ನ. 14-20ರವರೆಗೆ ಸಹಕಾರ ಸಪ್ತಾಹ ಸಂಭ್ರಮ *ಜಾಜ್೯ ಮೋನಿಶ್ ಗೆ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ

ಜಾಹೀರಾತು/Advertisment
ಜಾಹೀರಾತು/Advertisment

 ನ. 14-20ರವರೆಗೆ ಸಹಕಾರ ಸಪ್ತಾಹ ಸಂಭ್ರಮ

*ಜಾಜ್೯ ಮೋನಿಶ್ ಗೆ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ನವೆಂಬರ್ 14 ರಿಂದ20 ರವರೆಗೆ `ಸಹಕಾರ ಸಪ್ತಾಹ ಸಂಭ್ರಮ' ಹಮ್ಮಿಕೊಳ್ಳಲಾಗಿದ್ದು, ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ `ಸಪ್ತ ಸಂಧ್ಯಾ - ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 



14ರಂದು ಸಾಯಂಕಾಲ 6.00ಗಂಟೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್  ಸಹಕಾರಿ ಸಪ್ತಾಹವನ್ನು ಉದ್ಘಾಟಿಸುವರು. ಆಳ್ವಾಸ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಡಾ. ಎಚ್. ಎನ್. ರಮೇಶ್, ಕೊರ್ಪುಸ್ ಕ್ರಿಸ್ತಿ ಚರ್ಚ್ನ ಧರ್ಮಗುರು ಒನಿಲ್ ಡಿಸೋಜ ಸಹಿತ ಗಣ್ಯರ ಉಸಸ್ಥಿತಿಯಲ್ಲಿ ಅತ್ಯುತ್ತಮ ಸಹಕಾರಿ, ಸಮಾಜ ಸೇವಕ,ಸೊಸೈಟಿಯ ನಿರ್ದೇಶಕ ಎಂ. ಜಾರ್ಜ್ ಮೋನಿಸ್ ಅವರಿಗೆ `ಸಹಕಾರ ಕಲ್ಪವೃಕ್ಷ ಪ್ರಶಸ್ತಿ' ಪ್ರದಾನ ಮಾಡಲಾಗುವುದು ಎಂದರು. 


ಸಪ್ತಾಹದ ಪ್ರತಿದಿನ ಸಾಯಂಕಾಲ 6 ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ಆ ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ನ.15ರಂದು ಸಹಕಾರ-ಪರಿಸರ, ಕೃಷಿ, ಪಶುಸಂಗೋಪನೆ ಉಪನ್ಯಾಸ ಹಾಗೈ ಗ್ರಾಮೀಣ ಅಭಿವೃದ್ಧಿ ದಿನಾಚರಣೆ, 16ರಂದು ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತಿಯಲ್ಲಿ, ಯುವ ಉದ್ಯಮಿ ಎಂ. ಅಭಿಜಿತ್ ಅವರಿಗೆ `ಸಮಗ್ರ ಸಾಧಕ ಪ್ರಶಸ್ತಿ' ಪ್ರದಾನ ನಡೆಯಲಿದೆ. ನ.17ರಂದು ಸಹಕಾರ ಮತ್ತು ಮಾನವೀಯ ಮೌಲ್ಯಗಳು ವಿಚಾರದ ಕುರಿತು ಉಪನ್ಯಾಸ, ನ.18ರಂದು ಸಹಕಾರ-ಉಚಿತ ಕಾನೂನು ಸೇವೆ ಉಪನ್ಯಾಸ, ನ.19ರಂದು ಸಹಕಾರ ಮತ್ತು ರಾಷ್ಟ್ರೀಯ ಚಿಂತನೆ ಹಾಗೂ ನ.20ರಂದು ಸಹಕಾರ-ಯುವಜನ ಸೇವೆ ಕುರಿತು ಉಪನ್ಯಾಸ ನಡೆಯಲಿದೆ. ನ16ರಂದು ಬೆಳಗ್ಗೆ 10ಗಂಟೆಯಿಂದ ಉಚಿತ ವೈದ್ಯಕೀಯ ತಪಾಸಣೆ ನಡೆಯಲಿದೆ ಎಂದರು. 


ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಮಾತನಾಡಿ, ಸಪ್ತಾಹದ ಪ್ರತಿದಿನ ವಿವಿಧ ಕ್ಷೇತ್ರಗಳ ಸಾಧಕರು, ಸಂಘ ಸಂಸ್ಥೆಗಳನ್ನು ಗೌರವಿಸಲಾಗುವುದು. ಈ ಬಾರಿ ಸಹಕಾರ ಸಪ್ತಾಹದಲ್ಲಿ 30 ಅಧಿಕ ಮಂದಿ ಹಾಗೂ ಸಂಘ ಸಂಸ್ಥೆಗಳನ್ನು ಗೌರವಿಸಲಾಗುವುದು. ವಿಶೇಷವಾಗಿ ಮೂಡುಬಿದಿರೆಯ ಹುಲಿವೇಷ ತಂಡಗಳನ್ನು ಗುರುತಿಸಿ ಗೌರವಿಸಲಿದ್ದೇವೆ. ಸರ್ಕಾರಿ, ಅನುದಾನಿತ ಶಾಲೆ, ಕಾಲೇಜುಗಳಿಗೆ ದೇಣಿಗೆಗಳನ್ನು ನೀಡಲಿದ್ದೇವೆ. ನಿವೃತ್ತಿಗೊಳ್ಳಲಿರುವ ಸಿಇಒ ಕೆ.ರಘುವೀರ್ ಕಾಮತ್ ಹಾಗೂ ಸಿಬ್ಬಂದಿ ಶೇಖರ್ ಅವರನ್ನು ಸನ್ಮಾನಿಸಲಾಗುವುದು ಎಂದರು. 


ಸೊಸೈಟಿಯ ಉಪಾಧ್ಯಕ್ಷ ಎಂ.ಗಣೇಶ್ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಘುವೀರ್ ಕಾಮತ್, ನಿರ್ದೇಶಕರಾದ ಕೆ.ಅಭಯಚಂದ್ರ ಜೈನ್, ಎಂ.ಜಾರ್ಜ್ ಮೋನಿಸ್, ಮನೋಜ್ ಕುಮಾರ್ ಶೆಟ್ಟಿ, ಎಂ.ಪದ್ಮನಾಭ, ಸಿ.ಎಚ್.ಗಫೂರ್, ಎಂ.ಪಿ ಅಶೋಕ್ ಕಾಮತ್, ಜ್ಞಾನೇಶ್ವರ ಕಾಳಿಂಗ ಪೈ, ದಯಾನಂದ ನಾಯ್ಕ್, ಪ್ರೇಮಾ ಎಸ್.ಸಾಲ್ಯಾನ್, ಅನಿತಾ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

Post a Comment

0 Comments