"ಮೈಸೂರು ಜೈನ್ ಮಿಲನ್ ಜಿನ ಭಜನೆಗೆ ಹೊಸ ರೂಪ ನೀಡಿದೆ : ಅನಿತಾ ಸುರೇಂದ್ರಕುಮಾರ್"
ಭಾರತೀಯ ಜೈನ್ ಮಿಲನ್ ನ ಮೈಸೂರು ಜೈನ್ ಮಿಲನ್ ಜಿನ ಭಜನೆಗೆ ಹೊಸ ರೂಪ ನೀಡಿದ್ದು, ಇದು ಶ್ರವಣಬೆಳಗೊಳದ ಕರ್ಮ ಯೋಗಿ ಚಾರು ಕೀರ್ತಿ ಭಟ್ಟಾರಕ ಶ್ರೀಗಳವರ ಕೊಡುಗೆ ಇದಾಗಿದೆ ಎಂದು ಭಾರತೀಯ ಜೈನ ಮಿಲನ್ ನ ರಾಶಿಯ ಉಪಾಧ್ಯಕ್ಷರು ಹಾಗೂ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು.ಅವರಿಂದು ಭಾರತೀಯ ಜೈನ್ ಮಿಲನ್ ವಲಯ - 8 ರ ಮೈಸೂರು ವಿಭಾಗ ಮಟ್ಟದ ಜಿನ ಭಜನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಮ್ಮ ಜಿನಭಜನೆಗಳು,ಜೈನ ಸಂಸ್ಕಾರ ,ಸಂಸ್ಕೃತಿಯನ್ನು ಉಳಿಸುವಂತಹ ಕೆಲಸ ಮೈಸೂರು ಜೈನ ಮಿಲನ್ ಮಾಡುತ್ತಿದೆ, ಇದಕ್ಕೆ ಶ್ರವಣಬೆಳಗೊಳದ ಕರ್ಮ ಯೋಗಿ ಚಾರು ಕೀರ್ತಿ ಭಟ್ಟಾರಕ ಶ್ರೀ ಗಳವರ ಕೊಡುಗೆ ಅವಿಸ್ಮರಣೆಯ, ಕಳೆದು ಬಾರಿ ಎಲ್ಲಾ ಜೈನ ಮಠಗಳಲ್ಲಿ ಜಿನಭಜನೆಗಳು ನಡೆದಿದ್ದು ,ಎಲ್ಲಾ ಭಟ್ಟಾರಕರು ಸಹಕಾರ ನೀಡಿದ್ದಾರೆ ,ಇದರಿಂದ ಜನ ಖುಷಿ ಪಡುತ್ತಿದ್ದಾರೆ ಎಂದರು. ಬಹುಮಾನ ಕ್ಕಾಗಿ ಹಾಡುವುದು ಬೇಡ ,ಸ್ಪರ್ಧೆಗಾಗಿ ಹಾಡಿ ಎಂದವರು, ಈ ಹಾಡಿನಿಂದ ಸ್ಪರ್ಧೆ ನೀಡಿ ಪುಣ್ಯ ಸಂಪಾದಿಸಿ ಎಂದರು.
ಈ ಸ್ಪರ್ಧೆಯಲ್ಲಿ ತೀರ್ಪುಗಾರರ ಮಾತು ಅಂತಿಮವಾಗಿದ್ದು, ಇದರಲ್ಲಿ ಮಧ್ಯ ಪ್ರವೇಶವಿಲ್ಲ ಯಾವುದೇ ಕಲ್ಲಿಗೆ ಪೆಟ್ಟು ನೀಡಿದಾಗ ಅದೊಂದು ಶಿಲ್ಪವಾಗಿ ಹೊಸ ರೂಪ ತಾಳಲಿದೆ ಎಂದವರು , ಮೈಸೂರಿನ ವಿಭಾಗ ಮಟ್ಟದ ಜಿನಸಂಸ್ಕಾರ ಯಶಸ್ಸು ಕಂಡಿದ್ದು ,ಕಳೆದ ಎಂಟು ವರ್ಷಗಳಿಂದ ಬಹಳಷ್ಟು ಬದಲಾವಣೆ ಕಂಡಿದೆ .ನಮ್ಮ ಎಲ್ಲಾ ಕ್ಷೇತ್ರದಲ್ಲಿ ಜೈನರೇ ಸಿಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದವರು.
"ಸ್ವಯಂ ಭೂ ಸ್ತೋತ್ರ". ರೂಪಕದ ತಯಾರಿ ನಡೆದಿದ್ದು ,ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು .ಭಜನೆಯಲ್ಲಿ ರತ್ನಾಕರವರ್ಣಿ ಸತಕ ಕೇಳಿದರೆ ಭಜನೆಯ ಸಾರಾ ತಿಳಿಯಲಿದೆ ಎಂದರು.
ಭಾರತೀಯ ಜೈನ ಮಿಲನ್ ವಲಯ-೮ ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್ ಮಾತನಾಡಿ ಬೆಂಗಳೂರಿನ ಚಕ್ರೇಶ್ವರಿ ಮಹಿಳಾ ಸಮಾಜದ ಕಾರ್ಯಕ್ರಮ ಅನಿತಾ ಸುರೇಂದ್ರ ಕುಮಾರ್ ರವರಿಗೆ ಪ್ರೇರಣೆಯಾಗಿ ಹೊಸ ತಿರುವ ನೀಡಿತು ,ಯುವತಿಯರನ್ನ ಒಂದುಗೂಡಿಸಿ ಚಿಂತನೆ ಮಾಡಿ ಜಿನಭಜನೆಗೆ ಹೊಸ ರೂಪ ನೀಡಿದರು, 2016 ರಿಂದ ಈವರೆಗೆ ಒಂಬತ್ತು ಬಾರಿ ಕಾರ್ಯಕ್ರಮ ಮೂಡಿ ಬಂದಿದ್ದು, ರಾಜ್ಯದಾದ್ಯಂತ 350 ತಂಡ ಗಳು ವಿಭಾಗ ಮಟ್ಟದಲ್ಲಿ ಪಾಲ್ಗೊಳ್ಳುತ್ತಿವೆ, ಈ ಕಾರ್ಯಕ್ರಮ ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ ಎಂದರು.
ಭಾರತೀಯ ಜೈನ್ ಮಿಲನ್ ವಲಯ ಎಂಟರ ಅಧ್ಯಕ್ಷರಾದ ಕೆ ಯುವರಾಜ್ ಭoಡಾರಿ ಮಾತನಾಡಿ ಜೈನ್ ಮಿಲನ್ ಹಾಗೂ ಜಿನ ಭಜನ ಸಂಬಂಧ ಉತ್ತಮವಾಗಿದೆ ಅನಿತಮ್ಮನವರ ಮಾರ್ಗದರ್ಶನದಲ್ಲಿ ಸಂಸ್ಕೃತಿ, ಸಂಸ್ಕಾರ ,ಸಂಪ್ರದಾಯಗಳ ಪಾಲನೆಗೆ ಜಿನ ಭಜನ ಕಾರ್ಯಕ್ರಮ ಮಾಡಿದ್ದಾರೆ, ಈಗ ಬಸದಿಗೆ ಬನ್ನಿ ಹೊಸ ಕಾರ್ಯಕ್ರಮ ಪ್ರಾರಂಭವಾಗಿದೆ ಸಮಾಜದ ಏಳಿಗೆ ಉಳಿವಿಗೆ ಈ ಕಾರ್ಯಕ್ರಮ ಮೂಡಿ ಬರುತ್ತಿದ್ದು ಸಂಘಟಿತರಾಗಿ ,ಸಮಾಜ ಬಲಪಡಿಸಬೇಕಿದೆ, ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಸುರೇಂದ್ರ ಹೆಗಡೆಯವರ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದರು.
ತೀರ್ಪುಗಾರರಾದ ಜ್ಯೋತಿ ನೇಮಿರಾಜ್ ಲಿಂಗನ ಮುಕ್ಕಿ ಮಾತನಾಡಿ ಅನಿತಮ್ಮನವರ ಚಿಂತನೆ ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಿಂದ ಜಿನ ಧರ್ಮದ ,ಜಿನ ಭಜನೆಗಳು ಮನೆಮನೆಗೆ ತಲುಪುತ್ತಿದೆ ,ಇದರಿಂದ ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯವಾಗಿದ್ದು, ಇದು ಧರ್ಮ ಪ್ರಭಾವನೆಗೂ ಸಹಕಾರಿಯಾಗಿದೆ ಎಂದರು.
