"ಸಹಕಾರ ರತ್ನ" ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಎಸ್.ಕೋಟ್ಯಾನ್‌ರಿಗೆ ಪೌರ ಸನ್ಮಾನ
ಮೂಡುಬಿದಿರೆ: ಕರ್ನಾಟಕ ಸರ್ಕಾರದಿಂದ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಅವರಿಗೆ ಬೆಳುವಾಯಿ, ಪಡುಮಾರ್ನಾಡು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ ಗ್ರಾಮಸ್ಥರಿಂದ ಪೌರ ಸನ್ಮಾನವು ಬೆಳುವಾಯಿ ಖಂಡಿಗ ಗ್ರೀನ್ಸ್ ನಲ್ಲಿ ಭಾನುವಾರ ನಡೆಯಿತು.
ಬೆಳುವಾಯಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷೆ ಉಷಾ ಡಿ.ಪೈ ಅವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು, ಭಾಸ್ಕರ್ ಕೋಟ್ಯಾನ್-ಪಾರ್ವತಿ ಕೋಟ್ಯಾನ್ ದಂಪತಿಯನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಜೈನ್ ಅವರು ಭಾಸ್ಕರ್ ಕೋಟ್ಯಾನ್ ಅವರು ಕಂಬಳ ಕ್ಷೇತ್ರಕ್ಕೆ ಸಲ್ಲಿಸಿ ಕೊಡುಗೆ ಹಾಗೂ ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದ ಏಳಿಗೆಗಾಗಿ ಶ್ರಮಿಸಿರುವುದನ್ನು ಪ್ರಶಂಸಿದರು.
ಮುಖ್ಯ ಅತಿಥಿಗಳಾಗಿ ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಬೆಳುವಾಯಿ ಉದ್ಯಮಿಗಳಾದ ಸಲೀಂ ಸಾಹೇಬ್, ಅನ್ಸಾರ್ ಸಾಹೇಬ್, ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸೈಮನ್ ಮಸ್ಕರೇನಸ್, ಖಂಡಿಗ ಗ್ರೀನ್ಸ್ ನ ರತ್ನಾಕರ ಶೆಟ್ಟಿ, ದರೆಗುಡ್ಡೆ ಕ್ಷೇತ್ರದ ತಂತ್ರಿ ನಾಗರಾಜ ಭಟ್, ದರೆಗುಡ್ಡೆ ಗ್ರಾ.ಪಂ ಅಧ್ಯಕ್ಷ ಅಶೋಕ್ ಶೆಟ್ಟಿ ಮತ್ತಿತರರು ಅಭಿನಂದಿಸಿ ಮಾತನಾಡಿದರು.
ರಮೇಶ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಭಾಸ್ಕರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು ರಾಘವೇಂದ್ರ ಭಟ್ ವಂದಿಸಿದರು.



0 Comments