*ನವರಾತ್ರಿ : ವ್ಯಾಪಾರೀಕರಣ ಮತ್ತು ಸಂಭವಿಸಬಹುದಾದ ಅಪಾಯಗಳು !*

ಜಾಹೀರಾತು/Advertisment
ಜಾಹೀರಾತು/Advertisment

 *ನವರಾತ್ರಿ : ವ್ಯಾಪಾರೀಕರಣ ಮತ್ತು ಸಂಭವಿಸಬಹುದಾದ ಅಪಾಯಗಳು !*

ಹಿಂದೂಗಳ ಉತ್ಸವಗಳಲ್ಲಿ ಪ್ರಸ್ತುತ ಅಯೋಗ್ಯ ಪ್ರವೃತ್ತಿಗಳು ಸೇರಿಕೊಂಡಿವೆ. ಉತ್ಸವಗಳ ವ್ಯಾಪಾರೀಕರಣವಾಗಿರುವುದರಿಂದ ಹಿಂದೂಗಳಿಗೆ ಮೂಲ ಶಾಸ್ತ್ರವು ಮರೆತುಹೋಗಿದೆ. ಹಿಂದೂಗಳ ಭಾವಿ ಪೀಳಿಗೆಯಂತೂ ಉತ್ಸವಗಳಲ್ಲಿ ನುಸುಳಿರುವ ಈ ಅಯೋಗ್ಯ ಪ್ರವೃತ್ತಿಗಳನ್ನೇ ಉತ್ಸವವೆಂದು ತಿಳಿದುಕೊಳ್ಳಲು ಆರಂಭಿಸಿದೆ. ಈ ಸ್ಥಿತಿಯು ಚಿಂತಾಜನಕವಾಗಿದೆ.


ನವರಾತ್ರಿಯಲ್ಲಿ ಪ್ರತಿದಿನ ವಿವಿಧ ಬಣ್ಣಗಳ ಸೀರೆ ಉಟ್ಟುಕೊಳ್ಳಬೇಕು ಹಾಗೂ ದೇವಿಯ ಮತ್ತು ನವಗ್ರಹಗಳ ಕೃಪೆಯನ್ನು ಪಡೆದುಕೊಳ್ಳಬೇಕು’ ಎಂಬ ಮೆಸ್ಸೆಜ್ ಸೋಷಿಯಲ್ ಮೀಡಿಯಾದ ಮೂಲಕ ಪ್ರಸಾರವಾಗುತ್ತಿದೆ. ಕೆಲವು ಮಹಿಳೆಯರಂತೂ ‘೯ ದಿನ ಯಾವ ಯಾವ ಮ್ಯಾಚಿಂಗ್ ಬಳೆಗಳು, ಓಲೆಗಳು, ಕೊರಳಿನ ಆಭರಣಗಳು ಬೇಕು ? ಯಾವ ಆಭರಣಗಳನ್ನು ತೊಡಬೇಕು ? ಹಾಗೂ ಅದರಿಂದ ದೇವಿಯ ಕೃಪೆ ಹೇಗೆ ಆಗುತ್ತದೆ ?’ ಎಂಬುದರ ಮೆಸ್ಸೆಜ್ ಕೂಡ ಬಂದಿದೆಯೆಂದು ಹೇಳಿದ್ದಾರೆ. ಧರ್ಮಶಾಸ್ತ್ರದಲ್ಲಿ ಹೀಗೇನಾದರೂ ಇದೆಯೇ ? 



*೯ ದಿನ ೯ ಬಣ್ಣದ ಸೀರೆಗಳನ್ನು ಧರಿಸಬೇಕೆಂಬುದು ಧರ್ಮಶಾಸ್ತ್ರದಲ್ಲಿ ಎಲ್ಲಿಯೂ ಇಲ್ಲ ಹಾಗೂ ಅದು ಮಾರ್ಕೇಟಿಂಗ್ ಕಂಪನಿಗಳು ಕಂಡುಹಿಡಿದ ಉಪಾಯವಾಗಿದೆ* : ೪ ವೇದ ೪ ಉಪವೇದ, ೬ ಶಾಸ್ತ್ರಗಳು, ೧೮ ಪುರಾಣಗಳು ಮತ್ತು ಉಪಪುರಾಣಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ, ದುರ್ಗಾಸಪ್ತಶತಿ ಮತ್ತು ದುರ್ಗಾ ಉಪಾಸನೆಯ ಗ್ರಂಥ, ಹೀಗೆ ಸುಮಾರು ೬೦ ಸ್ಮೃತಿಗ್ರಂಥಗಳಲ್ಲಿ ಎಲ್ಲಿಯೂ ನವರಾತ್ರಿಯಲ್ಲಿ ೯ ದಿನ ೯ ಬಣ್ಣಗಳ ಸೀರೆ ಉಡಬೇಕೆಂದು ಉಲ್ಲೇಖವಿಲ್ಲ.


