ಮೂಡುಬಿದಿರೆಯಲ್ಲಿ "ಬೊಲ್ಪು ಚಾರಿಟೇಬಲ್ ಟ್ರಸ್ಟ್" ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ "ಬೊಲ್ಪು ಚಾರಿಟೇಬಲ್ ಟ್ರಸ್ಟ್" ಉದ್ಘಾಟನೆ

ಮೂಡುಬಿದಿರೆ: ಬಡವರು ಮತ್ತು ಅಶಕ್ತರ ಬದುಕಿನಲ್ಲಿ ಹೊಸ ಬೆಳಕು ನೀಡುವ ಸದಾಶಯದೊಂದಿಗೆ ಸ್ಥಾಪಿಸಲಾದ 'ಬೊಲ್ಪು ಚಾರಿಟೇಬಲ್ ಟ್ರಸ್ಟ್' ಮೂಡುಬಿದಿರೆ ಇದರ ಉದ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಶನಿವಾರ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಟ್ರಸ್ಟ್‌ ನ್ನು ಉದ್ಘಾಟಿಸಿ ಮಾತನಾಡಿ ಅಸಹಾಯಕರಿಗೆ ಸಹಾಯ ಮಾಡುವ ಉತ್ತಮ ಉದ್ದೇಶದಿಂದ ಆರಂಭಗೊಂಡಿರುವ ಶ್ರಿನಿತ್ ಶೆಟ್ಟಿ ಅವರ ತಂಡಕ್ಕೆ ತಾವು ಸದಾ ಸಹಕಾರ ನೀಡಲು ಸಿದ್ಧ ಎಂದ ಅವರು ಹೊಸ ಸಂಸ್ಥೆಗೆ ಶುಭ ಹಾರೈಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ದಕ್ಷಿಣ ಕನ್ನಡದ ಮಾಜಿ ಅಧ್ಯಕ್ಷ ಸುದರ್ಶನ್ ಎಂ. ಅವರು ಮಾತನಾಡಿ, "ಸಂಘಟನೆಯಿಂದ ಅಶಕ್ತರ ಬದುಕಿನಲ್ಲಿ ಹೊಸ ಬೆಳಕನ್ನು ಬೆಳಗಿಸುವ ಮಹತ್ವದ ಕೆಲಸವಾಗಲಿ" ಎಂದು ಹಾರೈಸಿದರು.


ಟ್ರಸ್ಟ್‌ನ ಸ್ಥಾಪಕರಾದ ಶ್ರೀನಿತ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, "ಸಮಾಜದಲ್ಲಿ ಮಾನವೀಯತೆಯಿಂದ ಬದುಕಬೇಕು ಎನ್ನುವ ಸದಾಶಯದೊಂದಿಗೆ ಬೊಲ್ಪು ಟ್ರಸ್ಟ್ ಸ್ಥಾಪನೆಯಾಗಿದೆ. ಸದಾ ಬಡವರ ಹಾಗೂ ಅಶಕ್ತರ ಬದುಕಿಗೆ ಬೆಳಕು ನೀಡುವ ಉದ್ದೇಶವನ್ನು ಈ ಟ್ರಸ್ಟ್ ಹೊಂದಿದೆ" ಎಂದು ಹೇಳಿದರು.


ಸಮಾಜ ಸೇವಕರಿಗೆ ಸನ್ಮಾನ:


ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಾಯಿ ಮಾರ್ನಾಡ್, ನವಚೇತನಾ ಸೇವಾ ಬಳಗ ತೋಡಾರು, ನೇತಾಜಿ ಬ್ರಿಗೇಡ್, ಜವನೆರ್ ಬೆದ್ರ, ಪವರ್ ಫ್ರೆಂಡ್ಸ್, ಬೆದ್ರ ಪ್ರೆಂಡ್ಸ್, ಸರ್ವೋದಯ ಫ್ರೆಂಡ್ಸ್, ತ್ರಿಶೂಲ್ ಫ್ರೆಂಡ್ಸ್, ವೀರಾಂಜನೇಯ ಸೇವಾ ಸಂಘ ಪೆರಾಡಿ, ನಮನ ಯುವ ಭಾಂದವೆರ್ ಬೆದ್ರ, ಪಳಕಳ ಮಿತ್ರ ಮಂಡಳಿ, ಹೀಲಿಂಗ್ ಹ್ಯಾಂಡ್ಸ್ ಟ್ರಸ್ಟ್, ರಾಮ್ ಫ್ರೆಂಡ್ಸ್ ಕಟೀಲ್, ಆದರ್ಶ ಸಂಜೀವಿನಿ ಮೂಲ್ಕಿ ಸಂಘಟನೆ ಹಾಗೂ ಸಮಾಜ ಸೇವಕ ಅನಿಲ್ ಮೆಂಡೋನ್ಸ ಅವರನ್ನು ಗೌರವಿಸಲಾಯಿತು. ಅಶಕ್ತರಿಗೆ ಅರ್ಥಿಕ ನೆರವು ನೀಡಲಾಯಿತು.


ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ವಕೀಲರಾದ ಶರತ್ ಶೆಟ್ಟಿ, ಚೇತನ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಪ್ರೇಮನಾಥ್ ಮಾರ್ಲ, ಈಶ್ವರ್ ಶೆಟ್ಟಿ, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್‌ನ ಅವಿನಾಶ್ ಜಿ. ಶೆಟ್ಟಿ, ಶೋಭಾ ಎಸ್. ಹೆಗ್ಡೆ, ಮತ್ತು ಸಂದೀಪ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


 ಸಚಿನ್ ಸ್ವಾಗತಿಸಿದರು. ರಾಮ್ ಮಾರ್ನಾಡ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Post a Comment

0 Comments