ಅಕಾಲಿಕವಾಗಿ ಮರಣ : ಗುರುಪ್ರಸಾದ್ ಭಟ್ ಕುಟುಂಬಕ್ಕೆ ಕ್ಯಾಂಪ್ಕೋದಿಂದ ಆಥಿ೯ಕ ನೆರವು
ಮೂಡುಬಿದಿರೆ : ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆಯಡಿ, ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಹೊಸಮನೆ ನಿವಾಸಿ ಗುರುಪ್ರಸಾದ ಭಟ್ ಅವರ ಅಕಾಲಿಕ ಮರಣಕ್ಕೆ ಪರಿಹಾರವಾಗಿ ಐವತ್ತು ಸಾವಿರ ರೂಪಾಯಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಕ್ಯಾAಪ್ಕೋ ಬೈಕಂಪಾಡಿ ಪ್ರಾಂತ್ಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೊಟ್ಯಾನ್, ಮೃತರ ತಂದೆ, ಕ್ಯಾಂಪ್ಕೋ ಮೂಡುಬಿದಿರೆ ಶಾಖೆಯ ಸಕ್ರಿಯ ಸದಸ್ಯ ಶ್ರೀನಿವಾಸ್ ಭಟ್ ಅವರಿಗೆ ಚೆಕ್ ಅನ್ನು ಹಸ್ತಾಂತರಿಸಿದರು.
ಮೂಡುಬಿದಿರೆ ಶಾಖೆಯ ಸದಸ್ಯರಾದ ವಸಂತ ಶೆಟ್ಟಿ, ಬದ್ರಿನಾಥ್, ಕ್ಯಾಂಪ್ಕೋ ಮೂಡುಬಿದಿರೆ ವ್ಯವಸ್ಥಾಪಕ ಕೃಷ್ಣರಾಜ, ಬೈಕಂಪಾಡಿ ಶಾಖೆಯ ಸಿಬ್ಬಂದಿ ಅಶೋಕ ಉಪಸ್ಥಿತರಿದ್ದರು.



0 Comments