ವೇಷ ಹಾಕಿ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ವಿಜೇಶ್ ಇನ್ನಿಲ್ಲ

ಜಾಹೀರಾತು/Advertisment
ಜಾಹೀರಾತು/Advertisment

 ವೇಷ ಹಾಕಿ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ವಿಜೇಶ್ ಇನ್ನಿಲ್ಲ


ಮೂಡುಬಿದಿರೆ: ಬ್ರಹ್ಮಕಲಶ, ಕಂಬಳ ಮುಂತಾದ ಸಂದಭ೯ಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತಿದ್ದ ಯುವಕ, ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂಡುಬಿದಿರೆ ಕಡೆಪಲ್ಲ ನಿವಾಸಿ ವಿಜೇಶ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. 

  ವಿಜೇಶ್ ಅವರಿಗೆ ಕಳೆದ 10 ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಸ್ಟ್ರೋಕ್ ಆಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು.


 ಇದೇ ಸಂದಭ೯ದಲ್ಲಿ ಬಿಪಿ ಮತ್ತು ಕಿಡ್ನಿಯ ಸಮಸ್ಯೆಯು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗೆ  ಸ್ಪಂದಿಸದಿದ್ದುದರಿಂದ ನಿನ್ನೆರಾತ್ರಿ ನಿಧನರಾಗಿದ್ದಾರೆ.

 ವಿಜೇಶ್ ಅವರ  ತಂದೆ ದಯಾನಂದ್ ಅವರು ಈ ಹಿಂದೆಯೆ ನಿಧನರಾಗಿದ್ದು ತಾಯಿ ಹಾಗೂ ವಿಶೇಷಚೇತನ ಸಹೋದರನಿದ್ದಾನೆ. ಸಹೋದರಿಗೆ ಮದುವೆಯಾಗಿದೆ. 

ಮನೆಗೆ ಆಧಾರಸ್ತಂಭವಾಗಿದ್ದ ವಿಜೇಶ್ ಅವರನ್ನು ವಿಧಿ ಬಲಿ ತೆಗೆದುಕೊಂಡಿದೆ. 

ವಿಜೇಶ್ ಅವರು ಹಿಂದೂ ಸಂಘಟನೆ ಮತ್ತು ನೇತಾಜಿ ಬ್ರಿಗೇಡ್ ನ ಸಕ್ರೀಯ ಕಾಯ೯ಕತ೯ನಾಗಿದ್ದರು.

Post a Comment

0 Comments