ಆಕ್ಟಿವಾಗೆ ಢಿಕ್ಕಿ ಹೊಡೆದ ಕಾರು: ಶಿಕ್ಷಕಿ ಸಾವು
ಮೂಡುಬಿದಿರೆ: ಇಂದು ಸಂಜೆ ಶಿತಾ೯ಡಿ ಬಳಿ ಕಾರೊಂದು ಆಕ್ಟಿವಾ ಸ್ಕೂಟಿಗೆ ಡಿಕ್ಕಿಯಾದ ಪರಿಣಾಮವಾಗಿ ಆಕ್ಟಿವಾ ಸವಾರೆ, ಶಿಕ್ಷಕಿ ಮೃತಪಟ್ಟ ಘಟನೆ ನಡೆದಿದೆ.
ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿ ಸುಜಯ ಭಂಡಾರಿ (35) ಮೃತಪಟ್ಟವರು.
ಸುಜಯಾ ಅವರು ಶುಕ್ರವಾರ ಶಾಲೆಬಿಟ್ಟು ಮನೆಗೆ ಹೋಗುವಾಗ ಶಿರ್ತಾಡಿ ಸೇತುವೆ ಬಳಿ ಮೂಡುಬಿದಿರೆ ಕಡೆಯಿಂದ ಶಿರ್ತಾಡಿ ಕಡೆ ಬರುತ್ತಿದ್ದ ಹೋಂಡಾ ಸಿಟಿ ಕಾರು ಸುಜಯಾ ಅವರ ಆಕ್ಟಿವಾಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆಗೆಸೆಯಲ್ಪಟ್ಟ ಸುಜಯಾ ಅವರ ತಲೆಗೆ ತೀವ್ರ ತರದ ಗಾಯವಾಗಿತ್ತು.ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಮೂಡುಬಿದಿರೆ ನಾಗರಕಟ್ಟೆ ನಿವಾಸಿಯಾಗಿರುವ ಸುಜಯಾ ಅವರ ಪತಿ ವಿದೇಶದಲ್ಲಿದ್ದಾರೆ.ಅವರಿಗಿಬ್ಬರು ಅವಳಿಜವಳಿ ಮಕ್ಕಳಿದ್ದು ಮೂಡುಬಿದಿರೆ ಶಾಲೆಯಲ್ಲಿ ಕಲಿಯುತ್ತಿದ್ದಾರೆಂದು ತಿಳಿದು ಬಂದಿದೆ.
ಕಳೆದ ಕೆಲವು ವರ್ಷಗಳಿಂದ ಸುಜಯಾ ಅವರು ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 Comments