ಆಲಂಗಾರು ಈಶ್ವರ ಭಟ್ ಗೆ 'ಶಾರದಾನುಗ್ರಹ', ಎಕ್ಸಲೆಂಟ್ ಯುವರಾಜ್ ಜೈನ್ ಗೆ 'ಸಿರಿಪುರ' ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಪೊನ್ನೆಚ್ಚಾರಿ ಶ್ರಿ ಲಕ್ಷ್ಮೀ ವೆಂಕಟರಮಣ ದೇವಾಲಯದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದ ವತಿಯಿಂದ ಇಲ್ಲಿನ ಪೊನ್ನೆಚ್ಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಕಲ್ಯಾಣ ಮಂಟಪದಲ್ಲಿ ಎರಡು ದಿನ ಪೂಜಿಸಲ್ಪಟ್ಟ ಶಾರದೆಯ ವೈಭವದ ಶೋಬಾಯಾತ್ರೆಗೆ ಮೊದಲು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಶ್ರಿಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾರದಾ ಮಹೋತ್ಸವದಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಕೆ.ಶ್ರೀಪತಿ ಭಟ್, ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ, ಶಾರದಾ ಪೂಜಾ ಮಹೊತ್ಸವ ಹಾಗೂ ದಸರಾ ಮಹೋತ್ಸವದ ರೂವಾರಿ ಎಂ.ಪಿ.ಅಶೋಕ್ ಕಾಮತ್, ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮಕೃಷ್ಣ ಶಿರೂರು ಹಾಗೂ ನಾಗರತ್ನ ಶಿರೂರು ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments