ಪುರಸಭಾ ವಾಹನಕ್ಕೆ ಕಸ ನೀಡದವರಿಗೆ ದಂಡ ವಿಧಿಸಿ *ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 ಪುರಸಭಾ ವಾಹನಕ್ಕೆ ಕಸ ನೀಡದವರಿಗೆ ದಂಡ ವಿಧಿಸಿ  *ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಗ್ರಹ

ಮೂಡುಬಿದಿರೆ :  ಕಸ ಸಂಗ್ರಹ ಮಾಡುವ ಪುರಸಭೆಯ ವಾಹನಕ್ಕೆ ಕಸ ನೀಡದವರಿಗೆ ದಂಡ ವಿಧಿಸುವಂತೆ ಪುರಸಭಾ ಸದಸ್ಯರು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ್ದಾರೆ. 

  ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಶ್ವೇತಾ ಕುಮಾರಿ, ಸ್ವಾತಿ ಪ್ರಭು, ಪ್ರಸಾದ್ ಕುಮಾರ್,  ಅವರು ಮಾತನಾಡಿ ಪುರಸಭಾ ವ್ಯಾಪ್ತಿಯ ಕೆಲವು ಕಡೆ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ತುಂಬಿಸಿಕೊಂಡು ತಂದು ಬಿಸಾಡಿ ಹೋಗುತ್ತಿದ್ದಾರೆ ಇದರಿಂದಾಗಿ ಪುರಸಭೆ ಕೆಟ್ಟ ಬರುತ್ತದೆ ಈ ಪ್ರದೇಶಗಳಲ್ಲಿ  ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೆ ಉತ್ತಮ ಎಂದಾಗ ಸದಸ್ಯ ರಾಜೇಶ್ ನಾಯ್ಕ ಮಾತನಾಡಿ ಕೆಲವು ಮನೆಯವರು ಮತ್ತು ಫ್ಲ್ಯಾಟ್ ಗಳಲ್ಲಿ ವಾಸ ಮಾಡುವವರು ಕಸವನ್ನು ವಾಹನಕ್ಕೆ ನೀಡುತ್ತಿಲ್ಲ  ಇವರೆಲ್ಲಾ ಕಸವನ್ನು ತಿನ್ನುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಇಂತವರೆ ಕಸವನ್ನು ಹೊರಗೆ ಬಿಸಾಡುವುದು ಎಂದಾಗ ಧ್ವನಿ ಗೂಡಿಸಿದ ಹಿರಿಯ ಸದಸ್ಯ ಪಿ.ಕೆ.ಥೋಮಸ್ ವಾಹನಕ್ಕೆ ಕಸ ನೀಡಿದವರಿಗೆ ದಂಡ ವಿಧಿಸುವಂತೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಅವರಲ್ಲಿ ಆಗ್ರಹಿಸಿದರು. 


    ಇದರಲ್ಲಿ ನಮ್ಮವರದ್ದೂ ತಪ್ಪಿದೆ ಎಂದು ಮಾತು ಆರಂಭಿಸಿದ ಸದಸ್ಯ ಕೊರಗಪ್ಪ ಅವರು ಪೌರ ಕಾರ್ಮಿಕರು ಬೆಡ್ ಶೀಟ್ಗಳನ್ನು, ತಲೆ ದಿಂಬು, ಗಾಜಿನ ವಸ್ತುಗಳನ್ನು ಸ್ವೀಕರಿಸದೆ ಬಿಟ್ಟು ಹೋಗುತ್ತಿರುವ ಬಗ್ಗೆ ತಿಳಿಸಿದರು. ಈ ಬಗ್ಗೆ ಗಮನ ಹರಿಸುವುದಾಗಿ ಆರೋಗ್ಯ ನಿರೀಕ್ಷಕಿ ತಿಳಿಸಿದರು.


ಪುರಸಭೆಯು ಪರವಾನಿಗೆ ನೀಡಿರುವ ಮೀನು ಮಾರಾಟ ದ ಸ್ಟಾಲ್ ಗೆ ತೆರವುಗೊಳಿಸಲು ನೋಟೀಸ್ ನೀಡಿರುವ ಬಗ್ಗೆ ಸದಸ್ಯ ಪ್ರಸಾದ್ ಕುಮಾರ್ ಪ್ರಶ್ನಿಸಿ ಆಕ್ಷೇಪ ವ್ಯಕ್ತ ಪಡಿಸಿದರು.

 ಪುರಸಭೆ ವ್ಯಾಪ್ತಿಯ ಕೆಲವು ಕಡೆ ರಸ್ತೆ ಬದಿಗಳಲ್ಲಿ ಕಾಯ೯ಚರಿಸುತ್ತಿರುವ ಅನಧಿಕೃತ ಮೀನು ಮಾರಾಟ ಸ್ಟಾಲ್ ಗಳನ್ನು ತೆರವು ಮಾಡುವಂತೆ ಕಳೆದ ವಿಶೇಷ ಸಭೆಯಲ್ಲಿ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ, ಸುರೇಶ್ ಕೋಟ್ಯಾನ್ ಸಹಿತ ಮೂವರು ಆಗ್ರಹಿಸಿರುವ ಬಗ್ಗೆ ಮುಖ್ಯಾಧಿಕಾರಿ ಇಂದು ಎಂ. ಸಭೆಯ ಗಮನಕ್ಕೆ ತಂದರು .

