ವಿಭಿನ್ನ ಬಜೆಟ್ ಮಂಡಿಸಿದ ರಾಜ್ಯದ ಮುಖ್ಯಮಂತ್ರಿ : ಅಭಯಚಂದ್ರ ಶ್ಲಾಘನೆ

ಜಾಹೀರಾತು/Advertisment
ಜಾಹೀರಾತು/Advertisment

 ವಿಭಿನ್ನ ಬಜೆಟ್ ಮಂಡಿಸಿದ ರಾಜ್ಯದ ಮುಖ್ಯಮಂತ್ರಿ : ಅಭಯಚಂದ್ರ ಶ್ಲಾಘನೆ

ಮೂಡುಬಿದಿರೆ: ಕೇಂದ್ರ ಸರಕಾರವು ರಾಜ್ಯ ಸರಕಾರವನ್ನು ನಿರ್ಲಕ್ಷಿಸಿದ್ದರೂ ಸಿದ್ಧರಾಮಯ್ಯ ಅವರು ನಾಲ್ಕು ಸಾವಿರ ಕೋಟಿಗಳ ಬಜೆಟ್ ಮಂಡಿಸುವ ಮೂಲಕ ವಿಭಿನ್ನರೆನಿಸಿದ್ದಾರೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ  ಜೈನ್ ಅಭಿಪ್ರಾಯಪಟ್ಟರು.

 ಅವರು ರಾಜ್ಯದ ಮುಖ್ಯಮಂತ್ರಿ ಅವರು ಶುಕ್ರವಾರ ಮಂಡಿಸಿರುವ ಹದಿನಾರನೆ ಬಜೆಟ್ ಬಗ್ಗೆ ಮಾತನಾಡಿ ಬಡವರಿಗೆ ,ಜನಸಾಮಾನ್ಯರಿಗೆ ,ಸಮಾಜದ ಎಲ್ಲ ವರ್ಗದವರಿಗೂ ಸಹಕಾರಿಯಾಗಿದ್ದು ಇದು ಜನಮಾನಸದಲ್ಲಿ ನೆನಪಿನಲ್ಲುಳಿಯುವ ದಾಖಲೆಯ ಬಜೆಟ್ ಆಗಿದೆ  ಹೇಳಿದರು. 

  ದೇವಸ್ಥಾನಗಳ ಅಭಿವೃದ್ಧಿಗೆ, ಅರ್ಚಕರ ವೇತನ ವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಬೆಂಗಳೂರು ರಸ್ತೆ ಅಭಿವೃದ್ಧಿ, ಮೆಟ್ರೋ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಅಭಿನಂದನೀಯ ಎಂದು ಹೇಳಿದರು.

 ಕೆಳ ವರ್ಗದ ಜನರನ್ನು ಉದ್ದೇಶಿಸಿ  ಬಜೆಟ್ ಮಂಡಿಸಲಾಗಿದೆ ಎಂದ ಅವರು ಮುಸ್ಲಿಂ ಮಹಿಳೆಯರ ಶಿಕ್ಷಣ, ಜನರ ಅರೋಗ್ಯಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ.

ಕ್ರೈಸ್ತ ಅಭಿವೃದ್ಧಿ ನಿಗಮ ಮೂಲಕ ಪ್ರಗತಿಗೆ ಸರಕಾರ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.

 ಈವರೆಗೆ ಯಾವ ಮುಖ್ಯಮಂತ್ರಿಯೂ ಯಾವ ಅರ್ಥಸಚಿವರೂ ಹದಿನಾರನೇ ಬಜೆಟನ್ನು ಮಂಡಿಸಿಯೇ ಇಲ್ಲ. ಸಿದ್ಧರಾಮಯ್ಯ ಅವರು ಹೃದಯವಂತ ಮುಖ್ಯಮಂತ್ರಿ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ಹೇಳಿದ ಅವರು ದೂಷಣೆ ಮಾಡುವವರು ಮಾಡುತ್ತಲೇ ಇರಲಿ,ಅವರ ಕೆಲಸವೇ ದೂಷಣೆ ಮಾಡುವುದಾಗಿದೆ ಎಂದರು.

Post a Comment

0 Comments