ಹಿರಿಯ ನ್ಯಾಯವಾದಿ ಎಂ. ಕೆ ವಿಜಯ ಕುಮಾರ್ ನಿಧನ

ಜಾಹೀರಾತು/Advertisment
ಜಾಹೀರಾತು/Advertisment

 ಹಿರಿಯ ನ್ಯಾಯವಾದಿ ಎಂ. ಕೆ ವಿಜಯ ಕುಮಾರ್ ನಿಧನ 

ಮೂಡುಬಿದಿರೆ : ಕಾಕ೯ಳದ ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಅವರು ಎದೆ ನೋವಿನಿಂದ ಶುಕ್ರವಾರ ಸಂಜೆ ನಿಧನ ಹೊಂದಿದರು.


81 ರ ಹರೆಯದ ವಿಜಯಕುಮಾರ್ ಅವರಿಗೆ  ಅವರಿಗೆ ಸಂಜೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ಕೊನೆಯುಸಿರೆಳೆದಿದ್ದಾರೆ.


ಐದು ದಶಕಗಳ ವೃತ್ತಿಪರ ಪಯಣ

 * ಎಂ.ಕೆ. ವಿಜಯ್ ಕುಮಾರ್ ಅವರು 1967 ರಲ್ಲಿ ಕಾನೂನು ವೃತ್ತಿಯನ್ನು ಪ್ರಾರಂಭಿಸಿ, ಐದು ದಶಕಗಳಿಗೂ ಹೆಚ್ಚು ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕಾರ್ಕಳದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬಿ.ಎಸ್‌ಸಿ ಹಾಗೂ ಕಾನೂನು ಪದವಿಯನ್ನು ಪಡೆದಿದ್ದರು.

 * ಅವರು ಪ್ರಸಿದ್ಧ ನಾಗರಿಕ ವಕೀಲರಾದ ಮಂಜಯ್ಯ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ, ಎರಡು ವರ್ಷಗಳ ಬಳಿಕ ಸ್ವತಂತ್ರ ವಕೀಲರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.

 * ಅವರ ಮಾರ್ಗದರ್ಶನದಲ್ಲಿ 55ಕ್ಕೂ ಹೆಚ್ಚು ವಕೀಲರು ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಮುಖ ಶಿಷ್ಯರಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಅವರು ಸಹ ಒಬ್ಬರು. 


ಸನ್ಮಾನ ಮತ್ತು ಸಾರ್ವಜನಿಕ ಕೊಡುಗೆ

 * ಕಾನೂನು ಕ್ಷೇತ್ರದಲ್ಲಿನ ಅವರ ಅಸಾಧಾರಣ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2020ರಲ್ಲಿ ಅವರಿಗೆ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

 * ಕಾನೂನು ಸೇವೆಗಳ ಜೊತೆಗೆ, ಅವರು ಜೈನ ಸಮುದಾಯದ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜೋನ್ನತಿಗೆ ಕೊಡುಗೆ ನೀಡಿದ್ದರು. ಯುವ ವಕೀಲರಿಗೆ ಮಾರ್ಗದರ್ಶನ ನೀಡುವಲ್ಲಿ ಅವರು ಸದಾ ಮುಂದಿದ್ದರು.


ಸಂತಾಪ :  ನ್ಯಾಯವಾದಿ ಎಂ. ಕೆ ವಿಜಯ ಕುಮಾರ್ ಅವರ ನಿಧನಕ್ಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡು ಬಿದಿರೆ ಇವರು ಸದ್ಗತಿ ಕೋರಿ ಶ್ರೀ ಜಿನೇಂದ್ರ ಭಗವಂತ ರಲ್ಲಿ ಪ್ರಾರ್ಥಿಸಿದ್ದಾರೆ.


ತಜ್ಞ ವಕೀಲರು ಸಂಘಟಕ ಉತ್ತಮ ವಾಗ್ಮಿ ಅವರ ಧಾರ್ಮಿಕ ಮುಂದಾಳತ್ವ ದಲ್ಲಿ ಅನೇಕ ಜಿನ ಮಂದಿರ ಗಳ ಜೀರ್ಣೋದ್ದಾರ ಪಂಚ ಕಲ್ಯಾಣ ಆರಾಧನೆ ಗಳು ನಡೆಸಿ ದ್ದಾರೆ, ಅನೇಕ ಸಂಸ್ಥೆ ಗಳಿಗೆ ಧಾನ ಧರ್ಮ ದ ಮೂಲಕ ಸಹಕಾರ ಮನೋ ಭಾವನೆ ಹೊಂದಿದ್ದರು.


ಶ್ರೀ ಮಠ ದ ಹಿಂದಿನ ಪೂಜ್ಯ ರಿಗೂ ನಮಗೂ ತುಂಬಾ ಆತ್ಮೀಯ ರಾಗಿದ್ದರು ಅವರ ನಿದನ ದಿಂದ ಓರ್ವ ತಜ್ಞ ಅನುಭವಿ ನ್ಯಾಯದೀಶ ರನ್ನು ಕಳೆದು ಕೊಂಡಂತಾಗಿದೆ.


ಅವರ ಅಗಲುವಿಕೆ ಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಇಬ್ಬರು ಪುತ್ರರು ಆಪಾರ ಬಂಧು ಬಳಗ ಕ್ಕೆ ಸಿಗಲಿ ಎಂದು ತಮ್ಮ ಸಂತಾಪ ಸಂದೇಶ ದಲ್ಲಿ ತಿಳಿಸಿ ದ್ದಾರೆ

Post a Comment

0 Comments