ಬಿಎಸ್ಎನ್ಎಲ್ ಎಲ್ಲರಿಗೂ ಸಂಪರ್ಕ ಸಿಗುವ ನೆಟ್ವರ್ಕ್ ಆಗಿ ಪರಿವರ್ತನೆ ಆಗಲಿ:ಕೋಟ ಆಶಯ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 217 ಬಿಎಸ್ಎನ್ಎಲ್ ಮೊಬೈಲ್ ಟವರ್ ಗಳಿದ್ದು ಅದರಲ್ಲಿ 29 ಟವರ್‌ಗಳು 4ಜಿಯಾಗಿ ಮೇಲ್ದರ್ಜೆಗೇರಿದೆ . 217ರಲ್ಲಿ ಇತ್ತೀಚಿನ ದಿನಗಳಲ್ಲಿ ಸುಮಾರು 63 ಟವರ್ ಕೇಂದ್ರಗಳಲ್ಲಿ ಬ್ಯಾಟರಿ ಸೌಲಭ್ಯ ಅಳವಡಿಸಿದ್ದು ಉಳಿದ ಸುಮಾರು 154 ಟವರ್ ಗಳಿಗೆ ಒಂದೆರಡು ತಿಂಗಳಲ್ಲೇ ಬ್ಯಾಟರಿ ಅಳವಡಿಕೆ ಪೂರ್ಣಗೊಳಿಸಲಾಗುವುದು. 28 ಹೊಸ ಟವರ್ ಗಳ ಪೈಕಿ 10 ಟವರ್ ಗಳು ಅರಣ್ಯ ಇಲಾಖೆಯ ಅನುಮೋದನೆಗಾಗಿ ಈಗಾಗಲೇ ಪ್ರಸ್ತಾಪನೆ ಸಲ್ಲಿಕೆಯಾಗಿದೆ. ಉಳಿದ 18ರಲ್ಲಿ 16 ಸಿದ್ಧವಾಗಿದ್ದು ಎರಡು ಮಾತ್ರ ಪೂರ್ಣಗೊಳ್ಳಲು ಬಾಕಿ ಇದೆ. ನೂತನ ವೈಫೈಗಳ ನಿರ್ಮಾಣ ನೀಡುವುದರ ಮೂಲಕ ಹೊಸ ತಂತ್ರಜ್ಞಾನದೊಂದಿಗೆ ಹೆಚ್ಚು ಸಂಪರ್ಕ ಸಿಗುವ ವ್ಯವಸ್ಥೆಗಳಿಗೆ ಬಿಎಸ್ಎನ್ಎಲ್ ಅಡವಡಿಕೆಗೊಳ್ಳುತ್ತಿದೆ. ನಮ್ಮ ಎಲ್ಲ ಬಿಎಸ್ಎನ್ಎಲ್ ಸಿಬ್ಬಂದಿ ವರ್ಗದವರು ಅತ್ಯಂತ ಪರಿಶ್ರಮ ಹಾಕಿ ಚಿಕ್ಕಮಗಳೂರು ಜಿಲ್ಲೆಯ ಗ್ರಾಹಕರಿಗೆ ಉತ್ತಮ ಸೇವೆ ಕೊಡಲು ಶ್ರಮವಹಿಸಿ ದುಡಿಯಬೇಕು ಮತ್ತೆ ಯಾವುದೇ ಕಾರಣಕ್ಕೆ ಖಾಸಗಿ ಸಂಸ್ಥೆಗಳಿಗಿಂತಲೂ ಹೆಚ್ಚಾಗಿ ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರ ವಿಶ್ವಾಸವನ್ನು ಗೆಲ್ಲಬೇಕಾದ ಅವಶ್ಯಕತೆಗಳಿದೆ ಈ ಹಿನ್ನೆಲೆಯಲ್ಲಿ ಇಡೀ ಬಿಎಸ್ಎನ್ಎಲ್ ತಂಡ ಒಟ್ಟಾಗಿ ದುಡಿದು ಶ್ರಮವಹಿಸಿ ಬಿಎಸ್ಎನ್ಎಲ್ ಸಂಪರ್ಕವನ್ನು ಅಣಿಗೊಳಿಸಬೇಕಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಎಸ್ಎನ್ಎಲ್ ಗ್ರಾಹಕರ ಕರೆದ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಎಚ್ಚರಿಕೆ ಮಾತುಗಳೊಂದಿಗೆ ತಿಳುವಳಿಕೆಯನ್ನು ಹೇಳಿ ಬಿಎಸ್ಎನ್ಎಲ್ ಸಂಪರ್ಕ ಹೆಚ್ಚಿಸುವಂತೆ ಆಗ್ರಹಿಸಿದರು.
ಕೆಲವೇ ದಿನಗಳಲ್ಲಿ ಬಿಎಸ್ಎನ್ಎಲ್ ಟವರ್ ಗಳ ಸಂಪರ್ಕವನ್ನು ಪೂರ್ಣಗೊಳಿಸಿ ಬ್ಯಾಟರಿ ಮತ್ತಿತರ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿದೂಗಿಸಿ ಗ್ರಾಹಕರಿಗೆ ಹೆಚ್ಚು ಸೇವೆ ಕೊಡಬೇಕಾದ ಅವಶ್ಯಕತೆಗಳನ್ನು ವಿವರಿಸಿ ಅನಿವಾರ್ಯ ಮತ್ತು ಅಗತ್ಯವಿದ್ದರೆ ಕೆಲವು ಟವರ್ ಗಳ ನಿರ್ವಹಣೆಗೋಸ್ಕರ ವೆಚ್ಚವನ್ನು ಗ್ರಾಮ ಪಂಚಾಯಿತಿಗೆ ಕೊಟ್ಟು ಪಂಚಾಯತ್ ಮೂಲಕ ನಿರ್ವಹಣೆ ಮಾಡುಬಹುದಾ ಅನ್ನುವುದರ ಬಗ್ಗೆ ಯೋಚನೆ ಮಾಡಲು ಸಂಸದರು ಸಲಹೆ ನೀಡಿದರು. ಒಟ್ಟಾರೆ ಇನ್ನು ಮೂರೇ ತಿಂಗಳಲ್ಲಿ ಉತ್ತಮವಾದ ಬಿಎಸ್ಎನ್ಎಲ್ ಸೇವೆ ನೀಡಲು ಸಂಸದರು ಸೂಚನೆ ನೀಡಿದ್ದು ಗ್ರಾಹಕರ ಬಳಕೆದಾರರಲ್ಲಿ ವಿಶ್ವಾಸವನ್ನು ಮೂಡಿಸುವಂತಹ ವಾತಾವರಣ ನಿರ್ಮಾಣ ಮಾಡಿದಂತಾಗಿದೆ.
ಸಂಸದರ ಈ ಸಭೆಯಲ್ಲಿ BSNL AGM ಗೋಪಾಲಕೃಷ್ಣ ,AGM ಜೋಸೆಫ್, ಮತ್ತು ಚಂದ್ರಹಾಸ್, ಕೈಗಾರಿಕೆ ಇಲಾಖೆ ರವಿಪ್ರಸಾದ್,ಮೆಸ್ಕಾಂ SE ಲೋಕೇಶ್,ದೇವರಾಜ್ ಶೆಟ್ಟಿ,ದೀಪಕ್ ದೊಡ್ಡಯ್ಯ ಹಾಗೂ ಇತರರು ಉಪಸ್ಥಿತರಿದ್ದರು.
0 Comments