ಜೇಸಿಐನಿಂದ ರಾಜ್ಯಮಟ್ಟದ ಟಿವಿ ಟ್ರೈನಿಂಗ್
ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ಮತ್ತು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ 3 ದಿನದ ರಾಜ್ಯ ಮಟ್ಟದ ಟಿವಿ ಟ್ರೈನಿಂಗ್ ನಡೆಯಿತು.
ಸೀನಿಯರ್ ಚೇಂಬರಿನ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಟ್ರೈನಿಂಗ್ ನ್ನು ಉದ್ಘಾಟಿಸಿ ಮಾತನಾಡಿ
ಟೆಕ್ನಿಷಿಯನ್ ಗಳು ತಾಂತ್ರಿಕ ಕೌಶಲ್ಯವನ್ನು ದಿನೇ ದಿನೇ ಅಭಿವೃದ್ಧಿಗೊಳಿಸಬೇಕು ಮತ್ತು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದರು.
ತರಬೇತಿಯ ಮುಖ್ಯ ತರಬೇತುದಾರ ತನ್ಮಯ್ ಟೆಕ್ನಾಲಜಿ ಮತ್ತು ಜೆಸಿಐ ಮೂಡುಬಿದಿರೆಯ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜೆಸಿಐ ಐಪಿಪಿ ಸುನಿಲ್, ಹಿರಿಯ ಸದಸ್ಯರಾದ ನವೀನ್ ಟಿ. ರ್ ಉಪಸ್ಥಿತರಿದ್ದರು.
ಮೊದಲ ದಿನದ ಮದರ್ ಬೋರ್ಡ್ ಮತ್ತು ಪವರ್ ಸಪ್ಲೈ ವಿಭಾಗದ ಟ್ರೈನಿಂಗ್ ನೀಡಲಾಯಿತು.
ರಾಜ್ಯದ 25ಕ್ಕೂ ಹೆಚ್ಚು ವಿವಿಧ ಭಾಗದ ಟೆಕ್ನಿಷಿಯನ್ಗಳು ಭಾಗವಹಿಸಿದರು.
0 Comments