ಕಾಂತಾವರದಲ್ಲಿ ಶಿಕ್ಷಕದ್ವಯರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಕಾಂತಾವರದಲ್ಲಿ ಶಿಕ್ಷಕದ್ವಯರಿಗೆ ಸನ್ಮಾನ


ಮೂಡುಬಿದಿರೆ : ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಕಾಂತಾವರದ  ಐವತ್ತೊಂದನೇ ನವರಾತ್ರಿ ನಾಡಹಬ್ಬವು ಮೂಲಾ ನಕ್ಷತ್ರ ಶುಭದಿನಂದು  ಕನ್ನಡ ಸಾಹಿತ್ಯ ಸಂಸ್ಕೃತಿ ಸಭಾ  ಸಂಭ್ರಮದಲ್ಲಿ ಕಾಂತೇಶ್ವರ ಪ್ರೌಢ ಶಾಲೆಯ ದೈಹಿಕ ನಿವೃತ್ತ ಶಿಕ್ಷಕ,  ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ತಂಡಗಳನ್ನು ಪ್ರತಿನಿಧಿಸಿದ ನಡಿಮಾರು ಗುತ್ತು ಪುಷ್ಪರಾಜ ಜೈನ್ ಹಾಗೂ ಕೆದಿಂಜೆ ವಿದ್ಯಾಭೋದಿನಿ ಶಾಲೆಯ ಮುಖ್ಯ ಶಿಕ್ಷಕ ಪೃಥ್ವಿರಾಜ್‌ ಬಲ್ಲಾಳ್ ರವರನ್ನು ಅವರ ಶೈಕ್ಷಣಿಕ ಜೀವನದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಾಯಿತು.


ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ.ಜೀವಂಧರ್ ಬಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮಗು,ಮನೆ, ಸಂಸ್ಕೃತಿ ಎಂಬ ವಿಷಯದಲ್ಲಿ ನಿಯೋಜಿತ ಭಾಷಣವನ್ನು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಯೋಗೀಶ್ ಕೈರೋಡಿ ಮಾಡಿದರು. 

 ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಬಾರಾಡಿ ಬೀಡು ಸುಮತಿ ಆರ್ ಬಲ್ಲಾಳ್, ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷ ಮನೀಷ್ ಶೆಟ್ಟಿ, ಎಸ್ ಡಿ ಎಂಸಿ ಅದ್ಯಕ್ಷ ಜಯಕರ ಕೋಟ್ಯಾನ್,    ಉಪಸ್ಥಿತರಿದ್ದರು. 

 ನಿವೃತ್ತ ಅಂಚೆ ಪಾಲಕ ರಮೇಶ್ ಶೆಟ್ಟಿಗಾರ್, ನಿವೃತ್ತ ಅಧ್ಯಾಪಕ ಧರ್ಮರಾಜ ಕಂಬಳಿ, ಲಿಂಗಪ್ಪ ದೇವಾಡಿಗ, ಜಯ ಎಸ್ ಕೋಟ್ಯಾನ್,  ಕಲಾವಿದ ಮಹಾವೀರ ಪಾಂಡಿ,  ಬಾಹುಬಲಿ ಜೈನ್, ಶಾಲಾ ಗೌರವ ಶಿಕ್ಷಕಿಯರು, ಭಾಗವಹಿಸಿದ್ದರು.


ಶಾಲಾ ಸಂಚಾಲಕ ಶ್ರೀಪತಿರಾವ್ ಸ್ವಾಗತಿಸಿದರು.

ಗೌ.ಶಿಕ್ಷಕಿ ಸಂದ್ಯಾ ವರದಿ ವಾಚಿಸಿದರು.

ಸುಕೇಶ್ ಕೋಟ್ಯಾನ್  ಕಾರ್ಯಕ್ರಮ ನಿರೂಪಿಸಿದರು.

ಅರುಣ್ ಭಟ್ ವಂದಿಸಿದರು.

ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ನಾಟಕ ಲವ ಕುಶ ಯಕ್ಷಗಾನ ಜರಗಿತು.

Post a Comment

0 Comments