ಆಳ್ವಾಸ್ ನಲ್ಲಿ ತುಳು ಜಾನಪದ ಕಮ್ಮಟಕ್ಕೆ ಚಾಲನೆ
ಮೂಡುಬಿದಿರೆ: ತುಳುವಿನಲ್ಲಿ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಜೀವನಾನುಭವ ಮತ್ತು ಅಧ್ಯಯನದ ಅನುಭವ ಅಗತ್ಯವಿದೆ ಅಧ್ಯಯನವಿಲ್ಲದೆ ಅವಸರದ ಪ್ರತಿಕ್ರಿಯೆ ಸರಿಯಲ್ಲ ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.
ಅವರು ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ತುಳು ಜಾನಪದ ಕುಣಿತ ಪ್ರಹಸನ ಹಾಗೂ ಪಾಡ್ಕನ ತರಬೇತಿಯನ್ನು ಉದ್ಘಾಟಿಸಿ ಮಾತಾನಾಡಿದರು.
ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಮಿಂಚಿ ಮರೆಯಾಗುವ ಬದಲು ಆಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ ಭಾಷೆ ಮತ್ತು ಸಂಸ್ಕೃತಿಗೆ ಅವಿನಾವಭಾವ ಸಂಬಂಧವಿದೆ ಹತ್ತು ಮಂದಿ ಸೇರಿ ನಡೆಸಿದ ತೀರ್ಮಾನಕ್ಕೆ ತುಳು ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ ತುಳು ಎಂದರೆ ಮನೋಭಾವ ಎಂದರು.
ಲೀಲಾಧರ ಕರ್ಕೇರಾ ಕುಸುಮ ಸಾಲ್ಯಾನ್ ಸುಧೀಂದ್ರ ಶಾಂತಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದರು.
ಕೇಂದ್ರದ ಸಂಯೋಜಕ ಡಾ. ಯೋಗಿಶ್ ಕೈರೋಡಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಜೋಶ್ವಿತಾ ಸ್ವಾಗತಿಸಿದರು. ಸೌಮ್ಯ ಕುಂದರ್ ವಂದಿಸಿದರು. ಅನಿಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
0 Comments