ಒಗೆದು ಸ್ವಚ್ಛ ಮಾಡಿದ ವಸ್ತ್ರ ಧರಿಸಿರಿ (ಸ್ವಚ್ಛ ಅಂದರೆ ೯ ಗಜದ ಸೀರೆ ಇದ್ದರೆ ಉತ್ತಮ) ಎಂದು ಹೇಳಲಾಗಿದೆ. ನಿಮ್ಮಲ್ಲಿ ಯಾವ ಆಭರಣ ಇದೆಯೊ, ಅದನ್ನು ಧರಿಸಿರಿ. ಮ್ಯಾಚಿಂಗ್ ಬೇಕೆಂದೇನೂ ಇಲ್ಲ. ಮಾರ್ಕೇಟಿಂಗ್ ಕಂಪನಿಗಳು ವಿವಿಧ ಕಾಲ್ಪನಿಕ ಕಥೆಗಳನ್ನು ಕಟ್ಟಿ ಇತ್ತೀಚೆಗೆ ಪ್ರತಿ ಕ್ಷೇತ್ರದಲ್ಲಿ ಕಾಲು ಚಾಚಲು ಆರಂಭಿಸಿವೆ. ಆದ್ದರಿಂದ ಹಬ್ಬಗಳ ಪಾವಿತ್ರ್ಯತೆ ಕಡಿಮೆಯಾಗಿದೆ.


*ಡೇ ಸಂಸ್ಕೃತಿಯನ್ನು ಹೇರುವ ಕಂಪನಿಗಳು ಮತ್ತು ಅದಕ್ಕೆ ಆಹಾರವಾಗಿರುವ ಯುವಪೀಳಿಗೆ !* : ಕೆಲವು ವರ್ಷಗಳ ಹಿಂದೆ ‘ಡೇ ಸಂಸ್ಕೃತಿ’ ಭಾರತದಲ್ಲಿ ಇರಲಿಲ್ಲ. ಯಾವಾಗ ಗಿಫ್ಟ್ ವಸ್ತುಗಳ ಕಂಪನಿಗಳು ಮತ್ತು ಗ್ರೀಟಿಂಗ್ ಕಾರ್ಡ್ ತಯಾರಿಸುವ ಕಂಪನಿಗಳು ನಮ್ಮ ದೇಶಕ್ಕೆ ಬಂದವೋ, ಅಂದಿನಿಂದ ಈ ಡೇಗಳ ಹುಚ್ಚು ತಲೆಯೊಳಗೆ ನುಗ್ಗಿದೆ. ಈ ಕಂಪನಿಗಳು ಈ ದಿನಗಳಂದು ಕೋಟಿಗಟ್ಟಲೆ ರೂಪಾಯಿಗಳ ವ್ಯವಹಾರವನ್ನು ಮಾಡುತ್ತವೆ. ಇಂದಿನ ಅವಸ್ಥೆ ಹೇಗಿದೆಯೆಂದರೆ, ಮಕ್ಕಳಿಗೆ ಶ್ರೀಗಣೇಶ ಚತುರ್ಥಿ, ಗೋಕುಲಾಷ್ಟಮಿ ಯಾವಾಗ ಇದೆಯೆಂದು ಹೇಳಬೇಕಾಗುತ್ತದೆ, ಆದರೆ ‘ಡೇ’ ಮಾತ್ರ ನೆನಪಿನಲ್ಲಿರುತ್ತದೆ. ಗೋಕುಲಾಷ್ಟಮಿಯು ರಾಜಕೀಯ ನಾಯಕರ ಕೃಪೆಯಿಂದ ಡಿಜೆಮಯ ಹಾಗೂ ಮದ್ಯ-ಮಯವಾಗಿದೆ. ತಾಯಿಯ ಉತ್ಸವವಾದರೂ (ನವರಾತ್ರ್ಯುತ್ಸವ) ಹಾಗಾಗಬಾರದು, ಎಂದು ಅನಿಸುತ್ತದೆ.


