ಏ. 7-13 ಮೂಡುಬಿದಿರೆಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವ
ಮೂಡುಬಿದಿರೆ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ, 2624ನೇ ಜನ್ಮ ಕಲ್ಯಾಣ ಮಹೋತ್ಸವ, ಸಾವಿರ ಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವ ಹಾಗೂ ಆಚಾರ್ಯ 108 ವಿದ್ಯಾನಂದ ಮುನಿ ಮಹಾರಾಜರ ಜನ್ಮ ಶತಾಬ್ದಿ ಕಾಯ೯ಕ್ರಮವು ಏ. 7-13ರವರೆಗೆ ವಿವಿಧ ಧಾಮಿ೯ಕ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆಯಲಿವೆ ಎಂದು ಜೈನ ಮಠದ ಸ್ವಸ್ತೀ ಶ್ರೀ ಭಟ್ಟಾರಕ ಸ್ವಾಮೀಜಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಹಾವೀರ ಜಯಂತಿಯ ದಿನವಾದ ಏ.10ರಂದು ಸಂಜೆ, 3.30ಕ್ಕೆ ಬೆಟ್ಕೇರಿಯಿಂದ ಮಹಾವೀರ ಸ್ವಾಮಿಯ ವೖಭವದ ಮೆರವಣಿಗೆಯು ಸಾವಿರ ಕಂಬದ ಬಸದಿ ವರೆಗೆ ನಡೆಯಲಿದ್ದು 125 ಮಂದಿಯಿಂದ ಸಾಮೂಹಿಕ ಅಷ್ಟ ವಿಧಾಚ೯ನೆ ಸೇವೆ ನಡೆಯಲಿದೆ.
ಏ., 11ರಂದು ರಾತ್ರಿ 7.30ರಿಂದ ಸಾವಿರ ಕಂಬದ ಬಸದಿಯಲ್ಲಿ ಕಿರಿಯ ರಥೋತ್ಸವ, 2624ನೇ ಮಹಾವೀರ ಜನ್ಮ ಕಲ್ಯಾಣ ನಡೆಯಲಿದ್ದು ಮೂಡುಬಿದಿರೆ ಶ್ರೀಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಕೆ. ಹೇಮರಾಜ್ ಅವರು ಉದ್ಘಾಟಿಸಲಿದ್ದಾರೆ. ಉದ್ಯಮಿ ಪುಪ್ಪರಾಜ್ ಜೈನ್ ಮಹಾವೀರ ಜ್ಯೋತಿ ಬೆಳಗಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್, ಕೆ. ಸುನೀಲ್ ಜೈನ್ ರೋಟಕ್, ಕೆ. ಪಿ. ಜಗದೀಶ್ ಅಧಿಕಾರಿ, ಸಂಪತ್ ಸಾಮ್ರಾಜ್ಯ ಶಿತಾ೯ಡಿ, ವಕೀಲ ಎಂ. ಬಾಹುಬಲಿ ಪ್ರಸಾದ್, ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಭಾಗವಹಿಸಲಿದ್ದಾರೆ.
ಸಂಶೋಧಕ ಅಕು೯ಳ ಬೀಡಿನ ಡಾ. ಜಯಕುಮಾರ್ ಶೆಟ್ಟಿ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಸುನೀಲ್ ಜೈನ್- ಅಚ೯ನಾ ರೋಟಕ್, ವೀರಪ್ರಸಾದ್- ಸಿದ್ಧಾಥ೯ ಜೈನ್ ವಯನಾಡು ಹಾಗೂ ವೃಷಭ ಜೈನ್- ಪುಷ್ಪಾ ಜೈನ್ ಬೆಂಗಳೂರು ಇವರಿಗೆ ಸನ್ಮಾನ ನಡೆಯಲಿದೆ. ನಂತರ ರಾತ್ರಿ 8.30ರಿಂದ ಧವಲತ್ರಯ ಜೈನಕಾಶಿ ಟ್ರಸ್ಟ್ (ರಿ), ಮೂಡುಬಿದಿರೆ, ಶ್ರೀ ಜೈನ ಮಠ ಟ್ರಸ್ಟ್ ವತಿಯಿಂದ ಎಕ್ಸಲೆಂಟ್ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾಯ೯ಕ್ರಮ ನಡೆಯಲಿದೆ.
ಏ. 12ರಂದು ಶ್ರಮಣ ಸಂಸ್ಕೃತಿ ಸಮ್ಮೇಳನ ನಡೆಯಲಿದ್ದು ರಾತ್ರಿ 7.35ಕ್ಕೆ ತ್ರಿಭುವನ ತಿಲಕ ಚೂಡಾಮಣಿ ಬಸದಿ ಹಿರಿಯ ರಥೋತ್ಸವ ನಡೆಯಲಿದೆ. ಮೂಡುಬಿದಿರೆ ಜೈನ ಮಠದ ಭಟ್ಟಾರಕ ಡಾ. ಚಾರುಕೀತಿ೯ ಪಂಡಿತಾಚಾಯ೯ ಪಟ್ಟಾಚಾಯ೯ವಯ೯ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀವ೯ಚನ ನೀಡಲಿದ್ದಾರೆ.
ಕಾಕ೯ಳದ ಹಿರಿಯ ವಕೀಲ ಎಂ. ಕೆ. ವಿಜಯ ಕಃಮಾರ್ ಶ್ರಮಣ ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಉದ್ಯಮಿ ಶೈಲೇಂದ್ರ ಕುಮಾರ್ ಶ್ರಮಣಜ್ಯೋತಿ ಬೆಳಗಿಸಲಿದ್ದಾರೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ನೋಟರಿ ಶ್ವೇತಾ ಜೈನ್, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಮಂತ್ ಜೈನ್ ಪ್ರಧಾನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಕೀಲ ಎಂ. ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಎಂ. ಸುದೇಶ್ ಕುಮಾರ್, ಉದ್ಯಮಿ ಶೈಲೇಂದ್ರ ಕುಮಾರ್ ಹಾಗೂ ಜೈನ್ ಮಿಲನ್ ನ ಪುಷ್ಪರಾಜ್ ಜೈನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments