ಸಂಘದವರಿಗೆ ಸಂಘರ್ಷ ಹೊಸದಲ್ಲ:ಒಂದು ವರ್ಗವನ್ನು ಖುಷಿ ಪಡಿಸಲು ಸಿಟಿ ರವಿ ಮೇಲೆ ಬ್ರಹ್ಮಾಸ್ತ್ರ:ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಆಕ್ರೋಶ
ನಾವು ಸಂಘ ಪರಿವಾರದ ಕಾರ್ಯಕರ್ತರು, ನಮಗೆ ಸಂಘರ್ಷ ಎನ್ನುವುದು ಹೊಸದಲ್ಲ. ಇದನ್ನು ಮೆಟ್ಟಿ ನಿಂತು ಮತ್ತೆ ಅಧಿಕಾರಕ್ಕೆ ಬರ್ತೇವೆ ಎಂದು ಮೂಲ್ಕಿ ಮೂಡುಬಿದಿರೆ ಭಾರತೀಯ ಜನತಾ ಪಾರ್ಟಿಯ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಪುತ್ರನ್,
"ಕಾಂಗ್ರೆಸ್ ಸರ್ಕಾರ ಗೂಂಡಾಗಿರಿಯ ಮಹತ್ವವನ್ನು ಹೆಚ್ಚಿಸುತ್ತಿದೆ. ಹಿಂದೊಮ್ಮೆ ಬಿಹಾರ, ಉತ್ತರ ಪ್ರದೇಶಗಳಲ್ಲಿ ಗೂಂಡಾಗಿರಿ, ಅನಾಚಾರ, ಅತ್ಯಾಚಾರಗಳು, ವಿಜೃಂಭಿಸುತ್ತಿದ್ದವು. ಆದರೆ ಈಗ ಅಲ್ಲಿನ ಸಮರ್ಥ ಸರ್ಕಾರಗಳು ಅದನ್ನು ಸದೆ ಬಡಿದಿವೆ. ಆದರೆ ದುರಾದೃಷ್ಟವಶಾತ್ ಕರ್ನಾಟಕದಲ್ಲಿ ಪೊಲೀಸ್ ರಾಜ್ ವ್ಯವಸ್ಥೆ ಅಘೋಷಿತವಾಗಿ ಜಾರಿಯಾಗಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಗುಂಡಾಗಳನ್ನು ನಿಯಂತ್ರಿಸುವ ಸಾಮರ್ಥ್ಯ ಇಲ್ಲದಾಗಿದೆ. ಸ್ವತಃ ಸರ್ಕಾರವೇ ಗುಂಡಾಗಳಿಗೆ ನೇರ ಬೆಂಬಲಗಳನ್ನು ನೀಡಿದೆ. ಶಾಸಕ ಸಿಟಿ ರವಿ ಅವರ ಮೇಲಿನ ದಾಳಿ ಅವರನ್ನು ಕುಗ್ಗಿಸಬೇಕೆನ್ನುವ ವ್ಯವಸ್ಥಿತ ಷಡ್ಯಂತ್ರಕ್ಕೆ ಸರ್ಕಾರ ಮುಂದಾಗಿದ್ದು ದುರಂತ. ಕಾಂಗ್ರೆಸ್ ಪಕ್ಷದೊಳಗಿನ ಕಚ್ಚಾಟವನ್ನು, ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟವನ್ನು ಮರೆಮಾಚಲು ಮತ್ತು ಒಂದು ಜಾತಿಯನ್ನು ಒಲೈಸಲು ಹಿಂದೂ ನಾಯಕರು ಮತ್ತು ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರವಿದೆ. ಸ್ವತಃ ಗೃಹ ಸಚಿವರಿಗೆ ಪೊಲೀಸ್ ಇಲಾಖೆಯಲ್ಲಿ ಯಾವ ರೀತಿಯ ನಡೆಗಳು ನಡೆಯುತ್ತಿವೆ ಎಂಬುದೇ ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಬೆಳಗಾವಿಯ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿಯವರು ನಿರ್ದೇಶನ ನೀಡಿದ್ದರೂ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಪೂರ್ಣವಾಗಿ ಕಾನೂನನ್ನು ಕೈಗೆತ್ತಿಕೊಂಡು ಹೊಸ ಪ್ರಹಸವನ್ನೇ ಸೃಷ್ಟಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆಯಾಗಿದೆ. ಆದರೆ ಇದನ್ನು ಸಹಿಸಿಕೊಂಡು ಕೂರುವ ಜಾಯಮಾನ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರದ್ದಲ್ಲ ಎಂಬುದು ಕಾಂಗ್ರೆಸ್ ಸದಾ ನೆನಪಿನಲ್ಲಿಡಬೇಕು. ಇಂದಲ್ಲ ನಾಳೆ ಮತ್ತೆ ನಮ್ಮ ಸರ್ಕಾರ ಬಂದೇ ಬರುತ್ತೆ. ಸಂಘರ್ಷ ನಮಗೇನು ಹೊಸತಲ್ಲ, ಮತ್ತೆ ಕಾಯುತ್ತೇವೆ. ನಮ್ಮ ಕಾರ್ಯಕರ್ತರಿಗೆ ಖಂಡಿತವಾಗಿಯೂ ನ್ಯಾಯ ಕೊಡುವ ಕೆಲಸವನ್ನು ಮಾಡುತ್ತೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
0 Comments