ಭಾರತೀಯ ಜೈ ನ್ ಮಿಲನ್ ವಲಯ - 8. ರ ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು , ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಕಾರ್ಯಾಧ್ಯಕ್ಷ ರಾದ ಪದ್ಮಿನಿ ಪದ್ಮರಾಜ್, ಮೈಸೂರಿನ ಜೈನ ಬ್ರಾಹ್ಮಣ ಸಮಾಜದ ಲಕ್ಷ್ಮೀರಮಣ, ರತ್ನತ್ರಯ ಧಾರವಾಹಿಯ ನಾಗೇಂದ್ರ ಕುಮಾರ್, ಸ್ನೇಹ, ಸೌಮ್ಯ ಶ್ರೀಧರ್ ಜೈನ, ಹಾಸನದ
ಶರ್ಮಿಳ ಜಿನೇಶ್ ,ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎಸ್. ನಾಗರಾಜ್, ಕಾರ್ಯದರ್ಶಿ , ಎಂ. ರತ್ನರಾಜು, ಭಾರತೀಯ ಜೈನ್ ಮಿಲನ ರಾಷ್ಟ್ರೀಯ ವಿಭಾಗದ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್, ಜಿ. ಬಿ .ಚಂದ್ರಶೇಖರ್, ಇನ್ನಿತರ ಪದಾಧಿಕಾರಿಗಳು, ವಿವಿಧ ಜೈನ ಸಂಘಟನೆಗಳ ಅಧ್ಯಕ್ಷರು ,ಪದಾಧಿಕಾರಿಗಳು, ಉಪಸ್ಥಿತರಿದ್ದರು ಭಾರತೀಯ ಜೈನ ಮಿಲನ್ ವಲಯ -೮ ರ ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಎಸ್ ನಾಗರಾಜ್ ಸ್ವಾಗತಿಸಿದರು.ಅರುಣ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಮೈಸೂರು ವಿಭಾಗದ ನಿರ್ದೇಶಕರುಗಳಾದ ಎಚ್. ಡಿ. ಜಯಂದ್ರ , ಎಸ್.ವಿನೋದ್ ಕುಮಾರ್, ಅರುಣ್ ಪಂಡಿತ್. ಎಲ್ ,ವಿನೋದ್ ಬಾಕ್ಲಿ ವಾಲಾ, ರೂಪ ನಾಗರಾಜ್ , ಪ್ರಮೋದ್ ಕುಮಾರ್, ಎಸ್.ಎಸ್ .ಸೋಮಪ್ರಭ ,ಸಂಚಾಲಕರಾದ ಪದ್ಮ ಧನ್ಯ ಕುಮಾರ್, ಜಯಲಲಿತ ಅನಿಲ್, ಪುಷ್ಪ ರಾಜೇಂದ್ರ, ವಾಗಿಶ್ವರಿ ಪ್ರಕಾಶ್, ಅಂಜನ ಸುದರ್ಶನ್, ವಾಣಿ ರತ್ನಾಕರ್, ಸುಮ ಸುನಿಲ್, ಮಹಾವೀರ್ ಸುದರ್ಶನ್, ಮಹೀಂದ್ರ ,ಜಿನೇಂದ್ರ ಪ್ರಕಾಶ್ ಸೇರಿದಂತೆ ಜೈನ್ ಮಿಲನ್ ಮೈಸೂರು ,ಗಂಗೋತ್ರಿ ಜೈನ್ ಮಿಲನ್ ಮೈಸೂರು, ಮೈತ್ರಿ ಜೈನ್ ಮಿಲನ್ ಮೈಸೂರು. ವರ್ಧಮಾನ್ ಜೈನ್ ಮಿಲನ್ ಮೈಸೂರು. ಮಹಾವೀರ್ ಜೈನ್ ಮಿಲನ್ ಮೈಸೂರು, ಪ್ಯಾಲೇಸ್ ಸಿಟಿ ಜೈನ್ ಮಿಲನ್ ಮೈಸೂರು, ಸಂಯುಕ್ತ ಜೈನ್ ಮಿಲನ್ ಮೈಸೂರು, ಕಡಕೋಳ ಜೈನ್ ಮಿಲನ್ ,ತ್ರಿಲೋಕ್ ಜೈನ್ ಮಿಲನ್ ಹಾಸನ, ರತ್ನತ್ರೆಯ ಜೈನ್ ಮಿಲನ್ ವೈನಾಡು ಕೇರಳ ದಿಗಂಬರ ಜೈನ ಸಮಾಜ ಮೈಸೂರು, ಪದ್ಮಶ್ರೀ ಮಹಿಳಾ ಜೈನ ಸಮಾಜ ಮೈಸೂರು, ಜೈನ್ ಬ್ರಾಹ್ಮಣ ಸಮಾಜ ಮೈಸೂರು ,ಶಾಂತಿನಾಥ ಸೇವಾ ಸಮಿತಿ ಮೈಸೂರು ಸೇರಿದ್ದಂತೆ ಜೈನ ಸಂಘಟನೆಗಳ ಪದಾಧಿಕಾರಿಗಳು ಜೈನಮಿಲನ್ನು ಅಧ್ಯಕ್ಷರು ,ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ವಿಭಾಗದ ಎಲ್ಲ ನಿರ್ದೇಶಕರುಗಳು, ಸಂಚಾಲಕರುಗಳು ಮತ್ತು ಜೈ ನ್ ಮಿಲನ್ ಗಳ ಅಧ್ಯಕ್ಷರು ,ಕಾರ್ಯದರ್ಶಿಗಳು ,ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಸೇರಿದಂತೆ ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು.
ಜೆ ರಂಗನಾಥ ತುಮಕೂರು
0 Comments