ಪ್ರತಿಯೊಂದು ಪ್ರಾಂತದ ಒಂದು ವೈಶಿಷ್ಟ್ಯವಿರುತ್ತದೆ, ಪರಂಪರೆ ಇರುತ್ತದೆ, ಅವುಗಳನ್ನು ಜೋಪಾನ ಮಾಡಬೇಕು, ಇಲ್ಲದಿದ್ದರೆ, ಕೆಲವು ವರ್ಷಗಳಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು ನವರಾತ್ರಿಯೆಂದರೆ ಡಿಜೆಯೊಂದಿಗೆ ಗರಬಾ, ದಾಂಡಿಯಾ ಆಡುವುದು ಎಂದಷ್ಟೇ ತಿಳಿದುಕೊಳ್ಳುವರು. ನವರಾತ್ರಿಯು ಮಾತೃಶಕ್ತಿಯ ಉತ್ಸವವಾಗಿದೆ, ಎಂಬುದು ಅವರಿಗೆ ತಿಳಿಯುವುದೇ ಇಲ್ಲ.


ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಇದರಲ್ಲಿ ಸಾಕಷ್ಟು ಗೊಂದಲ ನಿರ್ಮಾಣ ಮಾಡುತ್ತವೆ, ಕಲಬೆರಕೆ ಮಾಡುತ್ತವೆ ಹಾಗೂ ಹೊಸ ಪದ್ಧತಿಯನ್ನು ನಿರ್ಮಾಣ ಮಾಡುತ್ತವೆ. ಅದಕ್ಕೆ ಯಾವುದೇ ಅಡಿಪಾಯ ಇರುವುದಿಲ್ಲ, ಶಾಸ್ತ್ರೀಯ ಆಧಾರ ಇರುವುದಿಲ್ಲ ಹಾಗೂ ಅದರಲ್ಲಿ ದೇವಿಯ ಉಪಾಸನೆಗೆ ಸ್ವಲ್ಪವೂ ಮಹತ್ವ ಇರುವುದಿಲ್ಲ.


ಚಂಡ ಮುಂಡ, ಶುಂಭ ನಿಶುಂಭ, ರಕ್ತಬೀಜ ಮುಂತಾದ ರಾಕ್ಷಸರನ್ನು ವಧಿಸಿ ಅವರ ಉಪಟಳವನ್ನು ಶಮನಗೊಳಿಸಿ ಜಗದಂಬೆಯು ವಿಶ್ರಾಂತಿ ತೆಗೆದುಕೊಂಡಿರುವ ಸಮಯವೆಂದರೆ ನವರಾತ್ರಿ ಆಗಿದೆ. ಈ ಯುದ್ಧದ ದಣಿವನ್ನು ಆರಿಸಲು ದೇವಿ ನೃತ್ಯ ಮಾಡಿದಳು, ಎಂದು ಪುರಾಣದಲ್ಲಿ ಉಲ್ಲೇಖವಿದೆ. ಈ ಸಮಯದಲ್ಲಿ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಈ ಮೂರೂ ರೂಪದ ದೇವಿಯ ಸೇವೆ ಮಾಡುವುದು ನಮ್ಮ ಪರಂಪರೆಗನುಸಾರ ನಂದಾದೀಪ, ಮಾಲಾಬಂಧನ ಇತ್ಯಾದಿ ಮೂಲಕ ಆಚರಿಸಬೇಕು. ಮಕ್ಕಳಿಂದ ಸರಸ್ವತಿದೇವಿಯ ಉಪಾಸನೆಯನ್ನು ವಿದ್ಯೆ ಮತ್ತು ಬುದ್ಧಿ ಲಾಭಕ್ಕಾಗಿ ಮಾಡಿಸಿಕೊಳ್ಳಬೇಕು. ಧನಧಾನ್ಯ ಸಮೃದ್ಧಿಗಾಗಿ ಮಹಾಲಕ್ಷ್ಮೀಯ ಉಪಾಸನೆ ಮಾಡಬೇಕು ಹಾಗೂ ಶತ್ರುಸಂಹಾರಕ್ಕೆ ಸಾಮರ್ಥ್ಯಪ್ರಾಪ್ತಿಗಾಗಿ ಮಹಾಕಾಳಿಯ ಉಪಾಸನೆ ಮಾಡಬೇಕು.


– ವೇದಮೂರ್ತಿ ಭೂಷಣ ದಿಗಂಬರ್ ಜೋಶಿ, ವೆಂಗುರ್ಲೆ

Post a Comment

0 Comments