಳಿಂದ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಕಲಿಯಬಹುದು. ಸಮಯ ಎನ್ನುವುದು ನಮ್ಮ ಬದುಕಿನಲ್ಲಿ ಬಹಳ ಮಹತ್ವ ಪಡೆದಿದೆ, ಈ ಸಮಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಈ ನಾಲ್ಕು ದಿನದ ಶಿಬಿರವು ಯಶಸ್ವಿಯಾಗಿ ನೆರವೇರಲಿ” ಎಂದು ಶುಭ ಹಾರೈಸಿದರು. ಯುವ ರೆಡ್ ಕ್ರಾಸ್ ಅಧಿಕಾರಿ ಶ್ರೀಗೌರಿ ಶಿಬಿರವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಪದವಿಪೂರ್ವ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಗೀತಾ ರಾಮಕೃಷ್ಣ, ಯುವ ರೆಡ್ ಕ್ರಾಸ್ ಘಟಕದ ನಾಯಕಿ ಶ್ಲಾಘನಾ, ಯುವ ರೆಡ್ ಕ್ರಾಸ್ ತಂಡದ ನಾಯಕಿಯರು ಮೀನಾಕ್ಷಿ, ತನುಜಾ, ನಮ್ರತಾ ಮತ್ತು ಅನನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಾದ ನವ್ಯ ಸ್ವಾಗತಿಸಿ, ದಿವ್ಯ ಕೆ. ವಂದಿಸಿ ಹಾಗೂ ಅನನ್ಯ ಕಾರ್ಯಕ್ರಮ ನಿರೂಪಿಸಿದರು.



0 Comments