ಎಕ್ಸಲೆ೦ಟ್ ವಿದ್ಯಾರ್ಥಿಗಳ ರ್‍ಯಾಂಕ್‌ ಸಾಧನೆ- 13 ಸ್ಥಾನಗಳನ್ನು ಮಡಿಲಿಗೆಳೆದುಕೊ೦ಡ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆ೦ಟ್ ಕಾಲೇಜು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ

ಎಕ್ಸಲೆ೦ಟ್ ವಿದ್ಯಾರ್ಥಿಗಳ ರ್‍ಯಾಂಕ್‌ ಸಾಧನೆ- 13 ಸ್ಥಾನಗಳನ್ನು ಮಡಿಲಿಗೆಳೆದುಕೊ೦ಡ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆ೦ಟ್ ಕಾಲೇಜು


ಮೂಡುಬಿದಿರೆ: 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾರ್ಚ್ 1 ರಿ೦ದ ಮಾರ್ಚ್ 20ರ ವರಗೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನದೊ೦ದಿಗೆ 13 ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಮೂಡುಬಿದಿರೆಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವಕಾಲೇಜುಉತ್ತಮಫಲಿತಾಂಶ ದಾಖಲಿಸಿ ಮತ್ತೊಮ್ಮೆಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ.



ಸ೦ಸ್ಥೆಯಲ್ಲಿ ಪರೀಕ್ಷೆ ಬರೆದ 953 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ ರ್‍ಯಾಂಕ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದಿದ್ದಾರೆ.



ಜೈನ ಕಾಶಿಯಾದ ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ರೂಪುಗೊ೦ಡಿದ್ದು, ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆ ಕಳೆದ ಹದಿಮೂರು ವರ್ಷಗಳಿ೦ದ ಶಿಕ್ಷಣ ಕ್ಷೇತ್ರಕ್ಕೆಅಪಾರವಾದಕೊಡುಗೆಯನ್ನು ಸಲ್ಲಿಸುತ್ತಿದ್ದು, ಶಿಸ್ತು ಸ೦ಸ್ಕಾರ ಬದ್ಧಜೀವನದಧ್ಯೇಯೋದ್ದೇಶವನ್ನು ಇಟ್ಟುಕೊ೦ಡು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರ೦ತರವಾಗಿ ಅತ್ಯುತ್ತಮ ಫಲಿತಾ೦ಶವನ್ನು ದಾಖಲಿಸುತ್ತಾ ಬ೦ದಿರುತ್ತದೆ.


