ಇರುವೈಲು ಹಾಲು ಉತ್ಪಾದಕರ ಸಂಘದ ಸಾಮಾನ್ಯ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಇರುವೈಲು ಹಾಲು ಉತ್ಪಾದಕರ ಸಂಘದ ಸಾಮಾನ್ಯ ಸಭೆ


ಮೂಡುಬಿದಿರೆ: ಇರುವೈಲು ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಜಯರಾಮ ಬಂಗೇರ ಅವರ ಅಧ್ಯಕ್ಷತೆಯಲ್ಲಿ  ನಡೆಯಿತು.

ಸಂಘದ ನಿರ್ದೇಶಕ ಹಾಗೂ ಹೊಸಬೆಟ್ಟು ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಜೇಶ್ ಪೂಜಾರಿ ಕಾಳೂರು ಅವರನ್ನು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಅವರು ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು.

 ಸಂಘದಲ್ಲಿ ಅತೀ ಹೆಚ್ಚು ಹಾಲು ಹಾಕಿರುವ ದಿನೇಶ್ ಶೆಟ್ಟಿ,   ಶೆಟ್ಟಿ, ಶುಭಕರ ಕಾಜವ, ಹಾಗೂ ಉತ್ತಮ ಗುಣಮಟ್ಟದ ಹಾಲು ನೀಡಿದ ರೇಖಾ ಅರ್ಬಿ, ಪ್ರಶಾಂತ ಶೆಟ್ಟಿ, ಲಕ್ಷ್ಮಣ ಪೂಜಾರಿ ಅವರುಗಳನ್ನು ಗೌರವಿಸಲಾಯಿತು.

ಸಂಘದ ನಿರ್ದೇಶಕ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತಿಮ್ಮಪ್ಪ ಪೂಜಾರಿ ವರದಿ ವಾಚಿಸಿದರು. ಸಂಘದ ನಿರ್ದೇಶಕ ಶುಭಕರ ಕಾಜವ ಧನ್ಯವಾದಗೈದರು.

Post a Comment

0 Comments