ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ
ಮೂಡುಬಿದಿರೆ : ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲಾ ಪ್ರತಿಭಾ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭವು ಶನಿವಾರ ನಡೆಯಿತು.
ಜವಾಹರ್ ವಿದ್ಯಾಸಂಘದ ಸದಸ್ಯರಾದ ಪಿ.ಕೆ.ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಳೆವಿದ್ಯಾರ್ಥಿ, ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ, ಹಳೆವಿದ್ಯಾರ್ಥಿ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಹಳೆವಿದ್ಯಾರ್ಥಿ,ಮಂಗಳೂರು ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಹಶಿಕ್ಷಕ ಪಾರ್ಶ್ವನಾಥ್ ಅವರು ಭಾಗವಹಿಸಿ ಶುಭ ಹಾರೈಸಿದರು.
ಜವಾಹರ್ ವಿದ್ಯಾಸಂಘದ ಸದಸ್ಯರಾದ ಟಿ.ಕೆ.ವೆಂಕಟರಾವ್,ಕೆ.ನಾರಾಯಣ ಭಟ್,ಜಯಾನಂದ ಶೆಟ್ಟಿ, ಸುರೇಶ್ ಅಂಚನ್,ಸುಧಾಕರ, ನಿವೃತ್ತ ಮುಖ್ಯೋಪಾಧ್ಯಾಯರಾದ ಜಯರಾಂ, ನಿವೃತ್ತ ಶಿಕ್ಷಕ ವಸಂತ ಟಿ. ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಗಳಿಸಿರುವ ಭರತ್ ಕುಮಾರ್, 561 ಅಂಕಗಳನ್ನು ಗಳಿಸಿರುವ ಪ್ರಶಾಂತ್ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕಿ ಸುಮಂಗಳಾ ವಿ.ಅಳಿಯೂರು ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಅವರು ವರದಿ ವಾಚಿಸಿದರು. ಗೋವರ್ಧನ್ ಹಾಗೂ ಮಾಲತಿ ಅವರು ಬಹುಮಾನ ವಿಜೇತರನ್ನು ಪರಿಚಯಿಸಿದರು.ಪುಷ್ಪಾವತಿ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ವಿ. ವಂದಿಸಿದರು.
ಶಾಲಾ ನಾಯಕ ಸ್ವಾಗತ್,ಶಾಲಾ ನಾಯಕಿ ಫಾತಿಮಾ ಸುಹಾನಾ, ಸಿಬ್ಬಂದಿವರ್ಗದ ವಿನಾಯಕ್ ಕಾಮತ್, ಮುಹಮ್ಮದ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



0 Comments