ಲೋಕೋಪಯೋಗಿ ಇಲಾಖೆ, ಕನಾ೯ಟಕ ಮೀನುಗಾರಿಕಾ ನಿಗಮದ ಪ್ರಮಾಣ ಪತ್ರವನ್ನು ಸದರಿ ಕೌಂಟರ್ ನಡೆಸುವವರು ಪುರಸಭೆಗೆ ಹಾಜರುಪಡಿಸಬೇಕು ಅದರಂತೆ ಕ್ರಮ ಜರುಗಿಸಬೇಕು ಎಂದು ನಿಧ೯ರಿಸಲಾಯಿತು.

   ಮೂಡಾದವರು ಕನ್ವಷ೯ನ್ ಆದ ಜಾಗಕ್ಕೆ ಖಾತೆ ನೀಡಲು ವಿವಿಧ ವಲಯಗಳ ಕಾರಣವೊಡ್ಡುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಹಾಗಾಗಿ ಮಹಾ ಯೋಜನೆಯ ಜಾರಿಯಾಗುವ ವರೆಗೆ ಪರಿವರ್ತಿತ ಭೂಮಿಗೆ ಖಾತೆ ನೀಡುವ ಅಧಿಕಾರವನ್ನು ಪುರಸಭೆಗೇ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದೆಂದು ನಿಧ೯ರಿಸಲಾಯಿತು.

  ತಾಲೂಕು ಕೇಂದ್ರವಾಗಿರುವ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿ ಯವರು ಇಲ್ಲದಿರುವುದರಿಂದ ಜನ ಸಾಮಾನ್ಯರು ತೊಂದರೆಯನ್ನು ಅನುಭವಿಸುವಂತಾಗಿದೆ. ಈಗ ಇರುವ ದಂತ ವೈದ್ಯರಿಗೆ ಎಲ್ಲವನ್ನು ನಿಭಾಯಿಸಲು ಕಷ್ಟ ಸಾಧ್ಯವಾಗುತ್ತಿದೆ ಆದ್ದರಿಂದ ಇಲ್ಲಿ ಪೂರ್ಣಕಾಲಿಕ ವೈದ್ಯರು ಬೇಕೆಂದು ಜಿಲ್ಲಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸದಸ್ಯ ಕೊರಗಪ್ಪ ಆಗ್ರಹಿಸಿದರು. ಯಾರಾದರೂ ಮರಣ ಹೊಂದಿದರೆ ಪೋಸ್ಟ್ ಮಾಟ೯ಮ್ ಮಾಡಲು ಬೇರೆ ಕಡೆಯಿಂದ ಡಾಕ್ಟ್ರನ್ನು ಕರೆಸಿ ಕೊಳ್ಳುವಂತಹ ಪರಿಸ್ಥಿತಿ ಹಿಂದೆ ಎಂದು ಹೇಳಿದ ಪುರಂದರ ದೇವಾಡಿಗ ಅವರು ಮಾಕೆ೯ಟ್ ಬಳಿ ಇರುವ ಫಾಸ್ಟ್ ಫುಡ್ ಸ್ಟಾಲ್ ಗಳಿಂದ ಮಕ್ಕಳು, ಸಾವ೯ ಜನಿಕರು ತೊಂದರೆ ಅನುಭವಿಸುತ್ತಿರುವುದರಿಂದ ಸ್ಥಳಾಂತರಗೊಳಿಸಬೇಕೆಂದು ಹಿಂದಿನ ಸಭೆಯಲ್ಲಿ ತಿಳಿಸಿದ್ದರೂ ಸ್ಥಳಾಂತರ ಮಾಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇಂದಿರಾ ಕ್ಯಾಂಟೀನ್ ಬಳಿ ಜಾಗ ಗುರುತಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

  ಬೀದಿ ಬದಿ ವ್ಯಾಪಾರಸ್ಥರೆಂದು ಪುರಸಭೆಯ ಕೆಲ ಸಿಬ್ಬಂದಿಗಳು ಭಾಗಿಯಾಗಿ ಇದರ ಪ್ರಯೋಜನ ಪಡೆಯುತ್ತಿರುವ ಬಗ್ಗೆ ಸದಸ್ಯೆಯರಾದ ಸುಜಾತಾ, ಶ್ವೇತಾ ಅವರು ಸಭೆಯ ಗಮನಕ್ಕೆ ತಂದರು. 



ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಕೊರಗಪ್ಪ, ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಸುರೇಶ್ ಪ್ರಭು, ಜೊಸ್ಸಿ ಮಿನೇಜಸ್, ಆರೋಗ್ಯ ನಿರೀಕ್ಷಕಿ, ಎಂಜಿನಿಯರ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments