ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನಡೆದ 4ನೇ ವರ್ಷದ ಶಾರದೋತ್ಸವದ ಮೊದಲ ದಿನದಂದು, 'ಬನ್ನಡ್ಕ ಶ್ರೀ ಶಾರದೆ' ಎಂಬ ಕನ್ನಡ ಭಕ್ತಿಗೀತೆಯನ್ನು ಬಿಡುಗಡೆಗೊಳಿಸಲಾಯಿತು.

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನಡೆದ 4ನೇ ವರ್ಷದ ಶಾರದೋತ್ಸವದ ಮೊದಲ ದಿನದಂದು, 'ಬನ್ನಡ್ಕ ಶ್ರೀ ಶಾರದೆ' ಎಂಬ ಕನ್ನಡ ಭಕ್ತಿಗೀತೆಯನ್ನು ಬಿಡುಗಡೆಗೊಳಿಸಲಾಯಿತು. 



ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾದ ಆಡಳಿತ ನಿರ್ದೇಶಕರಾದ ರಾಮಕೃಷ್ಣ ಆಚಾರ್ ಅವರು ಭಕ್ತಿಗೀತೆಯನ್ನು ಬಿಡುಗಡೆಗೊಳಿಸಿ, ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಾಣೂರು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಶಾರದೋತ್ಸವ ಟ್ರಸ್ಟ್‌ನ ಅಧ್ಯಕ್ಷ ಎಂ. ದಯಾನಂದ ಪೈ, ಪ್ರಧಾನ ಕಾರ್ಯದರ್ಶಿ ಸೂರಜ್ ಮಾರ್ನಾಡ್ ಮತ್ತು ಪಡುಮಾರ್ನಾಡು ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಉಪಸ್ಥಿತರಿದ್ದರು.

ಭಕ್ತಿಗೀತೆಯ ಕುರಿತು:

ಈ ಗೀತೆಗೆ ವನಿತಾ ಬಿ.ಜಿ. ಅವರು ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಉಷಾ ಡಿ.ಪೈ, ಸಹನಾ ಯಶವಂತ ಆಚಾರ್ಯ ಮತ್ತು ಪ್ರತಿಭಾ ಪಿ. ಶೆಣೈ ಅವರು ನಿರ್ಮಾಣ ಮಾಡಿದ್ದಾರೆ. ಶ್ವೇತಾ ಪ್ರವೀಣ್ ಆಚಾರ್ಯ ಗೀತೆಯನ್ನು ಹಾಡಿದ್ದು, ಪುಚ್ಚೇರ್ ಟ್ಯಾಬ್ ಸ್ಟುಡಿಯೋದ ಸಂತೋಷ್ ಪುಚ್ಚೆರ್ ಧ್ವನಿಮುದ್ರಣ (ರೆಕಾರ್ಡಿಂಗ್) ಮಾಡಿದ್ದಾರೆ. ಯಶವಂತ್ ಕುಲಾಲ್ ಅವರು ಪ್ರಚಾರ ಕಲೆಯಲ್ಲಿ ಸಹಕರಿಸಿದ್ದಾರೆ.



Post a Comment

0 Comments