ಜವನೆರ್ ಬೆದ್ರದಿಂದ ರಾಣಿ ಅಬ್ಬಕ ಕಿರು ಉದ್ಯಾನವನ ಪುನರ್ ನಿಮಾ೯ಣ : ಪುತ್ತಿಗೆ ದೇವಸ್ಥಾನದಲ್ಲಿ ಪೂಜೆ

ಜಾಹೀರಾತು/Advertisment
ಜಾಹೀರಾತು/Advertisment

 ಜವನೆರ್ ಬೆದ್ರದಿಂದ ರಾಣಿ ಅಬ್ಬಕ ಕಿರು ಉದ್ಯಾನವನ ಪುನರ್ ನಿಮಾ೯ಣ : ಪುತ್ತಿಗೆ ದೇವಸ್ಥಾನದಲ್ಲಿ ಪೂಜೆ

ಮೂಡುಬಿದಿರೆ : ರಾಣಿ ಅಬ್ಬಕ್ಕ ದೇವಿಯ 500 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ತಾವು ಐದು ವರ್ಷ ಹಿಂದೆ ಚೌಟರ  ಅರಮನೆಯ ಮುಂಭಾಗದಲ್ಲಿ ಸ್ಥಾಪಿಸಿದ ರಾಣಿ ಅಬ್ಬಕ ಕಿರು ಉದ್ಯಾವನದ ಪುನರ್ ನಿರ್ಮಾಣದ ಸಲುವಾಗಿ

ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ , ಚೌಟರ ಅರಮನೆಯಲ್ಲಿರುವ ಪಟ್ಟದ ಮಂಚ ಮುಂಭಾಗದಲ್ಲಿ ಚೌಟರ ಅರಮನೆಯ ಪ್ರತಿನಿಧಿ ಕುಲದೀಪ್ ಎಂ ಅವರಿಗೆ ಫಲ ಪುಷ್ಪವನ್ನು ಭಾನುವಾರ ಸಮರ್ಪಿಸಲಾಯಿತು.

ಹಳೆಯ ಸಣ್ಣ ವಿಗ್ರಹವನ್ನು ತೆಗೆದು

ಕುಂಬಳೆಯ ಶಿಲ್ಪಿ ವೇಣುಗೋಪಾಲ್ ಆಚಾರ್ ಅವರು ನಿರ್ಮಿಸಿರುವ ನೂತನ ಆರೂವರೆ  ಫೀಟ್ ಉದ್ದದ ರಾಣಿ ಅಬ್ಬಕ್ಕ ದೇವಿಯ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಯಿತು. 

 ಕಿರು ಉದ್ಯಾನದ  ಪೂರ್ಣ ಕಾರ್ಯ ಮುಗಿದ ಬಳಿಕ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗುವುದೆಂದು ಟ್ರಸ್ಟಿನ  ಅಧ್ಯಕ್ಷ  ಅಮರ್ ಕೋಟೆ ತಿಳಿಸಿದರು. 


ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿ ರಂಜಿತ್ ಶೆಟ್ಟಿ

ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಅಬ್ಬಕ್ಕ ಬ್ರಿಗೇಡ್ ಸಂಚಾಲಕ್ಕೆ ಸಹನಾ ನಾಯಕ್

ಸಂದೀಪ್ ಕೆಲಪುತ್ತಿಗೆ, ಪ್ರತಿಷ್, ಸುಮಂತ್ ಶೆಟ್ಟಿ, ಶಮಿತ್ ರಾವ್, ಶಾಂತ , ರಾಧಾ, ಸುನಿತಾ ಲಕ್ಷ್ಮಿ ಭಟ್ ಸಹಿತ ಸದಸ್ಯರ ಭಾಗವಹಿಸಿದರು.

Post a Comment

0 Comments