ತುಳುನಾಡ ಸೇನೆಯಿಂದ ಮೂಡುಬಿದಿರೆಯಲ್ಲಿ 'ಸ್ನೇಹಕೂಟ ಕಂಬಳ'ಕ್ಕೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment

 ತುಳುನಾಡ ಸೇನೆಯಿಂದ ಮೂಡುಬಿದಿರೆಯಲ್ಲಿ 'ಸ್ನೇಹಕೂಟ ಕಂಬಳ'ಕ್ಕೆ ಚಾಲನೆ

ಮೂಡುಬಿದಿರೆ: ಇಲ್ಲಿನ ಕಡಲಕೆರೆ ನಿಸರ್ಗಧಾಮದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕ್ರೀಡಾಂಗಣದಲ್ಲಿ ಭಾನುವಾರ ಮಿಜಾರು ಹರಿಮೀನಾಕ್ಷಿ ದೋಟದ ಸುರೇಶ್ ಶೆಟ್ಟಿಯವರ ಸಾರಥ್ಯದಲ್ಲಿ, ತುಳುನಾಡ ಸೇನೆಯು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂಬಾಜಿ ಮಹಾರಾಜರ ಹೆಸರಿನಲ್ಲಿ ಆಯೋಜಿಸಿರುವ 'ಸ್ನೇಹಕೂಟ ಕಂಬಳ'ಕ್ಕೆ ಚೌಟರ ಅರಮನೆಯ ಕುಲದೀಪ್ ಎಂ. ಅವರು ಕರೆ ಭಾನುವಾರ ಚಾಲನೆ ನೀಡಲಾಯಿತು.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರು ಕಂಬಳವನ್ನು ಉದ್ಘಾಟಿಸಿದರು. ಶಾಸಕ ಉಮಾನಾಥ ಎ. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

 ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಮೂಡುಬಿದಿರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಮಿಜಾರು ಹರಿಮೀನಾಕ್ಷಿ ದೋಟದ ಹರಿಯಪ್ಪ ಶೆಟ್ಟಿ ಸಹಿತ ಗಣ್ಯರು ಉಪಸ್ಥಿತರಿದ್ದರು.


Post a Comment

0 Comments