ವಿಜ್ಞಾನ ವಿಭಾಗದಲ್ಲಿ ಸ೦ಸ್ಥೆಯ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪುರುಷೋತ್ತಮ ತುಳುಪುಳೆ ಮತ್ತುಜ್ಯೋತಿ ತುಳುಪುಳೆ ಅವರ ಪುತ್ರಪ್ರಮುಖ್ ತುಳುಪುಳೆ (596) 4ನೇ ಸ್ಥಾನ, ಬೆಳ್ತ೦ಗಡಿಯ ಡಾಗುರುದತ್‌ ಕಾಮತ್ ಮತ್ತುಗಾಯತ್ರಿ ಜಿ ಕಾಮತ್‌ಅವರ ಪುತ್ರ ರೋಹಿತ್‌ಕಾಮತ್ (593)7ನೇ ಸ್ಥಾನ, ಬೆಳ್ತ೦ಗಡಿಯ ಹರೀಶ್ ಶೆಟ್ಟಿ ಮತ್ತು ಸುಮಿತಾಅವರ ಪುತ್ರ ಶಿಶಿರ್ ಎಚ್ ಶೆಟ್ಟಿ(593)7ನೇ ಸ್ಥಾನ, ಮ೦ಗಳೂರಿನ ವಿನೋದ್ ಸೋನ್ಸ್ ಮತ್ತು ಸೌಮ್ಯಾ ಸೋನ್ಸ್‌ಅವರ ಪುತ್ರ ಥಿಯಾನ್ ಮಹೇಶ್ ಸೋನ್ಸ್(593)7ನೇ ಸ್ಥಾನ,ಕೊಡಗಿನ ವಾಸುದೇವ ಎ ಮತ್ತು ಶ್ರುತಿ ಎ೦ ಜೆಅವರ ಪುತ್ರವರುಣ್ ವಿ (593) 7ನೇ ಸ್ಥಾನ,ಮೂಡುಬಿದಿರೆಯಗಣೇಶ್ ಮೊಗೆರಾಯ ಮತ್ತು ಶುಭಾಅವರ ಪುತ್ರಿ ಸುಜನಾ (591) 9ನೇ ಸ್ಥಾನ,ಮೂಡುಬಿದಿರೆಯ ಪಾ೦ಡುರ೦ಗ ಪೈ ಮತ್ತು ಸವಿತಾ ಪೈ ಅವರ ಪುತ್ರಿಕೆ ಸುಮಾ ಪೈ (591) ಒ೦ಭತ್ತನೇ ಸ್ಥಾನ, ಸಕಲೇಶಪುರದ ವಿಶ್ವಾಜೆಎಸ್‌ಮತ್ತು ಬವಿತಾ ಡಿ ಎಸ್‌ಅವರ ಪುತ್ರ ಧನಾ೦ಶ್ ವಿ(590) ಹತ್ತನೇ ಸ್ಥಾನ, ಮಣಿಪುರದ ಲಕ್ಷ್ಮಣ್ ಶರ್ಮಾ ಮತ್ತುಜುಮಾ ಶರ್ಮಾಅವರ ಪುತ್ರದಿವ್ಯೇಶ್ ಶರ್ಮಾ(590) ಹತ್ತನೇ ಸ್ಥಾನ, ಬಳ್ಳಾರಿಯ ಎಡುಲಾ ರಾಘವೇ೦ದ್ರ ಮತ್ತುಎಡುಲಾ ನಿರ್ಮಲಾಅವರ ಪುತ್ರಎಡುಲಾ ಓ೦ಸಾಯಿ(590) ಹತ್ತನೇ ಸ್ಥಾನ ಪಡೆದಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಚಿಕ್ಕಮಗಳೂರಿನಅರುಣ್ ಕ್ಲೆಮೆ೦ಟ್ ಗೋಮ್ಸ್ ಮತ್ತು ಸುಹಾನ ಮೆಟಿಲ್ಡಾ ವಾಸ್ ದ೦ಪತಿಯ ಪುತ್ರಅನೂಪ್ ಶಾನ್‌ಗೋಮ್ಸ್(596) ರಾಜ್ಯಕ್ಕೆ ನಾಲ್ಕನೇ ಸ್ಥಾನ, ಉಪ್ಪಿನ೦ಗಡಿಯ ಹರೀಶ್ ಕೆ ಮತ್ತು ಸೀಮಾ ಪೆಜತ್ತಾಯಅವರ ಪುತ್ರಿಅದಿತಿ ಕೆ (594) ಆರನೇ ಸ್ಥಾನ, ಮೂಡುಬಿದಿರೆಯ ಸುಧೀರ್ ಶೆಟ್ಟಿ ಮತ್ತು ಅಶ್ವಿನಿ ಶೆಟ್ಟಿಯ ಪುತ್ರಆದಿತ್ಯಶೆಟ್ಟಿ (590) ಹತ್ತನೇ ಸ್ಥಾನವನ್ನು ಪಡೆದಿದ್ದುಸ೦ಸ್ಥೆಗೆ ಕೀರ್ತಿಯನ್ನು ತ೦ದಿದ್ದಾರೆ.


ಪರೀಕ್ಷೆಗೆ ಹಾಜರಾದ 953 ವಿದ್ಯಾರ್ಥಿಗಳಲ್ಲಿ  595ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೆಕಡಾ ನೂರು ಫಲಿತಾ೦ಶ ದಾಖಲಾಗಿದ್ದುಸ೦ಸ್ಥೆಯ ಒಟ್ಟು ಫಲಿತಾ೦ಶ 99.895ಎ೦ದು ಸ೦ಸ್ಥೆಯ ಪ್ರಕಟಣೆ ತಿಳಿಸಿದೆ.


ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯಅಧ್ಯಕ್ಷರಾದಯುವರಾಜಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ಮತ್ತುಉಪನ್ಯಾಸಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.

Post a Comment

0 Comments