ಕರ್ನಾಟಕ ರಾಜ್ಯ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜ ಮಹಾಮಂಡಲ ರಚನೆ:ಅಧ್ಯಕ್ಷರಾಗಿ ಮಹೇಶ್ ಠಾಕೂರ್ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment


 ಕರ್ನಾಟಕ ರಾಜ್ಯ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜ ಮಹಾಮಂಡಲ ರಚನೆ:ಅಧ್ಯಕ್ಷರಾಗಿ ಮಹೇಶ್ ಠಾಕೂರ್ ಆಯ್ಕೆ

ರಾಜ್ಯದ ಕರ್ನಾಟಕ ರಾಜ್ಯ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜ ಮಹಾಮಂಡಲ ಸಮಾಜದ ಬೆಳಗಾಂ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ, ಸಮಾಜ ಪ್ರಮುಖರ ಸಂಘಟನಾ ಸಭೆಯು ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜ ಮಹಾಮಂಡಲ ರಚನೆ ಬಗ್ಗೆ ಕಶೆಕೋಡಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕಲ್ಲೇಗ ಸಂಜೀವ್ ನಾಯಕ್ ರವರ ಸಭಾಧ್ಯಕ್ಷತೆಯಲ್ಲಿ ಬೆಂಗಳೂರಿನ ಡಾ.ಜಯಪ್ರಕಾಶ್ ಮತ್ತು ಮಹೇಶ್ ಠಾಕೂರ್ ರವರ ಮುಂದಾಳತ್ವದಲ್ಲಿ ಜರಗಿತು.

 ಸಭಾ ವೇದಿಕೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಹಿರಿಯರು ಉಪಸ್ಥಿತರಿದ್ದು ಸಮಾಜ ಬಾಂಧವರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಮಹಾಮಂಡಲದ ಪದಾಧಿಕಾರಿಗಳನ್ನು ನಿಯುಕ್ತಿ ಗೊಳಿಸಲಾಯಿತು. 

  ರಾಜ್ಯ ಮಹಾಮಂಡಲದ ಅಧ್ಯಕ್ಷರಾಗಿ ಮಹೇಶ್ ಠಾಕೂರ್ ಪರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ್ ಶೆಣೈ ಮರೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವಾನಂದ ಪ್ರಭು ಇರುವೈಲು, ಕೋಶಾಧಿಕಾರಿಯಾಗಿ ಸಂಜಯ್ ಪ್ರಭು ಮಂಗಳೂರು ರವರನ್ನು ನೇಮಿಸಲಾಯಿತು. 

 ಪ್ರವೀಣ್ ದರ್ಬೆ, ರತ್ನಾಕರ್ ಭಟ್, ಡಾ. ಪ್ರವೀಣ್ ಚಂದ್ರ ನಾಯಕ್, ದಿನೇಶ್ ಪ್ರಭು, ಸತೀಶ್ ಪಾಟೀಲ್, ಚಂದ್ರಶೇಖರ ಪ್ರಭು, ಜಯಂತ ನಾಯಕ್ ಉಪಾಧ್ಯಕ್ಷರುಗಳಾಗಿ, ಕಲ್ಲೇಗ ಸಂಜೀವ ನಾಯಕ್, ಡಾ. ಜಯಪ್ರಕಾಶ್, ರಾಮಚಂದ್ರ ಸಾಮಂತ್ ಅಂಕೋಲಾ, ಡೆಚ್ಚಾರ್ ಗಣಪತಿ ಶೆಣೈ, ಭರತ್ ಪ್ರಭು, ಸಂಜಯ್ ಕುಲಕರ್ಣಿ ಬೆಳಗಾಂ ಗೌರವ ಸಲಹೆಗಾರರಾಗಿ ಆಯ್ಕೆಗೊಂಡರು. 

 ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿ ಸಮಾಜ ಬಾಂಧವರ ಸಭೆಯನ್ನು ಆಯೋಜಿಸಿ ಆಯಾ ವಲಯದಿಂದ ಉಪಾಧ್ಯಕ್ಷ, ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ಕರ್ನಾಟಕ ರಾಜ್ಯ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಮಹಾಮಂಡಲವನ್ನು ರಚನೆ ಮಾಡಿ ನೋಂದಾವಣೆಗೊಳಿಸಲು ನಿರ್ಣಯಿಸಲಾಯಿತು.

Post a Comment

0 Comments