ಟೀಮ್ ಏಕದಂತ ಪಿಲಿ ಏಸ: ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ಗೌರವ

ಜಾಹೀರಾತು/Advertisment
ಜಾಹೀರಾತು/Advertisment

 ಟೀಮ್ ಏಕದಂತ ಪಿಲಿ ಏಸ: ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ಗೌರವ

ಮೂಡುಬಿದಿರೆ: ಮಂಗಳೂರಿನ ಕೂಳೂರು ನಿಸರ್ಗ ನಿರ್ವಾಣ ರಿವರ್ ಹೌಸ್‌ನಲ್ಲಿ ಅ.2ರಂದು ನಡೆದ ಟೀಮ್ ಏಕದಂತ ಆಶ್ರಯದ ದ್ವಿತೀಯ ವರ್ಷದ 'ಪಿಲಿ ಏಸ ನಲಿಕೆ' ಕಾರ್ಯಕ್ರಮದಲ್ಲಿ, ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ಗೌರವ ಸನ್ಮಾನ ನೀಡಲಾಯಿತು.


 

ಸಮಾಜಕ್ಕೆ ಶಾಲೆಯು ನೀಡುತ್ತಿರುವ ವಿಶೇಷ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದ್ದು, ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ. ಶೆಟ್ಡಿಗಾರ್ ಮತ್ತು ಉಷಾಲತಾ ದಂಪತಿಯನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ, ಶಾಲೆಯ ಸಾಧಕ ವಿಶೇಷ ಮಕ್ಕಳಾದ ಅಫ್ರೀನ್, ರಂಜಿತ್ ಪ್ರಸಾದ್, ಸಹಳಾ ಮತ್ತು ಮಹಮ್ಮದ್ ಶಯನ್ ಅವರನ್ನು ಹಾಗೂ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು.

Post a Comment

0 Comments