ಹಿಂದೂ ಸಂಘಟನೆಯ ಕಾಯ೯ಕತ೯ ವಿಜೇಶ್ ನಿಧನ : ಅಂತಿಮ ದಶ೯ನ ಪಡೆದ ಗಣ್ಯರು

ಜಾಹೀರಾತು/Advertisment
ಜಾಹೀರಾತು/Advertisment

 ಹಿಂದೂ ಸಂಘಟನೆಯ ಕಾಯ೯ಕತ೯ ವಿಜೇಶ್ ನಿಧನ : ಅಂತಿಮ ದಶ೯ನ ಪಡೆದ ಗಣ್ಯರು

ಮೂಡುಬಿದಿರೆ: ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿರುವ ಸಾಮಾಜಿಕ ಕಳಕಳಿಯ ಕಾಯ೯ಕತ೯, ಬಜರಂಗದಳದ ನಗರ ಸಂಚಾಲಕ ವಿಜೇಶ್ ಅಮೀನ್ (28) ಅವರ ಪಾಥಿ೯ವ ಶರೀರವನ್ನು ಆಳ್ವಾಸ್  ಆಸ್ಪತ್ರೆಯಿಂದ ಮೆರವಣಿಗೆಯ ಮೂಲಕ ಗಾಂಧಿನಗರದ ಕಡೆಪಲ್ಲದಲ್ಲಿರುವ ಮನೆಗೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು.

  ಬ್ರಹ್ಮಕಲಶ, ಕಂಬಳ ಮುಂತಾದ ಸಂದಭ೯ಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುತಿದ್ದ ವಿಜೇಶ್ ಅಮೀನ್ ಅವರಿಗೆ ಇತ್ತೀಚೆಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

  ಶಾಸಕ ಉಮಾನಾಥ ಎ. ಕೋಟ್ಯಾನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದಶ೯ನ್ ಎಂ., ವಿಹಿಂಪ ವಿಭಾಗ ಕಾಯ೯ದಶಿ೯ ಶರಣ್ ಪಂಪ್ ವೆಲ್, ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ದಿನೇಶ್  ಪುತ್ರನ್ ಸಹಿತ ಹಿಂದೂ ಸಂಘಟನೆಯ ಕಾಯ೯ಕತ೯ರು, ಸ್ನೇಹಿತರು ಮತ್ತಿತರರು ಅಂತಿಮ ದಶ೯ನ ಪಡೆದು ಸಂತಾಪ ಸಲ್ಲಿಸಿದರು.

Post a Comment

0 Comments