ಮೂಡುಬಿದಿರೆಯಲ್ಲಿ ಅಪ್ರಾಪ್ತ ಬಾಲಕಿಯರೀವ೯ರಿಗೆ ಲೈಂಗಿಕ ಕಿರುಕುಳ : ಯುವಕ ಮತ್ತು ಮಧ್ಯವಯಸ್ಕನ ವಿರುದ್ಧ ಪೊಕ್ಸೋ ಪ್ರಕರಣ ದಾಖಲು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಅಪ್ರಾಪ್ತ ಬಾಲಕಿಯರೀವ೯ರಿಗೆ ಲೈಂಗಿಕ ಕಿರುಕುಳ : ಯುವಕ ಮತ್ತು ಮಧ್ಯವಯಸ್ಕನ ವಿರುದ್ಧ ಪೊಕ್ಸೋ ಪ್ರಕರಣ ದಾಖಲು

  


ಮೂಡುಬಿದಿರೆ : ಎರಡು ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರೀವ೯ರಿಗೆ  ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ  ಮತ್ತು ಮಧ್ಯ ವಯಸ್ಸಿನ ವ್ಯಕ್ತಿ ಸಹಿತ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿ ಪೊಕ್ಸೋ ಪ್ರಕರಣ ದಾಖಲಿಸಿದ್ದಾರೆ.

  ಪ್ರಾಂತ್ಯ ಗ್ರಾಮದ ಅಜಂಕಲ್ಲುವಿನ ನಿವಾಸಿ ಪ್ರಕಾಶ್ (57) ಹಾಗೂ ಆಲಂಗಾರು ಉಮಿಯದ ಪವನ್ (19) ಎಂಬವರು ಬಂಧಿತ ಆರೋಪಿಗಳು.

  ಪ್ರಾಂತ್ಯ ಅಜಂಕಲ್ಲುವಿನ ಪ್ರಕಾಶ್ ಎಂಬಾತ ತನ್ನ ಮನೆಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಲಕಿಯ ಮನೆಗೆ ಯಾರೂ ಇಲ್ಲದಾಗ ಕಳೆದ ಒಂದು ವಷ೯ದಿಂದ ಬರುತ್ತಿದ್ದು ಈ ಸಂದಭ೯ ಸಂತ್ರಸ್ತೆ ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುತ್ತಾನೆ ಈ ಬಗ್ಗೆ ಸಂತ್ರಸ್ತೆಯ ಹೆತ್ತವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರು. 

  ಇನ್ನೊಂದು ಪ್ರಕರಣ : ಮಾ. 8ರಂದು ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವಿದ್ಯಾಗಿರಿ ಬಳಿ, ಜನತಾ ನಗರದಲ್ಲಿ ಟ್ಯೂಶನ್ ಮುಗಿಸಿ ಸೈಕಲ್ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಆಲಂಗಾರು ಉಳಿಯದ ನಿವಾಸಿ ಪವನ್ ಎಂಬಾತ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳವನ್ನು ನೀಡಿದ್ದು ಆಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಸೈಕಲ್ ಅಲ್ಲೇ ಬಿಟ್ಟು, ಮನೆಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾಳೆ. ಆತ ಆತನ ಸ್ಕೂಟಿಯಲ್ಲಿ ಪರಾರಿಯಾಗಿದ್ದನು.

  ಈ ಬಗ್ಗೆ ಪೊಲೀಸರು ಕಳೆದ ಮೂರು ದಿನಗಳಿಂದ ಸಿಸಿ ಕೆಮರಾ ಫೂಟೇಜ್ ಮೂಲಕ ಆರೋಪಿಯ ಹುಡುಕಾಟದಲ್ಲಿದ್ದರು.  ಮೂಡುಬಿದಿರೆ ಅಸುಪಾಸಿನಲ್ಲಿ ಇತ್ತೀಚೆಗೆ ಇಂತದಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿವಿಧ ಮೂಲಗಳಿಂದ ಈತನ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಮಂಗಳವಾರ ಅಲಂಗಾರು ಬಳಿ ಈತನನ್ನು ಬಂಧಿಸಿದ್ದಾರೆ. 

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಅಖಿಲ್ ಅಹಮದ್, ನಾಗರಾಜ್ ಲಂಬಾಣಿ, ಮೊಹಮ್ಮದ್ ಹುಸೇನ್, ಮೊಹಮ್ಮದ್ ಇಕ್ಬಾಲ್  ಕಾರ್ಯಾಚರಣೆ ನಡೆಸಿದರು.

ಎರಡೂ ಪ್ರಕರಣದ ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments