ಜೀತೇಂದ್ರ ಕೊಟ್ಟಾರಿ, ಪತ್ನಿಯ ಮೇಲೆ ಹಲ್ಲೆಗೆ ಯತ್ನ:ಕಾಂಗ್ರೆಸ್ ಕಾರ್ಯಕರ್ತ, ತಿಮರೋಡಿ ಅಣ್ಣನ ಮಗ ಪೊಲೀಸ್ ಬಲೆಗೆ
ಮಂಗಳೂರಿನ ಲೋಟಸ್ ಪ್ರಾಪರ್ಟೀಸ್ ಬಿಲ್ಡರ್ ಸಂಸ್ಥೆಯ ಪಾಲುದಾರ ಬಿಲ್ಡರ್ ಹಾಗೂ ಬಿಜೆಪಿ ಮುಖಂಡರಾದ ಜಿತೇಂದ್ರ ಕೊಟ್ಟಾರಿ ಅವರ ಮನೆಗೆ ನುಗ್ಗಿ ಜಿತೇಂದ್ರ ಕೊಟ್ಟಾರಿ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿದ ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಅವರನ್ನು ಬರ್ಕೆ ಪೊಲೀಸ್ ಠಾಣಾ ಅಧಿಕಾರಿಗಳು ಬಂಧಿಸಿದ್ದಾರೆ.
ಸೌಜನ್ಯ ಪರ ಹೋರಾಟಗಾರ ನೆನೆಸಿಕೊಂಡ ಮಹೇಶ್ ಶೆಟ್ಟಿ ತಿಮರೋಡಿಯ ಅಣ್ಣನ ಮಗ ಕಾಂಗ್ರೆಸ್ ಕಾರ್ಯಕರ್ತನಾಗಿರುವ ತನುಷ್ ಶೆಟ್ಟಿ ಜಿತೇಂದ್ರ ಕೊಟ್ಟಾರಿಯವರ ಮತ್ತು ಅವರ ಪತ್ನಿ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆಗೆತ್ನಿಸಿದ್ದಾನೆ ಎಂಬ ದೂರು ಕೇಳಿ ಬಂದಿದೆ.
ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದದ್ದು ತನುಷ್ ಶೆಟ್ಟಿಗೆ ಕೋಪ ಬಂದಿದ್ದು ಕೊಟ್ಟಾರಿಯವರನ್ನು ಹಿಂಬಾಲಿಸಿಕೊಂಡು ಮನೆಯವರೆಗು ಬಂದು ಕೊಟ್ಟಾರಿ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು ಇಬ್ಬರನ್ನು ಸ್ಥಳದಿಂದಲೇ ಬಂಧಿಸಲಾಗಿದೆ.
0 Comments