ಮೂಡುಬಿದಿರೆ: ಹೃದಯರೋಗ, ಜೀವ ರಕ್ಷಕ ತಂತ್ರಗಳ ಕುರಿತು ಕಾಯಾ೯ಗಾರ
ಮೂಡುಬಿದಿರೆ: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಠಿಕಾನ ಇದರ ಸಹಯೋಗದಲ್ಲಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ (ರಿ) ಮೂಡುಬಿದಿರೆ ಇದರ ಆಶ್ರಯದಲ್ಲಿ ಹೃದಯ ರೋಗ (B. L. S ) ಜೀವ ರಕ್ಷಕ ತಂತ್ರಗಳು ಕುರಿತು ಮಾಹಿತಿ ಕಾಯಾ೯ಗಾರವು ಸಮಾಜ ಮಂದಿರದ ಮೀಟಿಂಗ್ ಹಾಲ್ ನಲ್ಲಿ ಶನಿವಾರ ನಡೆಯಿತು.
ಮೂಡುಬಿದಿರೆ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು ಅಧ್ಯಕ್ಷತೆಯಲ್ಲಿ ನಡೆದ ಕಾಯಾ೯ಗಾರದಲ್ಲಿ ತಂತ್ರಜ್ಞ ರಾಜ್ ಗುರು ಹೃದಯಾಘಾತವಾದಾಗ ಪ್ರಾಥಮಿಕವಾಗಿ ಕೊಡುವ ಚಿಕಿತ್ಸೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಪಿ. ಆರ್. ಓ. ಕಾತಿ೯ಕ್ ಉಪಸ್ಥಿತರಿದ್ದರು. ಡಾ. ಪ್ರೀತಮ್ ವಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ರಾಜೇಶ್ ಸುವಣ೯ ಸ್ವಾಗತಿಸಿ ವಂದಿಸಿದರು.
0 Comments