ಸದೃಢ ಆರೋಗ್ಯದಿಂದ ಬಲಿಷ್ಠ ರಾಷ್ಟ್ರ: ಡಾ ಪುನೀತ್ ಪಕಳ

ಜಾಹೀರಾತು/Advertisment
ಜಾಹೀರಾತು/Advertisment

 ಸದೃಢ ಆರೋಗ್ಯದಿಂದ ಬಲಿಷ್ಠ ರಾಷ್ಟ್ರ: ಡಾ ಪುನೀತ್ ಪಕಳ

ಮೂಡುಬಿದಿರೆ: ಧರ್ಮ, ಕರ್ಮ ಸಾಧನೆಗೆ ಶರೀರವೇ ಮಾಧ್ಯಮ. ಸದೃಢ, ಆರೋಗ್ಯವ೦ತ ಸಮಾಜದಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಆಧುನಿಕ ಯುಗದಲ್ಲಿ ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊ೦ಡು ಮುಂದುವರಿದರೆ ಸಶಕ್ತ, ಸ೦ಸ್ಕಾರಯುತ ರಾಷ್ಟ್ರ ಜೀವನವನ್ನು ಕಂಡುಕೊಳ್ಳಬಹುದು ಎಂದು ಮೌಂಟ್ ರೋಸರಿ ಆಸ್ಪತ್ರೆ ಅಲಂಗಾರಿನ ವೈದ್ಯರಾದ ಡಾ ಪುನೀತ್ ಪಕಳ ಹೇಳಿದರು. 


   ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಮಾರ್ನಾಡಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಪ್ರಯುಕ್ತ ಎಕ್ಸಲೆ೦ಟ್ ಪದವಿಪೂರ್ವ ಕಾಲೇಜು ಹಾಗೂ ಮೌ೦ಟ್ ರೋಸರಿ ಆಸ್ಪತ್ರೆ ಸಹಕಾರದೊ೦ದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 


ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕ೦ಡುಬರುತ್ತಿರುವ ಅನಾರೋಗ್ಯದ ವಿಷಯಗಳು ಆತ೦ಕಕಾರಿಯಾಗಿದೆ. ಸಮತೋಲನದ ಆಹಾರ, ಒತ್ತಡರಹಿತ ಜೀವನದಿ೦ದ ಆರೋಗ್ಯವೆ೦ಬ ಮಹಾಭಾಗ್ಯವನ್ನು ಪಡೆದುಕೊಳ್ಳಬಹುದು. ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳು, ಆರೋಗ್ಯ ಶಿಬಿರದಂಥಹ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮ ನಡೆಸುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಎಕ್ಸಲೆ೦ಟ್ ಕೆಲಸ ಸ್ತುತ್ಯರ್ಹ 

ಎಂದರು.


ವೇದಿಕೆಯಲ್ಲಿ ಮಕ್ಕಳ ತಜ್ಞ ಡಾ ಮುಕುಂದ್, ಮೌಂಟ್ ರೋಸರಿ ಆಸ್ಪತ್ರೆಯ ಮಾನವ ಸ೦ಪನ್ಮೂಲ ಅಧಿಕಾರಿ   ವಿನೀತ್, ಸಾರ್ವಜನಿಕ ಸ೦ಪರ್ಕಾಧಿಕಾರಿ ಅನಿಲ್, ಶಿಬಿರಾಧಿಕಾರಿ ತೇಜಸ್ವೀ ಭಟ್, ಸಹಶಿಬಿರಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಡಾ ವಾದಿರಾಜ ಕಲ್ಲುರಾಯ, ಪ್ರದೀಪ್ ಕೆ.ಪಿ, ಅಶೋಕ್, ಪ್ರಿಯಾಂಕ, ಸಂಧ್ಯಾ ಕುಮಾರಿ ಸೌಮ್ಯಾ ಮುಂತಾದವರುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಮಾರ್ನಾಡಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಪ್ರಯುಕ್ತ ಎಕ್ಸಲೆ೦ಟ್ ಪದವಿಪೂರ್ವ ಕಾಲೇಜು ಹಾಗೂ ಮೌ೦ಟ್ ರೋಸರಿ ಆಸ್ಪತ್ರೆ ಸಹಕಾರದೊ೦ದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಉಪಸ್ಥಿತರಿದ್ದರು.

Post a Comment

0 Comments