ಅಳಿಯೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ

ಜಾಹೀರಾತು/Advertisment
ಜಾಹೀರಾತು/Advertisment

 ಅಳಿಯೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ

ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ಮೂಡುಬಿದಿರೆ  ಹಾಗೂ ಪ್ರಸಾದ್ ನೇತ್ರಾಲಯ ಮೂಡುಬಿದಿರೆ ಮೌಂಟ್ ರೋಜರಿ ಆಸ್ಪತ್ರೆ ಅಲಂಗಾರು ಇವುಗಳ ಸಂಯುಕ್ತ ಆಶ್ರಯ ದಲ್ಲಿ  ಶಿತಾ೯ಡಿ ವಲಯದ  ಅಳಿಯೂರು ಪ್ರಾಥಮಿಕ ಶಾಲೆಯಲ್ಲಿ  ಉಚಿತ ಆರೋಗ್ಯ  ಹಾಗೂ  ನೇತ್ರ ತಪಾಸಣಾ ಶಿಬಿರವು ಸೋಮವಾರ ನಡೆಯಿತು. 


ತಾಲ್ಲೂಕು ಭಜನಾ ಪರಿಷತ್ ಅಧ್ಯಕ್ಷ  ಲಕ್ಷ್ಮಣ್ ಸುವರ್ಣ ಅವರು ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.


 ಒಕ್ಕೂಟದ ಅಧ್ಯಕ್ಷ ರವಿ ಪೂಜಾರಿ ಅವರು ವಹಿಸಿದ್ದರು ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯದ ಡಾ. ಪ್ರೇಮ್, ಮೌಂಟ್ ರೋಸರಿ ಆಸ್ಪತ್ರೆ ಯ ಡಾ. ಪುನೀತ್ ಪಕ್ಕಲ್, ಡಾ. ಉದಾತ್,  ಶೋಭಿತ, ಸಂಪರ್ಕಧಿಕಾರಿ ಗಳಾದ ಶುಭಾಕರ್ ಹಾಗೂ ಸೈಯ್ಯದ್,   ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಧರ್ ಬಂಗೇರ,  ಶೋಭಾ ರವರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಸುಮಾರು 100 ಜನರು ಬಿ.ಪಿ ಶುಗರ್ ತಪಾಸಣೆ, ಇ ಸಿ, ಜಿ ತಪಾಸಣೆ, ಕಣ್ಣಿನ ತಪಾಸಣೆ ನಡೆಸಿ ಪ್ರಯೋಜನ ಪಡೆದುಕೊಂಡರು.

 ವಲಯದ ಮೇಲ್ವಿಚಾರಕಿ ಪುಷ್ಪ ರವರು ಸ್ವಾಗತಿಸಿದರು.  ಸುಶೀಲ ವಂದಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ  ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments