ಮೂಡುಬಿದಿರೆ ಕಡಲಕೆರೆಗೆ 20 ಸಾವಿರ ಮೀನು ಮರಿಗಳ ಸಮಪ೯ಣೆ, ಬೋಟಿಂಗ್ ಗೆ ಚಾಲನೆ
ಮೂಡುಬಿದಿರೆ: ಅರಣ್ಯ ಇಲಾಖೆ ಕುಂದಾಪುರ ವಿಭಾಗ, ವಲಯ ಅರಣ್ಯ ಇಲಾಖೆ ಮೂಡುಬಿದಿರೆ ಹಾಗೂ ರೋಟರಿ ಕ್ಲಬ್ ಇವುಗಳ ಸಹಯೋಗದಲ್ಲಿ ಕಡಲಕೆರೆಗೆ ಮೀನು ಬಿಡುವ ಕಾರ್ಯಕ್ರಮ, ವನಮಹೋತ್ಸವ ಹಾಗೂ ಬೋಟಿಂಗ್ಗೆ ಶಾಸಕ ಉಮಾನಾಥ ಎ ಕೋಟ್ಯಾನ್ ಅವರು ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಕೋಟ್ಯಾನ್ ಅವರು ಕಡಲಕೆರೆಗೆ ಕಾಟ್ಲ ಮತ್ತು ರೋಹೋ ಜಾತಿಯ 20 ಸಾವಿರ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಗಿದೆ. ಈ ಕೆರೆಯಲ್ಲಿ ೩೬೫ ದಿನಗಳ ಕಾಲವೂ ನೀರು ನಿಲ್ಲಿಸಿ ಬೋಟಿಂಗ್ ನಿರಂತರ ನಡೆಯಬೇಕು ಈ ನಿಟ್ಟಿನಲ್ಲಿ ದೊಡ್ಡದಾದ ಯೋಜನೆಯೊಂದನ್ನು ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರಗಳು ಕೈಗೊಂಡಿದ್ದು ಇನ್ನು ಎರಡು-ಮೂರು ತಿಂಗಳೊಳಗಾಗಿ ಈ ಯೋಜನೆಯ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲಾಗುವುದು. ಕಡಲಕೆರೆಯ ಬಳಿ ಸುಸಜ್ಜಿತವಾದ ವಾಕಿಂಗ್ ಟ್ರ್ಯಾಕ್ ಮಾಡುವ ಯೋಚನೆಯೂ ಇದೆ ಎಂದ ಅವರು ಪರಿಸರ ತಜ್ಞ ಎಲ್.ಸಿ ಸೋನ್ಸ್ ಅವರ ಮುಂದಾಲೋಚನೆಯಂತೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕಡಲಕೆರೆ ನಿಸಗ೯ಧಾಮವು ಜನಾಕಷ೯ಣೆ ಕೇಂದ್ರವಾಗುತ್ತಿದೆ ಎಂದರು.
ಇದೇ ಸಂದಭ೯ದಲ್ಲಿ ಗಿಡ ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು.ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯ ಪಿ.ಕೆ ಥೋಮಸ್, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ರೋಟರಿ ಅಧ್ಯಕ್ಷ ನಾಗರಾಜ ಹೆಗ್ಡೆ, ರೋಟರಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿ. ಎಂ, ಸಿ. ಹೆಚ್. ಗಫೂರ್, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಹಿರಿಯ ವಕೀಲ ಕೆ. ಆರ್. ಪಂಡಿತ್, ಬೋಟಿಂಗ್ ವ್ಯವಸ್ಥಾಪಕ ನಝೀರ್ ಉಪಸ್ಥಿತರಿದ್ದರು. ಉಪವಲಯಾರಣ್ಯಾಧಿಕಾರಿಗಳು, ವಿವಿಧ ಸಂಸ್ಥೆಗಳ ಸದಸ್ಯರು ಈ ಸಂದಭ೯ದಲ್ಲಿದ್ದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ., ಕಾರ್ಯಕ್ರಮ ನಿರೂಪಿಸಿದರು.
0 Comments