ಮೂಡುಬಿದಿರೆ: ಬಿಜೆಪಿ ಮೂಡುಬಿದಿರೆ ಮಂಡಲದ ಕಾರ್ಯಕಾರಿಣಿ ಸಭೆ, ನೂತನ ಸಂಸದ, ಪುರಸಭಾಧ್ಯಕ್ಷರಿಗೆ ಅಭಿನಂದನೆ
ಮೂಡುಬಿದಿರೆ: ಬಿಜೆಪಿ ಮುಲ್ಕಿ -ಮೂಡುಬಿದಿರೆ ಮಂಡಲದ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮವು ಭಾನುವಾರ ಕನ್ನಡ ಭವನದಲ್ಲಿ ನಡೆಯಿತು.
ಬಿಜೆಪಿ ರಾಜ್ಯ ಕಾರ್ಯದರ್ಶಿ, ಸಂಸದ ಬೃಜೇಶ್ ಚೌಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಕ್ಷದ ಕಾರ್ಯಕರ್ತರು ಒಗ್ಗಟಿನಿಂದ ಕೆಲಸ ಮಾಡಬೇಕು ಎಂದ ಅವರು ಪಕ್ಷ ಸಂಘಟನೆಗೆ ಬೇಕಾದ ಹಲವಾರು ಮಾಹಿತಿಗಳನ್ನು ಕಾರ್ಯಕರ್ತರಿಗೆ ತಿಳಿಸಿದರು.
ನೂತನ ಸಂಸದ ಬೃಜೇಶ್ ಚೌಟ ಹಾಗೂ ಪುರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಯಶ್ರೀ ಕೇಶವ್ ಮತ್ತು ನಾಗರಾಜ ಪೂಜಾರಿ (ಮೂಡುಬಿದಿರೆ) ಮತ್ತು ಸತೀಶ್ ಅಂಚನ್ (ಮೂಲ್ಕಿ ನಗರಸಭೆ)ಅವರನ್ನು ಅಭಿನಂದಿಸಲಾಯಿತು
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಉಮಾನಾಥ ಎ.ಕೋಟ್ಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಸುನಿಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಜಯಂತ್ ಕೋಟ್ಯಾನ್, ಜಿ.ಪ್ರಧಾನ ಕಾರ್ಯದರ್ಶಿ ಯತೀಶ್, ಉಸ್ತುವಾರಿ ಚಂದ್ರಶೇಖರ ರಾವ್, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರ.ಕಾರ್ಯದರ್ಶಿ ರಂಜಿತ್ ಪೂಜಾರಿ, ಹರಿಪ್ರಸಾದ್ ಶೆಟ್ಟಿ ಸಹಿತ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿದ್ದರು.
0 Comments