ಕುಂದಾಪುರ : ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಿ ಕ್ಷೇತ್ರದಲ್ಲಿ ಹುಂಬುಜ ಮಠದ ಪೀಠಾಧೀಶರಾದ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ ಮತ್ತು ಶುಭಾಶೀರ್ವಾದದೊಂದಿಗೆ ಏ. 6ರಂದು 27 ಅಡಿ ಎತ್ತರದ ಏಕಶಿಲಾ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಹಾಗೂ 21 ಅಡಿ ಎತ್ತರದ ಭಗವಾನ್ ಶ್ರೀ ರಾಮಚಂದ್ರ ದೇವರ ಪ್ರತಿಮೆ ಸ್ಥಾಪನೆ ಮಾಡಲಾಯಿತು. ಇದು ಉಡುಪಿ ಜಿಲ್ಲೆಯ ಎರಡನೇ ಬಾಹುಬಲಿ ವಿಗ್ರಹವಾಗಿದೆ.
ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ಧರ್ಮರಾಜ್ ಜೈನ್ ಮತ್ತು ವನಿತಾ ಧರ್ಮರಾಜ್ ದಂಪತಿ ವಿಗ್ರಹಕ್ಕೆ ಆರತಿ ಬೆಳಗಿದರು. ಈ ಸಂದರ್ಭ ಗ್ರಾ. ಪಂ. ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಡಾ. ಆಕಾಶ್‌ರಾಜ್, ಮೂಡುಬಿದಿರೆ 18 ಬಸದಿಗಳ ಆಡಳಿತ ಮೊಕ್ತೇಸರ ಆದರ್ಶ್ ಎಂ., ಸುಭಾಶ್ ಜೈನ್ ಕುಂದಾಪುರ, ನಾಗರಾಜ್, ಪದ್ಮಪ್ರಸಾದ್ ಜೈನ್, ಡಾ. ಅಕ್ಷತಾ ಆದರ್ಶ್, ಎಂ.ಎನ್. ವಿಜಯೇಂದ್ರ ಮಳೂರು, ಪಾವನ ರಾಜ್, ಪಾರೀಷ್ ಹಾಗೂ ಊರ, ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು, ಈ ಪುಣ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
0 Comments