ಪಣಪಿಲದಲ್ಲಿ ಕಿಸಾನ್ ಜಾಗೃತಿ ಗ್ರಾಮ ಸಮಾವೇಶ

ಜಾಹೀರಾತು/Advertisment
ಜಾಹೀರಾತು/Advertisment

ಪಣಪಿಲದಲ್ಲಿ ಕಿಸಾನ್ ಜಾಗೃತಿ ಗ್ರಾಮ ಸಮಾವೇಶ


ಮೂಡುಬಿದಿರೆ ತಾಲೂಕಿನ ಪಣಪಿಲ ಕಿಸಾನ್ ಜಾಗೃತಿ ಗ್ರಾಮ ಸಮಾವೇಶವು  ಶಾಂತಿ ಪ್ರಸಾದ್ ಹೆಗ್ಡೆ ಮಾರ್ಗದರ್ಶನದಲ್ಲಿ  ಪಣಪಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಭಾನುವಾರ ನಡೆಯಿತು. 

ಹಿರಿಯ ಪ್ರಗತಿಪರ ಕೃಷಿಕ  ಗೋಪಾಲ್ ಮೂಲ್ಯ ಸಮಾವೇಶವನ್ನು ಉದ್ಘಾಟಿಸಿದರು.

ಉದ್ಯಮಿ ರಮನಾಥ್ ಸಾಲಿಯಾನ್ ಅಧ್ಯಕ್ಷತೆಯನ್ನು  ವಹಿಸಿದ್ದರು.


ರಾಜ್ಯ ಸರ್ಕಾರ ಇತ್ತೀಚೆಗೆ ಕುಮ್ಕಿ ಕಾಯ್ದೆಗೆ ತಂದಿರುವ ತಿದ್ದುಪಡಿ ಕುರಿತು ಮತ್ತು ಅಕ್ರಮ ಸಕ್ರಮೀಕರಣ ಅರ್ಜಿಗಳ ಇತ್ಯರ್ಥದ ಬಗ್ಗೆ ಸರಕಾರ ಹೊರಡಿಸಿರುವ ಹಲವು ಷರತ್ತುಗಳಿಂದ  ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಶಾಂತಿ ಪ್ರಸಾದ್ ಹೆಗ್ಡೆ ಮಾಹಿತಿ ನೀಡಿದರು. 


ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಬಗ್ಗೆ ಸೆಲ್ಕೋ ಸೋಲಾರ್ ಕಂಪೆನಿಯ ಹಿರಿಯ ಪ್ರಬಂಧಕ  ರವೀನಾ ಬಂಗೇರ  ಮಾಹಿತಿ ನೀಡಿದರು.


ಪ್ರಧಾನಮಂತ್ರಿ ವಯೋವಂದನ್ ಯೋಜನೆಯ ಬಗ್ಗೆ ಆಯುಷ್ಮಾನ್ ಆರೋಗ್ಯ ಮಿತ್ರ ಶ್ರೀ ಪ್ರೀತಂ ಇವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಯುವರಾಜ್ ಜೈನ್, ಪ್ರವೀಣ್ ಭಂಡಾರಿ, ಮುನಿರಾಜ ಹೆಗ್ಡೆ,ಹರಿಯಪ್ಪ ಕೋಟ್ಯಾನ್,  ರವಿ ಪೂಜಾರಿ ಹಾಗೂ ಕರೆ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

      

 ಸೂರ್ಯ ಘರ್ ಯೋಜನೆಗೆ ಗ್ರಾಮದ 27 ಕ್ಕೂ ಹೆಚ್ಚು,  ವಯೋ ವಂದನ್ ಯೋಜನೆಗೆ 31 ಕ್ಕೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಾಯಿಸಿರುತ್ತಾರೆ.

      ಕೃಷಿ ಮಾಡಿದ ಭೂಮಿಗೆ ಹಕ್ಕು ಪತ್ರ ಸಿಗಲೇಬೇಕೆನ್ನುವ ಬಗ್ಗೆ ಹೋರಾಟ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.


 ಅಶ್ವಥ್ ಪಣಪಿಲ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments