ಮಂಗಳೂರಿಗೆ ಬಾಲಿವುಡ್ ಕಿಂಗ್ ಸಂಜಯ್ ದತ್:ಬಿರುವೆರ್ ಕುಡ್ಲ ಹುಲಿ ವೇಷದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿ

ಜಾಹೀರಾತು/Advertisment
ಜಾಹೀರಾತು/Advertisment

 ಮಂಗಳೂರಿಗೆ ಬಾಲಿವುಡ್ ಕಿಂಗ್ ಸಂಜಯ್ ದತ್:ಬಿರುವೆರ್ ಕುಡ್ಲ ಹುಲಿ ವೇಷದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿ

ಬಿರುವೆರ್ ಕುಡ್ಲ ಪ್ರತಿಷ್ಠಾನ ರಿಜಿಸ್ಟರ್ ಇವರ ಹತ್ತನೇ ವರ್ಷದ ಶಾತದಾ ಹುಲಿವೇಷದ ಊದು ಪೂಜೆ ಕಾರ್ಯಕ್ರಮಕ್ಕೆ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಆಗಮಿಸಲಿದ್ದಾರೆ ಎಂದು ಬಿರುವೆರ್ ಕುಡ್ಲ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 ಪ್ರತಿವರ್ಷದಂತೆ ಈ ವರ್ಷವೂ ಪ್ರತಿಷ್ಠಿತ ಬಿರುವೆರ್ ಕುಡ್ಲ ಸಂಘಟನೆಯು ಶಾರದಾ ಹುಲಿವೇಷ ಕಾರ್ಯಕ್ರಮ ನಡೆಸುತ್ತಿದ್ದು ದಿನಾಂಕ 12.10.20204 ರಂದು ಮಧ್ಯಾಹ್ನ ಎರಡು ಗಂಟೆಗೆ ಊದು ಪೂಜೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸಂಜಯ್ ದತ್ ಹಾಗೂ ಕಾರ್ಕಳ ಮೂಲದ ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಸಂಸ್ಥಾಪಕ ಉದಯ ಪೂಜಾರಿ ಬಳ್ಳಾಲ್‌ಬಾಗ್ ತಿಳಿಸಿದ್ದಾರೆ. 


ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಸನ್ನಿಧಿಯಲ್ಲಿ ಪ್ರತೀ ವರ್ಷ ನಡೆಯುವ ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಶಾರದಾ ಹುಲಿ ವೇಷ ಕಾರ್ಯಕ್ರಮ ನೀಡುವ ಬಿರುವೆರ್ ಕುಡ್ಲ ಸಂಘಟನೆ ಇದರಲ್ಲಿ ಒಟ್ಟುಗೂಡಿದ ಹಣವನ್ನು ಅನೇಕ ಅನಾರೋಗ್ಯ ಬಾಧಿತ ಕುಟುಂಬಗಳಿಗೆ, ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಹಾಗೂ ಸೂರು ಇಲ್ಲದ ಬಡ ಕುಟುಂಬಕ್ಕೆ ಮನೆ ಕಟ್ಟಲು ಸಹಾಯಾರ್ಥವಾಗಿ ನೀಡಲಾಗುತ್ತಿದೆ. ಈ ಬಾರಿ ಈ ಸಂಘಟನೆಯ 10ನೇ ವರ್ಷದ ಹುಲಿ ವೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು ಬಿರುವೆರ್ ಕುಡ್ಲ ಸಂಘಟನೆ ಶಾರದಾ ಹುಲಿವೇಷದ ದಶಮಾನೋತ್ಸವದ ಸಂಭ್ರಮದಲ್ಲಿದೆ.


ಈ ಕಾರ್ಯಕ್ರಮಕ್ಕೆ ಆಗಮಿಸಲಿರುವ ಖ್ಯಾತ ನಟ ಸಂಜಯ್ ದತ್ ನಂತರ ಇಲ್ಲಿಂದ ಕುದ್ರೋಳಿ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.

Post a Comment

0 Comments