ಮೂಡುಬಿದಿರೆಯಿಂದ ಶ್ರೀ ಕ್ಷೇತ್ರ ಪೊಳಲಿಗೆ ಚೆಂಡು
ಮೂಡುಬಿದಿರೆ : ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇಗುಲದ ಜಾತ್ರೆಯ `ಚೆಂಡು' ಮೂಡುಬಿದಿರೆ ಗಾಂಧಿನಗರದ ಎಂ. ಪದ್ಮನಾಭ ಅವರು ಶನಿವಾರ ಪೊಳಲಿ ದೇಗುಲಕ್ಕೆ ಕ್ಷೇತ್ರದ ಪ್ರತಿನಿಧಿಗಳ ಮೂಲಕ ಹಸ್ತಾಂತರಿಸಿದರು.
ಪದ್ಮನಾಭ ಅವರು ಕಳೆದ ೨೬ ವರ್ಷಗಳಿಂದಲೂ ಸಾಂಪ್ರದಾಯಿಕವಾಗಿ ನಿರ್ಮಿಸುತ್ತ ಬರುತ್ತಿದ್ದರು.
ನಂತರ ಅದನ್ನು ಅವರ ನಿವಾಸದ ಆವರಣದಲ್ಲಿರುವ ಮಹಮ್ಮಾಯಿ ದೇವಿಯನ್ನು ಶನಿವಾರ ಮುಂಜಾನೆ ಅರ್ಚಕ ಜಯಪ್ರಕಾಶ ಅವರು ಆರಾಧಿಸಿ, ಚರ್ಮದಲ್ಲಿ ರಚಿಸಲಾಗಿರುವ `ಚೆಂಡನ್ನು' ಪೂಜಿಸಿದರು. ಪೊಳಲಿ ಚೆಂಡು ಯಶಸ್ವಿಯಾಗಿ ನೆರವೇರಲೆಂದು ಸ್ಥಾನೀಯ ದೈವಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀ ಕ್ಷೇತ್ರ ಪೊಳಲಿಗೆ ಚೆಂಡನ್ನು ಸಮರ್ಪಿಸಲಾಯಿತು.
ಪೊಳಲಿಯಿಂದ ಬಂದ ಲೋಕಯ್ಯ, ಉಮೇಶ, ಗಂಗಾಧರ, ಗೋಪಾಲ, ಧನರಾಜ್, ಪ್ರಸಾದ್, ಧನು, ಸೌಮ್ಯ, ಪ್ರಕಾಶ್, ತೇಜಲ್ ಇವರು ಕ್ಷೇತ್ರದ ಪರವಾಗಿ ಚೆಂಡನ್ನು ಸ್ವೀಕರಿಸಿದರು. ಪದ್ಮನಾಭ ಅವರ ತಾಯಿ ಲಿಂಗಮ್ಮ, ಸಹೋದರ ಚಂದ್ರಶೇಖರ, ಗಾಂಧಿನಗರದ ಲಕ್ಷಣ ಎಂ.ಎಸ್., ಲಕ್ಷೀನಾರಾಯಣ, ವಿಶ್ವನಾಥ ದೇವಾಡಿಗ, ಪ್ರಕಾಶ್ ಉಪಸ್ಥಿತರಿದ್ದರು.
ವಿವಿಧ ದೇಗುಲಗಳಿಗೆ ಚೆಂಡು ತಯಾರಿಸುವುದರಲ್ಲಿ ಹೆಸರಾಗಿರುವ ಪದ್ಮನಾಭ ಅವರು ಮೂಡುಬಿದಿರೆಯ ಎಂಸಿಎಸ್ ಸೊಸೈಟಿಯ ನಿರ್ದೇಶಕರಾಗಿ ಹಲವು ಅವಧಿಗಳಿಂದಲೂ ಸೇವೆ ಸಲ್ಲಿಸುತ್ತ ಬರುತ್ತಿದ್ದಾರೆ.
0 Comments