ಶಿತಾ೯ಡಿಯ ದಂಪತಿಯಿಂದ ಮೂಡುಬಿದಿರೆಯಲ್ಲಿ 'ತತ್ವಂ ಸಲೂನ್ & ಸ್ಪಾ' ಆರಂಭ
ಮೂಡುಬಿದಿರೆ: ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಮೂಡುಬಿದಿರೆಯಲ್ಲಿ ಶಿರ್ತಾಡಿ ಮೂಲದ ದಂಪತಿಗಳಾದ ಕೆವಿನ್ ಹಾಗೂ ರೆನಿಟಾ ಅವರು ಸೌಂದರ್ಯ ಮತ್ತು ಸ್ವಾಸ್ಥ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ 'ತತ್ವಂ ಸಲೂನ್ ಮತ್ತು ಸ್ಪಾ' ಸಂಸ್ಥೆಯನ್ನು ಪ್ರಾರಂಭಿಸಿದ್ದು ಇದರ ಉದ್ಘಾಟನಾ ಸಮಾರಂಭವು ಭಾನುವಾರ ನಡೆಯಿತು.
ಸ್ವರಾಜ್ ಮೈದಾನದ ಎದುರಿನ ಕ್ರಿಸ್ಟಲ್ ಕೋರ್ಟ್ ಬಿಲ್ಡಿಂಗ್‌ನಲ್ಲಿ ಆರಂಭಗೊಂಡಿರುವ ಸಂಸ್ಥೆಗೆ ಬೆಳಿಗ್ಗೆ ಶಿರ್ತಾಡಿ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಹೆರಾಲ್ಡ್ ಮಸ್ಕರೇನಸ್ ಅವರು ಪ್ರಾರ್ಥನೆ ಸಲ್ಲಿಸಿ, ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಶುಭ ಹಾರೈಸಿದರು.
ಸಾಯಂಕಾಲ ನಡೆದ ಸಭಾ ಕಾಯ೯ಕ್ರಮದಲ್ಲಿ ಮಂಗಳೂರಿನ ಹಿರಿಯ ಸಿಎ ಎಸ್. ಎಸ್. ನಾಯಕ್ ಅವರು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ "ಮೂಡುಬಿದಿರೆಯು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಉದ್ಯಮ ಪ್ರಾರಂಭಿಸಲು ಹಲವಾರು ಅವಕಾಶಗಳಿವೆ. ಗುಣಮಟ್ಟಕ್ಕೆ ಮತ್ತು ಗ್ರಾಹಕ ಸ್ನೇಹಿಯಾಗಿದಲ್ಲಿ ಯಾವುದೇ ಉದ್ಯಮವನ್ನು ಸಮರ್ಥವಾಗಿ ಮುನ್ನಡೆಸಬಹುದು," ಎಂದರು. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುವ ಈ ದಂಪತಿ ಪ್ರಾರಂಭಿಸಿರುವ 'ತತ್ವಂ' ಸಂಸ್ಥೆಯು ಮೂಡುಬಿದಿರೆಯಲ್ಲಿ ಜನಪ್ರಿಯವಾಗಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಎಂ. ಮೋಹನ ಆಳ್ವ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವೈದ್ಯಕೀಯ ಕ್ಷೇತ್ರದ ಡಾ. ಪ್ರಿಯದರ್ಶಿನಿ, ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ., ಉದ್ಯಮಿಗಳಾದ ಶ್ರೀಪತಿ ಭಟ್ ಮತ್ತು ಆಶ್ವಿನ್ ಪಿರೇರಾ, ಹಾಗೂ ವಕೀಲರಾದ ಶರತ್ ಶೆಟ್ಟಿ ಡಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಪಾಲುದಾರರಾದ ಕೆವಿನ್ ಹಾಗೂ ರೆನಿಟಾ ಅವರು ಆಗಮಿಸಿದ ಎಲ್ಲಾ ಅತಿಥಿಗಳನ್ನು ಗೌರವಿಸಿ ಕೃತಜ್ಞತೆ ಸಲ್ಲಿಸಿದರು.
ವಿಳಾಸ: ಕ್ರಿಸ್ಟಲ್ ಕೋರ್ಟ್ ಬಿಲ್ಡಿಂಗ್, ಡೊಮಿನೋಸ್ ಪಿಜ್ಜಾ ಮಳಿಗೆ ಮೇಲೆ, ಸ್ವರಾಜ್ ಮೈದಾನದ ಎದುರು, ಮೂಡುಬಿದಿರೆ - 574227.
ಸಂಪರ್ಕ ಸಂಖ್ಯೆ: 91485 44507.






0 Comments